ಹನುಮಾನ್ ವಾಸ್ತು ಟಿಪ್ಸ್ /ಆಂಜನೇಯ ಸ್ವಾಮಿ ವಿಗ್ರಹ ಹೇಗಿರಬೇಕು!ಹಣದ ಸಮಸ್ಸೆಗೆ ಯಾವ ದೀಪರಾಧನೆ ಮಾಡಬೇಕು!

ಪಂಚಮುಖಿ ಆಂಜನೇಯನ ಹಿಂದೆ ಪೌರಾಣಿಕ ಕತೆಗಳಿವೆ. ವಾಸ್ತುಪ್ರಕಾರವೂ ಆಂಜನೇಯನ ವಿಗ್ರಹ ಇದ್ದಲ್ಲಿ ದೋಷಗಳೆಲ್ಲ ನಿವಾರಣೆ ಆಗುತ್ತವೆ. ಆಂಜನೇಯ ವಿಗ್ರಹ ಇಡುವ ಕ್ರಮ, ಪಂಚಮುಖಿ ಆಂಜನೇಯನ ಆರಾಧನೆಯ ವಿವರ ಇಲ್ಲಿದೆ.

ರಾಮಭಕ್ತ ಹನುಮಂತ ಭಕ್ತರ ಎಲ್ಲ ನೋವುಗಳನ್ನು ನಿವಾರಿಸುವ ಕಲಿಯುಗದ ದೇವರು ಎಂಬ ನಂಬಿಕೆ ಇದೆ. ಭಕ್ತರ ಕಷ್ಟ, ಸಂಕಷ್ಟ ಪರಿಹರಿಸಿ ಅವರಲ್ಲಿ ಶಕ್ತಿ ಬುದ್ಧಿವಂತಿಕೆ ಜ್ಞಾನ ಬೆಳೆಸುವವನು ಆಂಜನೇಯ. ಭಗವಾನ್ ಹನುಮಂತ ಪಂಚಮುಖಿ ಆಂಜನೇಯನಾದ ಕಥೆ ಆಸಕ್ತಿಕರ. ಶ್ರೀರಾಮ, ರಾವಣರ ನಡುವೆ ಯುದ್ಧ ನಡೆಯುತ್ತಿರುತ್ತದೆ. ರಾವಣ ತನ್ನ ಸಹೋದರ ಅಹಿರಾವಣನ ಸಹಾಯವನ್ನು ಕೋರುತ್ತಾನೆ. ಅಹಿರಾವಣ ಮಹಾ ತಂತ್ರಗಾರ.

ರಾಮ ಲಕ್ಷಣರನ್ನ ಕಾಪಾಡಬೇಕೆಂದು ಹನುಮಂತನು ತನ್ನ ಬಾಲದಿಂದ ಬೃಹತ್ ಆಕಾರದ ಕೋಟೆಯನ್ನ ಕಟ್ಟುತ್ತಾನೆ. ಮಾಯಾವಿಯಾಯಾಗಿದ್ದ ಮಹಿರಾವಣ ರಾವಣನ ಸಹೋದರ ವಿಭೀಷಣನ ರೂಪದಲ್ಲಿ ಬಂದು ಶ್ರೀರಾಮ ದರ್ಶನ ಪಡೆಯಬೇಕೆಂದು ಹನುಮಂತ ಬಾಲದಿಂದ ಕಟ್ಟಿದ ಕೋಟೆಯೊಳಗಡೆ ಪ್ರವೇಶ ಮಾಡಿ ಅಲ್ಲಿಂದಲೆ ರಾಮ ಲಕ್ಷಣರನ್ನ ಅಪಹರಿಸಿ ಪಾತಾಳ ಲೋಕಕ್ಕೆ ಎತ್ತಿಕೊಂಡು ಹೋಗುತ್ತಾನೆ. ಆಗ ಹನುಮ ಪಂಚಮುಖಿ ಅವತಾರದಲ್ಲಿ ಪಾತಾಳವನ್ನು ಪ್ರವೇಶ ಮಾಡಿ ಅಹಿರಾವಣನ ಜೊತೆಗೆ ಭೀಕರ ಕಾಳಗ ನಡೆಸುತ್ತಾನೆ. ಅಹಿರಾವಣನನ್ನು ಕೊಂದು ರಾಮ ಲಕ್ಷ್ಮಣರನ್ನು ಸೆರೆಯಿಂದ ಬಿಡಿಸಿ ಕಾಯುತ್ತಾನೆ.

ಹನೂಮಂತ ಶ್ರೀರಾಮನ ಮಹಾನ್ ಭಕ್ತ ಅನ್ನುವುದು ಎಲ್ಲರಿಗೂ ತಿಳಿಸಿದೆ. ಆತ ಶಿವಾಂಶ ಸಂಭೂತ. ಶಕ್ತಿ ಪರಾಕ್ರಮಗಳಲ್ಲಿ ಹಾಗೂ ಬುದ್ದಿಗೆ ಪ್ರತೀಕವೆ ಈ ಅಂಜನಿ ಪುತ್ರ ಹನುಮಂತ. ಹನೂಮಂತನ ನಾನಾ ಅವತಾರಗಳಲ್ಲಿ ಪ್ರಮುಖವಾದದ್ದು ಈ ಪಂಚಮುಖಿ ಆಂಜನೇಯ ಸ್ವಾಮಿಯ ಅವತಾರ. ಮಹಿರಾವಣನನ್ನ ಸಂಹಾರ ಮಾಡುವ ಸಲುವಾಗಿ ವಾಯುಪುತ್ರ ಹನುಮಂತನು ಪಂಚಮುಖಿ ಆಂಜನೇಯಸ್ವಾಮಿಯಾಗಿ ಅವತಾರ ತಾಳುತ್ತಾನೆ.

ಪಂಚಮುಖಿ ಎಂದರೆ ಐದು ಮುಖಗಳು ಎಂದರ್ಥ. ಇದರಲ್ಲಿ ಹನುಮಂತನ ಮುಖ ಸೇರಿದಂತೆ ನರಸಿಂಹ, ವರಾಹ, ಹಯಗ್ರೀವ ಹಾಗೂ ಗರುಡ ಸೇರಿದಂತೆ ಐದು ಮುಖಗಳಾಗಿವೆ. ಆಗ ಪಂಚಮುಖಿ ಆಂಜನೇಯ ಸ್ವಾಮಿಯು ತನ್ನ ಐದು ಮುಖಗಳಿಂದಲೂ ಆ ಐದು ದೀಪಗಳನ್ನ ಒಂದೇ ಬಾರಿಗೆ ಆರಿಸಿ ರಕ್ಕಸ ಮಹಿರಾವಣನ ಅಂತ್ಯ ಮಾಡುತ್ತಾನೆ. ಬಳಿಕ ರಾಮ ಲಕ್ಷ್ಮಣರನ್ನ ತನ್ನ ಹೆಗಲ ಮೇಲೆ ಕುಳ್ಳರಿಸಿಕೊಂಡು ಭೂಮಿಗೆ ತರುತ್ತಾನೆ ಎಂಬುದು ರಾಮಾಯಣದಲ್ಲಿ ಉಲ್ಲೇಖ ಮಾಡಲಾಗಿದೆ. ಇದು ಪಂಚ ಮುಖಿ ಆಂಜನೇಯ ಸ್ವಾಮಿ ಅವತಾರದ ಹಿಂದಿನ ಕಥೆ.

ಪಂಚಮುಖಿ ಆಂಜನೇಯನನ್ನು ಪೂಜಿಸಿದರೆ ಮನೆಯಲ್ಲಿರುವ ವಾಸ್ತುದೋಷಗಳು ಪರಿಹಾರವಾಗುತ್ತವೆ. ಮನೆಯಲ್ಲಿ ಹನೂಮಂತನ ವಿಗ್ರಹವನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಈ ವಿಗ್ರಹಕ್ಕೆ ಹೂ ಹಣ್ಣು ಇಟ್ಟು ನಮಸ್ಕರಿಸಿದರೆ ಹನುಮನ ಅನುಗ್ರಹ ನಮ್ಮ ಮೇಲಿರುತ್ತೆ ಎನ್ನುತ್ತದೆ ವಾಸ್ತುಶಾಸ್ತ್ರ. ಇನ್ನು ಕೋರ್ಟು ಕಚೇರಿ ಖಟ್ಲೆಗಳು ನಡೆಯುತ್ತಿದ್ದಾಗ ಜನ ನಿಮ್ಮ ಪಾಲಿಗೆ ಸಿಗಬೇಕು ಅಂದರೆ ಹನೂಮಂತನ ವಿಗ್ರಹದ ಮುಂದೆ ತುಪ್ಪದ ದೀಪವನ್ನು ಬೆಳಗಿ ಪೂಜಿಸಬೇಕು. ಆಗ ಗೆಲುವು ನಿಮ್ಮದಾಗುತ್ತದೆ. ಪರೀಕ್ಷೆ ಅಥವಾ ಸಂದರ್ಶನ ಗಳಲ್ಲಿ ಯಶಸ್ಸು ಗಳಿಸಬೇಕೆಂದರೆ ಪಂಚಮುಖಿ ಆಂಜನೇಯನಿಗೆ ನಾನಾ ಬಗೆಯ ಹಣ್ಣುಗಳು, ಲಡ್ಡು ನೈವೇದ್ಯ ಮಾಡಬಹುದು.

ಈ ಪಂಚಮುಖಿ ಆಂಜನೇಯನ ವಿಗ್ರಹ ಅಂದುಕೊಂಡಷ್ಟು ಸುಲಭದಲ್ಲಿ ಸಿಗುವುದಿಲ್ಲ. ಕೆಲವೊಮ್ಮೆ ಸಿಕ್ಕರೂ ಅದು ಶಾಸ್ತ್ರೋಕ್ತವಾಗಿರುವುದಿಲ್ಲ. ಹೀಗಾಗಿ ಸೂಕ್ಷ್ಮವಾಗಿ ಪರೀಕ್ಷಿಸಿ ಹುಡುಕಿ ಶಾಸ್ತ್ರದಲ್ಲಿ ಹೇಳಿರುವಂಥಾ ಮುಖಗಳಿರುವ ಪಂಚಮುಖಿ ಆಂಜನೇಯ ವಿಗ್ರಹವನ್ನು ತಂದು ಪೂಜಿಸಬಹುದು.

ವಾಸ್ತುದೋಷಗಳಿಲ್ಲದೇ ಹೋದರೂ ಪಂಚಮುಖಿ ಆಂಜನೇಯನನ್ನು ಪೂಜಿಸಿದರೆ ಒಳಿತೇ ಆಗುತ್ತದೆ. ಮುಂದಾಗುವ ಕೆಲಸಗಳಲ್ಲಿ ವಿಘ್ನಗಳು ತಪ್ಪುತ್ತವೆ. ನಾವು ಅಂದುಕೊಂಡ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯುತ್ತವೆ. ಒಳ್ಳೆಯ ಕೆಲಸಕ್ಕೆ ಕೈ ಹಾಕಿದರೆ ಉತ್ತಮ ಮನಸ್ಸಿನಲ್ಲಿ ಆ ಕೆಲಸ ಮಾಡಿದರೆ ಆಂಜನೇಯ ಖಂಡಿತಾ ಕೈ ಹಿಡಿಯುತ್ತಾನೆ ಎಂದು ಪುರಾಣಗಳು ಹೇಳುತ್ತವೆ.

Leave a Comment