How To Make Hair Roots Strong Naturally : ಉದ್ದ, ಮೃದುವಾದ ಸುಂದರ ಕೂದಲು ಹೊಂದುವುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಕೂದಲು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಶುಷ್ಕ, ನಿರ್ಜೀವ ಮತ್ತು ಡ್ಯಾಮೇಜ್ ಕೂದಲು ಅಂದವನ್ನೇ ಕೆಡಿಸಿ ಬಿಡುತ್ತದೆ. ಮಾಲಿನ್ಯದಿಂದಾಗಿ, ಜನರು ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೂದಲು ಉದುರುವುದು, ಕೂದಲು ಒಣಗುವುದು ಮುಂತಾದ ಸಮಸ್ಯೆಗಳು ಇದರಲ್ಲಿ ಸೇರಿವೆ. ಅಂತಹ ಪರಿಸ್ಥಿತಿಯಲ್ಲಿ, ಕೂದಲಿನ ಪ್ರತಿಯೊಂದು ಸಮಸ್ಯೆಯನ್ನು ತೊಡೆದುಹಾಕಬೇಕಾದರೆ ಕೂದಲನ್ನು ಬೇರಿನಿಂದ ಸದೃಢಗೊಳಿಸುವುದು ಅಗತ್ಯ.
ಕೂದಲನ್ನು ಬಲಪಡಿಸಲು ಈ ಕೆಲಸಗಳನ್ನು ಮಾಡಿ :
ರಾಸಾಯನಿಕ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ :
ರಾಸಾಯನಿಕಯುಕ್ತ ಉತ್ಪನ್ನಗಳು ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ. ಆದ್ದರಿಂದ ಕೂದಲನ್ನು ಗಟ್ಟಿಯಾಗಿಡಲು ಈ ಉತ್ಪನ್ನಗಳಿಂದ ಸಾಧ್ಯವಾದಷ್ಟು ದೂರವಿರಿ. ಇದರ ಬದಲು ಹರ್ಬಲ್ ಉತ್ಪನ್ನಗಳನ್ನು ಕೂದಲಿಗೆ ಬಳಸಿ.
ಇದನ್ನೂ ಓದಿ : Health Tips: ಮೂತ್ರಪಿಂಡಗಳಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಈ ಡ್ರಿಂಕ್ ಬಳಸಿ
ಕೂದಲಿಗೆ ಉಗುರುಬೆಚ್ಚಗಿನ ಎಣ್ಣೆಯನ್ನು ಹಚ್ಚಿ :
ನಿಮ್ಮ ಕೂದಲು ಬಹಳಷ್ಟು ಉದುರುತ್ತಿದ್ದರೆ, ಉಗುರು ಬೆಚ್ಚಗಿನ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಬಹುದು. ಇದಕ್ಕಾಗಿ ಎಣ್ಣೆಯನ್ನು ಉಗುರುಬೆಚ್ಚಗಾಗಿಸಬೇಕು. ನಂತರ ಅದರಿಂದ ಕೂದಲು ಮತ್ತು ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಕೂದಲಿನ ಬುಡ ಗಟ್ಟಿಯಾಗುತ್ತದೆ. ಇದಕ್ಕಾಗಿ ತೆಂಗಿನೆಣ್ಣೆ ಅಥವಾ ನಿಮ್ಮ ಇಷ್ಟಕ್ಕನುಸಾರವಾಗಿ ಯಾವ ಎಣ್ಣೆಯನ್ನು ಬೇಕಾದರೂ ಬಳಸಬಹುದು. ಹೀಗೆ ಆಯಿಲ್ ಮಸಾಜ್ ಮಾಡಿದ ಬಳಿಕ 1 ಗಂಟೆಯ ನಂತರ ಮೈಲ್ಡ್ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ಕೂದಲು ಸದಾ ಸ್ಟ್ರಾಂಗ್ ಆಗಿರುತ್ತದೆ.
ಶಾಖದಿಂದ ಕೂದಲನ್ನು ರಕ್ಷಿಸಿ :
ಶಾಖವು ಕೂದಲನ್ನು ದುರ್ಬಲಗೊಳಿಸುತ್ತದೆ ಮತ್ತು ನಿರ್ಜೀವಗೊಳಿಸುತ್ತದೆ, ಆದ್ದರಿಂದ ಕೂದಲನ್ನು ಬೇರಿನಿಂದ ಬಲಪಡಿಸಲು ಬಯಸುವುದಾದರೆ, ಸ್ಟ್ರೈಟ್ನಿಂಗ್, ಐಯರ್ನಿಂಗ್ ಬ್ಲೋ ಡ್ರೈಯರ್ ಇತ್ಯಾದಿಗಳಿಂದ ದೂರವಿಡಿ.
ಇದನ್ನೂ ಓದಿ : ಮಲಬದ್ದತೆ ಈ ಎರಡು ಗಂಭೀರ ರೋಗಗಳ ಲಕ್ಷಣವೂ ಆಗಿರಬಹುದು .!
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.