ಕಲಿಯುಗ ಅಂತ್ಯಕ್ಕೆ ಎಷ್ಟು ವರ್ಷ ಬಾಕಿ ಇದೆ?

ಪ್ರಪಂಚದಲ್ಲಿರುವ ಎಲ್ಲಾ ಧರ್ಮಗಳಿಗೆ ಹೋಲಿಸಿದರೆ ಸನಾತನ ಧರ್ಮವಾದ ಹಿಂದೂ ಧರ್ಮವನ್ನು ಅತ್ಯಂತ ಹಳೆಯ ಧರ್ಮವೆಂದು ಕರೆಯಲಾಗುತ್ತದೆ. ಹಿಂದೂ ಧರ್ಮವನ್ನು ಹೊರತುಪಡಿಸಿ ಬೇರಾವ ಧರ್ಮವು ಅಸ್ಥಿತ್ವದಲ್ಲಿರಲಿಲ್ಲ ಎನ್ನುವ ಪುರಾವೆಗಳಿವೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಹಿಂದೂ ಧರ್ಮವು ಸುಮಾರು 90 ಸಾವಿರ ವರ್ಷಗಳಷ್ಟು ಇತಿಹಾಸವನ್ನು ಹೊಂದಿದೆ. ಹಿಂದೂ ಧರ್ಮ ಕಲಿಯುಗದ ಕುರಿತು ಏನೆಂದು ಹೇಳುತ್ತದೆ..? ಹಿಂದೂ ಧರ್ಮ ಮತ್ತು ಕಲಿಯುಗದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು.

ಹಿಂದೂ ಧರ್ಮ ಎಷ್ಟು ಹಳೆಯ ಧರ್ಮವಾಗಿದೆ..?ಹಿಂದೂ ಧರ್ಮವು 90 ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಕ್ರಿಸ್ತಪೂರ್ವ 9057 ರಲ್ಲಿ ಸ್ವಯಂಭು ಮನು, ಕ್ರಿಸ್ತಪೂರ್ವ 6673 ರಲ್ಲಿ ವೈವಸ್ವತ ಮನು ಹಿಂದೂ ಧರ್ಮದಲ್ಲಿ ಮೊದಲಿಗರಾಗಿದ್ದರು. ಪೌರಾಣಿಕ ನಂಬಿಕೆಯ ಪ್ರಕಾರ, ಭಗವಾನ್ ಶ್ರೀರಾಮನ ಜನ್ಮವನ್ನು ಕ್ರಿ.ಪೂ. 5114 ಎಂದು ಹೇಳಲಾಗುತ್ತದೆ ಮತ್ತು ಶ್ರೀ ಕೃಷ್ಣನ ಜನ್ಮವನ್ನು ಕ್ರಿ.ಪೂ 3112 ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಪ್ರಸ್ತುತ ಸಂಶೋಧನೆಯ ಪ್ರಕಾರ, ಹಿಂದೂ ಧರ್ಮವನ್ನು 12-15 ಸಾವಿರ ವರ್ಷಗಳಷ್ಟು ಹಳೆಯದೆಂದು ಪರಿಗಣಿಸಲಾಗಿದೆ ಮತ್ತು ಸುಮಾರು 24 ಸಾವಿರ ವರ್ಷಗಳಷ್ಟು ಹಳೆಯದು ಎಂಬುದು ತಿಳಿದುಬಂದಿದೆ.

ಹಿಂದೂ ಧರ್ಮದ ನಾಲ್ಕು ಯುಗಗಳು:ವೇದಗಳ ಪ್ರಕಾರ, ಹಿಂದೂ ಧರ್ಮದಲ್ಲಿ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಎಂಬ ನಾಲ್ಕು ಯುಗಗಳ ಬಗ್ಗೆ ಉಲ್ಲೇಖವನ್ನು ಮಾಡಲಾಗಿದೆ. ಈ ಸತ್ಯಯುಗದಲ್ಲಿ ಸುಮಾರು 17 ಲಕ್ಷ 28 ಸಾವಿರ ವರ್ಷಗಳು, ತ್ರೇತಾಯುಗದಲ್ಲಿ ಸುಮಾರು 12 ಲಕ್ಷ 96 ಸಾವಿರ ವರ್ಷಗಳು, ದ್ವಾಪರಯುಗದಲ್ಲಿ 8 ಲಕ್ಷ 64 ಸಾವಿರ ವರ್ಷಗಳು ಮತ್ತು ಕಲಿಯುಗದಲ್ಲಿ ಸುಮಾರು 4 ಲಕ್ಷ 32 ಸಾವಿರ ವರ್ಷಗಳು ಇವೆ ಎಂದು ಹೇಳಲಾಗಿದೆ. ಭಗವಾನ್ ರಾಮನು ತ್ರೇತಾಯುಗದೊಂದಿಗೆ ಸಂಬಂಧವನ್ನು ಹೊಂದಿದ್ದನು ಮತ್ತು ಶ್ರೀ ಕೃಷ್ಣನು ದ್ವಾಪರಯುಗದೊಂದಿಗೆ ಸಂಬಂಧವನ್ನು ಹೊಂದಿದ್ದನು ಮತ್ತು ಪ್ರಸ್ತುತ ಕಲಿಯುಗ ನಡೆಯುತ್ತಿದೆ. ಇದು ಯಾವ ಪ್ರಮುಖ ದೇವರೊಂದಿಗೆ ಸಂಬಂಧವನ್ನು ಹೊಂದಿದೆ ಎಂಬುದನ್ನು ಕಾದು ನೋಡಬೇಕಿದೆ.

ಕಲಿಯುಗದ ಒಟ್ಟಾರೆ ಅವಧಿ:ವಿದ್ವಾಂಸರ ಪ್ರಕಾರ, ಕಲಿಯುಗವು 4 ಲಕ್ಷ 32 ಸಾವಿರ ಮಾನವ ವರ್ಷಗಳನ್ನು ಹೊಂದಿದ್ದು, ಇದರಲ್ಲಿ ಕೆಲವೇ ಸಾವಿರ ವರ್ಷಗಳನ್ನು ಮಾತ್ರ ನಾವು ಕಳೆದಿದ್ದೇವೆ. ಕಲಿಯುಗಕ್ಕೆ ಸಂಬಂಧಿಸಿದ ಆಧುನಿಕ ಲೆಕ್ಕಾಚಾರವನ್ನು ನೋಡಿದರೆ, ಅದು ಕ್ರಿ.ಪೂ 3,120 ರಲ್ಲಿ ಐದು ಗ್ರಹಗಳಾದ ಮಂಗಳ, ಬುಧ, ಶುಕ್ರ, ಗುರು ಮತ್ತು ಶನಿ ಮೇಷ ರಾಶಿಯಲ್ಲಿ 0 ಡಿಗ್ರಿಯಲ್ಲಿದ್ದಾಗ ಕಲಿಯುಗವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

ಇದರ ಪ್ರಕಾರ ಇಲ್ಲಿಯವರೆಗೆ ಕಲಿಯುಗ 3102+2023=5125 ವರ್ಷಗಳನ್ನು ಮಾತ್ರ ಕಳೆದಿದೆ. ಈ ರೀತಿಯಾಗಿ ಕಲಿಯುಗದ 4,32,000 ವರ್ಷಗಳಿಂದ 5,125 ಕಳೆದರೆ ಇನ್ನು 4,26,875 ವರ್ಷಗಳು ಉಳಿಯುತ್ತವೆ. ಅಂದರೆ ಕಲಿಯುಗ ಮುಗಿಯಲು ಇನ್ನು 4,26,875 ವರ್ಷಗಳು ಬಾಕಿ ಇವೆ. ಪ್ರಸ್ತುತ ಸಮಯವನ್ನು ಕಲಿಯುಗದ ಮೊದಲ ಹಂತ ಎಂದು ಕರೆಯಲಾಗುತ್ತದೆ.

ಕಲಿಯುಗ ಹೇಗಿರುತ್ತದೆ..?ಧರ್ಮದ ಅಳಿವು, ದುಶ್ಚಟಗಳು ಮತ್ತು ದುಷ್ಕೃತ್ಯಗಳ ಹೆಚ್ಚಳ ಇತ್ಯಾದಿ ವಿಷಯಗಳನ್ನು ಕಲಿಯುಗದಲ್ಲಿ ನಾವು ಹೆಚ್ಚಾಗಿ ನೋಡುವಂತಾಗುತ್ತದೆ. ಈ ಯುಗದಲ್ಲಿ, ಭೂಮಿಯ ಮೇಲಿನ ಎಲ್ಲಾ ಜೀವಿಗಳಲ್ಲಿ ಮನುಷ್ಯನನ್ನು ಹೊರತುಪಡಿಸಿ ದೇವರುಗಳು, ರಾಕ್ಷಸರು, ಯಕ್ಷರು ಅಥವಾ ಗಂಧರ್ವರು ಇವರಾರು ಕೂಡ ಶ್ರೇಷ್ಠರಾಗಿರುವುದಿಲ್ಲ. ಈ ಕಾಲದಲ್ಲಿ ಸತ್ಕರ್ಮ ಮಾಡುವವರನ್ನು ದೇವತೆಗಳೆಂದೂ, ದುಷ್ಕೃತ್ಯ ಮತ್ತು ಪಾಪಗಳನ್ನು ಮಾಡುವವರನ್ನು ರಾಕ್ಷಸರೆಂದು ಪರಿಗಣಿಸಲಾಗುತ್ತದೆ. ಮಹರ್ಷಿ ವೇದವ್ಯಾಸರು ಮಹಾಭಾರತದಲ್ಲಿ ಕಲಿಯುಗದ ಕುರಿತು ಹೀಗೆಂದು ಭವಿಷ್ಯ ನುಡಿದಿದ್ದಾರೆ, ಈ ಯುಗದಲ್ಲಿ, ಮಾನವರಲ್ಲಿ ವರ್ಣ ಮತ್ತು ಆಶ್ರಮ ಸಂಬಂಧಿತ ಪ್ರವೃತ್ತಿ ಇರುವುದಿಲ್ಲ ಹಾಗೂ ವೇದಗಳ ಅನುಯಾಯಿಗಳು ಇರುವುದಿಲ್ಲ. ಜನರು ಕೂಡ ಮದುವೆಗೆ ಗೋತ್ರ, ಜಾತಿ ಮತ್ತು ಧರ್ಮವನ್ನು ಪರಿಗಣಿಸುವುದಿಲ್ಲ. ಶಿಷ್ಯ ಗುರುವಿನ ಅಡಿಯಲ್ಲಿ ಇರುವುದಿಲ್ಲ. ಕಲಿಯುಗದಲ್ಲಿ ಕಾಲಗಳು ಕಳೆದಂತೆ ಭಯಾನಕ ದಿನಗಳು ಬರುತ್ತವೆ.

ಕಲಿಯುಗದಲ್ಲಿ ವಿಷ್ಣುವಿನ ಅವತಾರ:ಜಗತ್ತಿನಲ್ಲಿ ಸಂಭೋಗ, ದುರ್ನಡತೆ, ದೌರ್ಜನ್ಯಗಳು ಹೆಚ್ಚಾದಾಗಲೆಲ್ಲಾ ಅದನ್ನು ಕೊನೆಗಾಣಿಸಲು ಮತ್ತು ಜಗತ್ತನ್ನು ಉಳಿಸಲು ಭಗವಾನ್ ವಿಷ್ಣುವು ವಿವಿಧ ಅವತಾರಗಳ ಮೂಲಕ ಕಾಣಿಸಿಕೊಳ್ಳುತ್ತಾನೆ. ಭಗವಾನ್ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ ಸಾಕಷ್ಟು ಬಾರಿ ಹೇಳಲಾಗಿದೆ. ಅದರಲ್ಲಿ ಕಲ್ಕಿಯು ಹತ್ತನೇ ಮತ್ತು ಕೊನೆಯ ಅವತಾರವೆಂದು ಉಲ್ಲೇಖಿಸಲಾಗಿದೆ.

ವಿಷ್ಣು ಮತ್ಸ್ಯಾವತಾರವೆತ್ತಲು ಕಾರಣ ಏನು ಗೊತ್ತಾ?ಕಲಿಯುಗದಲ್ಲಿ ಪಾಪದ ಭೀಕರತೆ ಉತ್ತುಂಗಕ್ಕೇರಿದಾಗ ಭಗವಾನ್‌ ವಿಷ್ಣು ಕಲ್ಕಿಯ ರೂಪ ತೆಗೆದುಕೊಳ್ಳುತ್ತಾನೆ. ಕಲ್ಕಿಯ ಅವತಾರದಲ್ಲಿ ಭಗವಾನ್‌ ವಿಷ್ಣು ಶ್ರಾವಣ ಮಾಸದ ಶುಕ್ಲಪಕ್ಷದ ಐದನೇ ದಿನದಂದು ಸಂಭಾಲ ಎಂಬ ಸ್ಥಳದಲ್ಲಿ ಮತ್ತು ವಿಷ್ಣುಯಾಶ ಎಂಬ ವ್ಯಕ್ತಿಯ ಮನೆಯಲ್ಲಿ ಜನಿಸುತ್ತಾನೆ ಎನ್ನಲಾಗಿದೆ. ಈ ಅವತಾರದಲ್ಲಿ ದೇವದತ್ತ ಕುದುರೆಯ ಮೇಲೆ ಸವಾರಿ ಮಾಡುವ ಮೂಲಕ ಪಾಪಿಗಳನ್ನು ನಾಶಪಡಿಸಿ ಮತ್ತೊಮ್ಮೆ ಜಗತ್ತಿನಲ್ಲಿ ಭಯ ಮತ್ತು ಹೇಯ ಕೃತ್ಯವು ಕೊನೆಗೊಳ್ಳುವಂತೆ ಮಾಡುತ್ತಾನೆ ಮತ್ತು ಅಂದಿನಿಂದ ಸುವರ್ಣಯುಗವು ಸ್ಥಾಪನೆಯಾಗುತ್ತದೆ. ವಿಷ್ಣು ಕಲ್ಕಿ ಅವತಾರವನ್ನು ತೆಗೆದುಕೊಳ್ಳಲು ಇನ್ನೂ ಸಾವಿರಾರು ವರ್ಷಗಳು ಉಳಿದಿವೆ. ಆದರೆ ವಿಷ್ಣು ದೇವನನ್ನು ಇಂದಿಗೂ ಕಲ್ಕಿ ರೂಪದಲ್ಲಿ ಪೂಜಿಸಲಾಗುತ್ತಿದೆ.

ಕಲಿಯುಗದಲ್ಲಿ ಧರ್ಮ ಅಧರ್ಮದ ಮಾರ್ಗದಲ್ಲಿ ಸಾಗುತ್ತದೆ, ಮಾನವರು ನರ ಭಕ್ಷಕರಂತೆ ವರ್ತಿಸುತ್ತಾರೆ, ಶಾಂತು ಸೌಹಾರ್ಧತೆಯು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ಉಲ್ಲೇಖಿಸಲಾಗಿದೆ. ಸೃಷ್ಟಿಯಲ್ಲಿ ಅಧರ್ಮವನ್ನು ಅಳಿಸಿ ಧರ್ಮವನ್ನು ಬೆಳೆಸುವುದಕ್ಕಾಗಿ ವಿಷ್ಣು ಕಲ್ಕಿಯಾಗಿ ಭೂಮಿಗೆ ಬರುತ್ತಾನೆಂದು ಹೇಳಲಾಗಿದೆ. ವಿಷ್ಣುವಿನ ಕಲ್ಕಿ ಅವತಾರ ಹೇಗಿರುತ್ತೆ..? ಕಲಿಯುಗದ ಅಂತ್ಯದ ಬಗ್ಗೆ ನಾವಿನ್ನು ಕಾದು ನೋಡಬೇಕಾಗಿದೆ.

Leave a Comment