ನಾವು ಕೆಲವೊಮ್ಮೆ ಮನೆಯಲ್ಲಿ ಆರಾಮವಾಗಿ ಸುಮ್ಮನೆ ಕುಳಿತಿದ್ದಾಗ ಅಥವಾ ಇತರರ ಜೊತೆ ಮಾತನಾಡುತ್ತ ಇರಬೇಕಾದರೆ ಅಥವಾ ನಮ್ಮ ಯಾವುದೇ ಒಂದು ಕೆಲಸದಲ್ಲಿ ನಿರತರಾಗಿ ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಮ್ಮ ಹೊಟ್ಟೆ ಗುರ್ ಗುರ್ ಎಂದು ಶಬ್ದ ಮಾಡಲು ಪ್ರಾರಂಭ ಮಾಡುತ್ತದೆ ಇಂತಹ ಸಮಯದಲ್ಲಿ ನಾವು ಒಬ್ಬರೇ ಇದ್ದರೇನೋ ಸರಿ ಅಪ್ಪಿ ತಪ್ಪಿ ಬೇರೆ ನಮ್ಮ ಸ್ನೇಹಿತರು ಅಥವಾ ಮೇಲಧಿಕಾರಿಗಳು ಅಥವಾ ಸಹೋದ್ಯೋಗಿಗಳ ಜೊತೆ ಇದ್ದರಂತೂ ನಮ್ಮ ಪಾಡು ಕೇಳುವುದೇ ಬೇಡ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ
ಆದರೆ ಇದು ಬೇಕೆಂದು ನಾವೇ ಮಾಡಿಕೊಂಡ ಸಮಸ್ಯೆಯೇನಲ್ಲ.ಇನ್ನು ತಾನಾಗಿ ಹೊಟ್ಟೆಯಿಂದ ಉತ್ಪತ್ತಿಯಾಗುವ ಇಂತಹ ಶಬ್ದಕ್ಕೆ ಏನು ಮಾಡಬೇಕು ? ಇದಕ್ಕೆ ಕಾರಣವೇನು ?ನಮ್ಮ ಹೊಟ್ಟೆಯ ಆರೋಗ್ಯವನ್ನು ಸರಿಯಾಗಿ ಕಾಪಾಡಿಲ್ಲ ಎಂಬುದರ ಸೂಚನೆಯೇ ?ಬನ್ನಿ ತಿಳಿಯೋಣ..
ಸಾಮಾನ್ಯವಾಗಿ ನಮ್ಮ ಹೊಟ್ಟೆಯಲ್ಲಿ ಶಬ್ದ ಬಂದಂತೆ ಕೇಳಿಸುತ್ತದೆ ಹಾಗಾದರೆ ಇದಕ್ಕೆ ಕಾರಣವೇನು ?ಹೊಟ್ಟೆ ಹಸಿವು ,ಕರುಳಿನಲ್ಲಿ ಕಟ್ಟಿಕೊಂಡಂತೆ ಆಗಿರುವುದು , ಜಠರ ನಾಳದ ಸೋಂಕು , ಆಹಾರದ ಅಲರ್ಜಿ , ಇರಿಟೇಬಲ್ ಬೌಲ್ ಸಿಂಡ್ರೋಮ್ , ಗ್ಯಾಸ್ಟ್ರಿಕ್.ಹಾಗಿದ್ರೆ ಈ ಹೊಟ್ಟೆಯಿಂದ ಉತ್ಪತ್ತಿಯಾಗುವ ಈ ಶಬ್ದಕ್ಕೆ ಏನು ಮಾಡಬೇಕು ?
ನಾವು ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ನಮ್ಮ ಹೊಟ್ಟೆಯಿಂದ ಬರುವ ಶಬ್ದವನ್ನು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.ನೀರು ಕುಡಿಯಿರಿ ಎಂದಾದರೂ ನಿಮಗೆ ಹೊಟ್ಟೆಯಲ್ಲಿ ಶಬ್ದ ಬರುವ ಅನುಭವ ಉಂಟಾದರೆ ತಕ್ಷಣವೇ ಒಂದು ಲೋಟ ನೀರು ಕುಡಿಯಿರಿ.ಇದು ನಿಮ್ಮ ಹೊಟ್ಟೆಗೂ ಒಳ್ಳೆಯದು ಮತ್ತು ನಿಮ್ಮ ಜೀರ್ಣಾಂಗದ ಆರೋಗ್ಯಕ್ಕೂ ಒಳ್ಳೆಯದು.
ಕೆಲವೊಮ್ಮೆ ಹೊಟ್ಟೆ ಖಾಲಿ ಇದ್ದರೆ ಈ ರೀತಿ ಶಬ್ದ ಬರುತ್ತದೆ ಹಾಗಾಗಿ ಹೊಟ್ಟೆ ತುಂಬಾ ನೀರು ಕುಡಿದು ನೀವು ಶಬ್ದವನ್ನು ಕಡಿಮೆ ಮಾಡಿಕೊಳ್ಳಬಹುದು.ಇನ್ನು ಕೆಲವೊಮ್ಮೆ ನೀವು ಸಾಕಷ್ಟು ನೀರು ಕುಡಿಯದೇ ಇರುವುದು ಕೂಡ ಹೊಟ್ಟೆಯಿಂದ ಶಬ್ದ ಬರಲು ಒಂದು ಸೂಚನೆಯಾಗಿರುತ್ತದೆ. ನಿಧಾನವಾಗಿ ನೀರು ಕುಡಿಯುವುದರಿಂದ ನಿಮ್ಮ ಹೊಟ್ಟೆಯಲ್ಲಿನ ಗಾಳಿ ಕಡಿಮೆಯಾಗಿ ಹೊಟ್ಟೆಗೆ ಸಂಬಂಧಪಟ್ಟ ಶಬ್ದಗಳು ನಿವಾರಣೆಯಾಗುತ್ತದೆ.
ಏನಾದರೂ ಆಹಾರ ಸೇವಿಸಿ ನಿಮ್ಮ ಹೊಟ್ಟೆ ತುಂಬಾ ಹಸಿದಿದ್ದರೆ ಅದು ಕೂಡ ಹೊಟ್ಟೆಯಿಂದ ಬರುವ ಶಬ್ದಕ್ಕೆ ಒಂದು ಕಾರಣವಾಗಿರಬಹುದು ಹಾಗಾಗಿ ಹೊಟ್ಟೆಯಿಂದ ಬರುವ ಶಬ್ದಗಳು ನಿಮಗೆ ಆಹಾರ ತಿನ್ನಲು ಹೇಳುವ ಕರೆಗಂಟೆ ಆಗಿರಬಹುದು. ಈ ಸಮಯದಲ್ಲಿ ತಕ್ಷಣವೇ ನಿಮಗೆ ಯಾವುದೇ ಆರೋಗ್ಯಕರವಾದ ಆಹಾರ ಸಿಕ್ಕಿದರೂ ಅದನ್ನು ಸೇವಿಸಿ.ಕೆಲವರಿಗೆ ಪ್ರತಿನಿತ್ಯವೂ ಒಂದೇ ಸಮಯಕ್ಕೆ ಹೊಟ್ಟೆ ಈ ರೀತಿ ಶಬ್ದ ಮಾಡುತ್ತದೆ ಅಂತವರು ಮರುದಿನ ಮತ್ತೆ ಆ ಸಮಯ ಬರುವುದಕ್ಕೆ ಮುಂಚೆಯೇ ಸ್ವಲ್ಪ ನೀರು ಸೇವಿಸಿ ಆಹಾರವನ್ನು ತಿನ್ನುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು.
ಹೆಚ್ಚಾಗಿ ಒಂದೇ ಬಾರಿ ಅತಿ ಹೆಚ್ಚು ಆಹಾರ ಸೇವಿಸುವುದನ್ನು ಬಿಟ್ಟು ದಿನದಲ್ಲಿ ಆಗಾಗ ಸ್ವಲ್ಪ ಸ್ವಲ್ಪವೇ ಆಹಾರವನ್ನು ಸೇವಿಸಲು ಮುಂದಾಗುವುದು ಕೂಡ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಆಹಾರವನ್ನು ಸರಿಯಾಗಿ ಜಗಿದು ತಿನ್ನಿ.ನಮ್ಮಲ್ಲಿ ಹಲವರು ಆಹಾರವನ್ನು ಸರಿಯಾಗಿ ಜಗಿಯದೆ ಗಬಗಬನೆ ತಿಂದು ಬಿಡುತ್ತಾರೆ ಹೀಗಾಗಿ ಅರ್ಧಂಬರ್ಧ ಜಗಿದ ಆಹಾರ ಹೊಟ್ಟೆಯ ಜೀರ್ಣಾಂಗ ಸೇರಿ ಮಧ್ಯೆ ಮಧ್ಯೆ ಗಾಳಿ ತುಂಬಿ ಹಾಕಿಕೊಂಡಿರುವುದರಿಂದ ಅಜೀರ್ಣತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.
ಇದು ಕರುಳಿನ ಭಾಗದಲ್ಲಿ ಶೇಖರಣೆಯಾಗಿ ಹೊಟ್ಟೆಯಿಂದ ಶಬ್ದ ಬರಲು ಕಾರಣವಾಗುತ್ತದೆ ಆದ್ದರಿಂದ ಆಹಾರವನ್ನು ಸರಿಯಾಗಿ ಜಗಿದು ಸೇವಿಸಿ.
ಹೆಚ್ಚು ಸಕ್ಕರೆಯುಕ್ತ ಆಹಾರಗಳನ್ನು ಸೇವಿಸಬೇಡಿ. ನಿಮ್ಮ ಆಹಾರದಲ್ಲಿ ಆದಷ್ಟು ಉಪ್ಪಿನಾಂಶ ಮತ್ತು ಸಕ್ಕರೆ ಅಂಶ ಕಡಿಮೆ ಇರಬೇಕು ಇದು ನಿಮ್ಮ ಜೀರ್ಣ ಪ್ರಕ್ರಿಯೆಗೆ ಸಹಕಾರಿ ಜೀರ್ಣಾಂಗಕ್ಕೆ ಸಂಬಂಧಪಟ್ಟ ಯಾವುದೇ ಅವ್ಯವಸ್ಥೆಗಳು ಕಾಡುವುದಿಲ್ಲ.ಹೆಚ್ಚು ಸಕ್ಕರೆಯ ಅಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸಿದರೆ ಅಜೀರ್ಣತೆ , ಎದೆ ಉರಿ ಮತ್ತು ಹೊಟ್ಟೆ ನೋವು ಕಾಡಲು ಪ್ರಾರಂಭವಾಗುತ್ತದೆ.ಹಾಗಾಗಿ ಇಂತಹ ಆಹಾರಗಳ ಬಗ್ಗೆ ಗಮನವಹಿಸಿ ಇದು ಕೂಡ ಹೊಟ್ಟೆಯಿಂದ ಬರುವ ಶಬ್ದಗಳಿಗೆ ಕಾರಣ.
ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುವ ಆಹಾರಗಳು. ನಾವು ಸೇವಿಸುವ ಆಹಾರದಲ್ಲಿ ಕೆಲವೊಂದು ನಮಗೆ ಗ್ಯಾಸ್ಟಿಕ್ ಸಮಸ್ಯೆಯನ್ನು ತಂದು ಕೊಡುತ್ತದೆ.ಉದಾಹರಣೆಗೆ ಕೆಲವೊಂದು ಕಾಳುಗಳು ಮತ್ತು ಧಾನ್ಯಗಳು.ಇವುಗಳು ಜೀರ್ಣಶಕ್ತಿ ಚೆನ್ನಾಗಿ ರುವವರಿಗೆ ಜೀರ್ಣವಾಗುತ್ತದೆ ಆದರೆ ಸ್ವಲ್ಪ ದುರ್ಬಲ ಜೀರ್ಣ ಶಕ್ತಿ ಹೊಂದಿರುವವರಿಗೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟು ಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಾದಾಗ ಹೊಟ್ಟೆಯಿಂದ ಶಬ್ದ ಬರುವುದು ಸಾಮಾನ್ಯ ಆದ್ದರಿಂದ ನೀವೇನಾದರೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ಅದನ್ನು ಗುಣಪಡಿಸಿಕೊಳ್ಳುವುದು ತುಂಬಾನೇ ಮುಖ್ಯ. ಇನ್ನು ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಕೂಡ ನಿಮ್ಮ ಹೊಟ್ಟೆಯ ಶಬ್ದಗಳು ಕಡಿಮೆಯಾಗದಿದ್ದರೆ ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ.ಧನ್ಯವಾದಗಳು.