ಅವರವರ ಮನೆಯ ಸಂಪ್ರದಾಯದ ರೀತಿ ನಾಗರ ಪಂಚಮಿ ಅನ್ನು ಆಚರಣೆ ಮಾಡುತ್ತಾರೆ. ನಾಗರ ಪಂಚಮಿ ಎಂದರೆ ನಾಗ ಎಂದರೆ ಹಾವು ಹಾಗು ಪಂಚಮಿ ಎಂದರೆ ಶ್ರಾವಣ ಮಾಸದ ಒಂದು ಶುಕ್ಲ ಪಕ್ಷದ ಪಂಚಮಿ ತಿತಿಯೊಂದು ಬರುವುದಕ್ಕೆ ನಾಗರ ಪಂಚಮಿ ಎಂದು ಕರೆಯಲಾಗುತ್ತದೆ. ಈ ನಾಗರ ಪಂಚಮಿ ಹಬ್ಬ ಮಾಡುವುದರಿಂದ ಅವರ ಜೀವನದಲ್ಲಿ ಇರುವ ಎಷ್ಟೋ ಕಷ್ಟಗಳು ಬದಲಾವಣೆ ಆಗುತ್ತದೆ.
ನಾಗರ ಪಂಚಮಿ ಹಬ್ಬ ಆಚರಣೆ ಮಾಡಬೇಕು ಎಂದರೆ ಮನೆಯಲ್ಲಿ ಸುಬ್ರಮಣ್ಯ ಸ್ವಾಮಿ ಫೋಟೋ ಇರಬೇಕು. ಮೊದಲು ಶ್ರೀ ಗಂಧ ಅರಿಶಿಣ ಕುಂಕುಮವನ್ನು ಹಚ್ಚಬೇಕು. ಗೆಜ್ಜೆ ವಸ್ತ್ರ ಹಾಕಿ ಹೂವಿನಿಂದ ಅಲಂಕಾರ ಮಾಡಬೇಕು. ಮೊದಲು ಗಣೇಶನ ಪೂಜೆಯನ್ನು ಸಹ ಮಾಡಬೇಕು. ಇನ್ನು ನಾಗರ ಪಂಚಮಿ ಹಬ್ಬ ಯಾವಾಗಲೂ ಅಮವಾಸ್ಯೆ ಆಗಿ 5ನೇ ದಿವಸಕ್ಕೆ ಪಂಚಮಿ ಹಬ್ಬವು ಬರುವುದು. ಹಾಗಾಗಿ ಮಂಗಳವಾರ ನಮಗೆ ನಾಗರ ಪಂಚಮಿ ಹಬ್ಬ ಬಂದಿರುತ್ತದೆ. ಆ ದಿನ ಮನೆಯಲ್ಲಿ ವಿಶೇಷವಾಗಿ ಮನೆಯಲ್ಲಿ ವಿಷೇಷವಾಗಿ ಆಚರಣೆ ಮಾಡಬೇಕು. ಜೊತೆಗೆ ದೇವಸ್ಥಾನಕ್ಕೆ ಹೋಗಿ ನಾಗರ ಕಟ್ಟೆಗೂ ಕೂಡ ಹಾಲನ್ನು ಎರೆಯಬೇಕು.
ಬೆಳಗ್ಗೆ ಬೇಗಾ ಎದ್ದು ಮನೆಯನ್ನು ಸ್ವಚ್ಛ ಮಾಡಿ ಹೊಸ್ತಿಲ ಪೂಜೆ ಮಾಡಿಕೊಂಳ್ಳಬೇಕು. ಪ್ರತಿದಿನ ಮಾಡುವ ಹಾಗೆ ಪೂಜೆ ಮಾಡಿ. ನಾಗಪ್ಪನನ್ನು ಪ್ರತಿಷ್ಟಪಾನೇ ಮಾಡಬೇಕು. ಹಣ್ಣುಗಳನ್ನು ಇಡಬೇಕು.ಈ ನಾಗರ ಪಂಚಮಿ ಗೇ ಪ್ರಸಾದ ಏನು ಎಂದರೆ ಚಿಗಳಿ ತಂಬಿಟ್ಟು ಮಾಡಬೇಕು. ಆ ದಿನ ಯಾವುದೇ ಕಾರಣಕ್ಕೂ ರೊಟ್ಟಿ ಮತ್ತು ಬಜ್ಜಿ ಬೋಂಡವನ್ನು ಮಾಡಬಾರದು. ಆದಷ್ಟು ಉಪವಾಸ ಇದ್ದು ಪೂಜೆ ಮಾಡಿದರೆ ಒಳ್ಳೆಯದು.
ನಾಗಪ್ಪನಿಗೆ 5 ಎಳೆ ಅಂಗನೂಲು ಮತ್ತು ಗೆಜ್ಜೆ ವಸ್ತ್ರವನ್ನು ಹಾಕಬೇಕು. ನಂತರ ಹೂವಿನಿಂದ ಅಲಂಕಾರ ಮಾಡಬೇಕು. ಎರಡು ದೀಪ ಹಚ್ಚಬೇಕು ಮತ್ತು ವ್ರತದ ದಾರವನ್ನು ಕೂಡ ಸಿದ್ಧತೆ ಮಾಡಬೇಕು. ಅದನ್ನು ನಾಗಪ್ಪನ ಮುಂದೆ ಇಟ್ಟು ನಮಸ್ಕಾರ ಮಾಡಿ ನಂತರ ಮನೆಯಲ್ಲಿ ಇರುವ ಸದಸ್ಯರಿಗೇ ಕಟ್ಟಬೇಕು.ನಂತರ ಪೂಜೆಯನ್ನು ಪ್ರಾರಂಭ ಮಾಡಬೇಕು. ವ್ರತದ ದಾರವನ್ನು ಕಟ್ಟಿ ಹಾಲನ್ನು ಹಾಕಬೇಕು.ಹಸಿ ಹಾಲಿಗೆ ತುಪ್ಪವನ್ನು ಹಾಲನ್ನು ಎರೆಯಬೇಕು.
ಇನ್ನು ಹುತ್ತಕೆ ಪೂಜೆಯನ್ನು ಮಾಡಿ ನಮಸ್ಕಾರ ಮಾಡಿಕೊಂಡು ಬರಬೇಕು.ಈ ರೀತಿಯಾಗಿ ಹಾಲು ತುಪ್ಪ ಹಾಕುವುದರಿಂದ ಮನೆ ಕೂಡ ಶಾಂತವಾಗಿ ಇರುತ್ತದೇ. ಈ ರೀತಿ ಮಾಡಿದರೆ ನಿಮಗೆ ಇರುವ ಚರ್ಮದ ಕಾಯಿಲೆ ಕೂಡ ವಾಸಿ ಮಾಡಿಕೊಳ್ಳಬಹುದು.ಸಂತಾನ ಅಪೇಕ್ಷೆವುಳ್ಳವರು ಈ ನಾಗರ ಪಂಚಮಿ ಮಾಡುವುದರ ಜೊತೆಯಲ್ಲಿ ಷಷ್ಠಿ ಪೂಜೆ ಮಾಡುತ್ತ ಬನ್ನಿ.ಇದೆ ರೀತಿ ಮನೆಯಲ್ಲಿ ಮತ್ತು ದೇವಸ್ಥಾನದಲ್ಲಿ ಆಚರಣೆ ಮಾಡಬೇಕು.ಸುಬ್ರಮಣ್ಯ ಪೂಜೆ ಮಾಡುವುದರಿಂದ ನಿಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಬಹುದು.
ಪೂಜಾ ಸಮಯ ಸೋಮವಾರ ಪೂಜೆ ಮಾಡುವುದರಿಂದ ಸೋಮವಾರ ಬೆಳಗ್ಗೆ ಪೂಜಾ ಮುಹೂರ್ತ ಇರುವಂತಹದು. ಸೋಮವಾರ ಬೆಳಗ್ಗೆ 6:05 ನಿಮಿಷಕ್ಕೆ ಪ್ರಾರಂಭವಾದರೆ 8:39 ನಿಮಿಷದ ತನಕ ತುಂಬಾನೇ ಒಂದು ಶುಭ ಸಮಯ ಇರುತ್ತದೆ. ಈ ಒಂದು ಸಮಯದಲ್ಲಿ ಮನೆಯಲ್ಲಿ ಪೂಜೆ ಮಾಡಿಕೊಂಡು ದೇವಸ್ಥಾನಕ್ಕೆ ಹೊಗಿ ಪೂಜೆಯನ್ನು ಮಾಡಬಹುದು. ಕಾಳಸರ್ಪದೋಷ ಇರುವವರು ಶಿವನ ದೇವಸ್ಥಾನಕ್ಕೆ ಹೊಗಿ ನಿಮ್ಮ ಹೆಸರಿನಲ್ಲಿ ರುದ್ರಾಭಿಷೇಕ ಕೊಡುವುದರಿಂದ ನಿಮಗೆ ಆಗಿರುವ ಕಾಳಸರ್ಪದೋಷ ವನ್ನು ನಿವಾರಣೆ ಮಾಡಿಕೊಳ್ಳಬಹುದು.