Good News: ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ರೂ.10 ರಷ್ಟು ಇಳಿಕೆ ಮಾಡಲು ತೈಲ ಕಂಪನಿಗಳಿಗೆ ಮೋದಿ ಸರ್ಕಾರದ ಸೂಚನೆ

Edible Oil Price Cut News: ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯ ನಡುವೆಯೇ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಗಗನಮುಖಿಯಾಗಿರುವ ಖಾದ್ಯ ತೈಲ ಬೆಲೆಗಳು ಮುಂಬರುವ ವಾರದಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ. ಖಾದ್ಯ ತೈಲ ಬೆಲೆಗೆ ಸಂಬಂಧಿಸಿದಂತೆ ಕಂಪನಿಗಳೊಂದಿಗೆ ಇಂದು ನಡೆದ ಆಹಾರ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ಎರಡು ವಾರಗಳಲ್ಲಿ 10 ರೂಪಾಯಿ ಕಡಿತಗೊಳಿಸುವಂತೆ ತೈಲ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಜಾಗತಿಕ ಬೆಲೆ ಕುಸಿತದ ಮಧ್ಯೆ ಅಡುಗೆ ಎಣ್ಣೆಯ ಚಿಲ್ಲರೆ ಬೆಲೆಯಲ್ಲಿ ಮತ್ತಷ್ಟು ಇಳಿಕೆಯ ಸಾಧ್ಯತೆಯನ್ನು ಚರ್ಚಿಸಲು ಆಹಾರ ಸಚಿವಾಲಯವು ಕಳೆದ ತಿಂಗಳು ಖಾದ್ಯ ತೈಲ ಉತ್ಪಾದಕ ಮತ್ತು ವ್ಯಾಪಾರ ಸಂಸ್ಥೆಗಳ ಸಭೆಯನ್ನು ಕರೆದಿತ್ತು.

ಕಳೆದ ಮೇ ತಿಂಗಳ ನಂತರ ನಡೆದ ಮೂರನೇ ಸಭೆ ಇದಾಗಿದೆ. ವಿಶೇಷವಾಗಿ ತಾಳೆ ಎಣ್ಣೆಯ ಅತಿದೊಡ್ಡ ರಫ್ತುದಾರ ಇಂಡೋನೇಷ್ಯಾದಿಂದ ಸಾಗಣೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಸೂರ್ಯಕಾಂತಿ ಮತ್ತು ಸೋಯಾ ಎಣ್ಣೆಗಳ ಪೂರೈಕೆಯು ಸರಾಗವಾಗಿದೆ. ಇದರಿಂದಾಗಿ ಜಾಗತಿಕವಾಗಿ ಖಾದ್ಯತೈಲ ಬೆಲೆಯಲ್ಲಿ ಇಳಿಕೆಯಾಗಿದೆ.

ಇದನ್ನೂ ಓದಿ-FRP for Sugarcane: ಪಿಎಂ ಕಿಸಾನ್ 12ನೇ ಕಂತು ಬಿಡುಗಡೆಗೂ ಮುನ್ನ ಕಬ್ಬು ಬೆಳೆಗಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ?

ಉದ್ಯಮವು ಗ್ರಾಹಕರಿಗೆ ಲಾಭವನ್ನು ವರ್ಗಾಯಿಸಬೇಕಾಗುತ್ತದೆ ಎಂದು ಆಹಾರ ಸಚಿವಾಲಯದ ಮೂಲಗಳು ಎಫ್‌ಇಗೆ ತಿಳಿಸಿವೆ. ಖಾದ್ಯ ತೈಲದ ಚಿಲ್ಲರೆ ಬೆಲೆಯಲ್ಲಿ ಇನ್ನೂ ಹೆಚ್ಚಿನ ಇಳಿಕೆಗೆ ಅವಕಾಶವಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ-ಮಧ್ಯಪ್ರದೇಶದಲ್ಲೊಬ್ಬ ಕೋಟ್ಯಾಧಿಪತಿ ಕ್ಲರ್ಕ್ : ದಾಳಿ ವೇಳೆ ಪತ್ತೆಯಾಯಿತು ಕಂತೆ ಕಂತೆ ನೋಟು

ಕಳೆದ ತಿಂಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ಖಾದ್ಯ ತೈಲೋತ್ಪಾದಕರು ಮತ್ತು ವ್ಯಾಪಾರ ಸಂಘಗಳೊಂದಿಗಿನ ಸಭೆಯಲ್ಲಿ, ಜಾಗತಿಕ ಬೆಲೆಗಳನ್ನು ಮೃದುಗೊಳಿಸುವ ದೃಷ್ಟಿಯಿಂದ ಪ್ರತಿ ಲೀಟರ್‌ಗೆ ಕನಿಷ್ಠ 15 ರೂ.ಗಳಷ್ಟು ಕಡಿಮೆಗೊಳಿಸುವಂತೆ ಕಂಪನಿಗಳಿಗೆ ಸೂಚನೆ ನೀಡಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  



Source link

Leave a Comment