ದೀಪಾವಳಿ ಹಬ್ಬವು ನಮಗೆ ಅಶ್ವಿಜ ಮಾಸ ಕೃಷ್ಣ ಪಕ್ಷ ತ್ರೇಯೋದೇಶಿ ತಿಥಿಯು ನವೆಂಬರ್ 10ನೇ ತಾರೀಕು ಶುಕ್ರವಾರ ಮಧ್ಯಾಹ್ನ 12:36 ನಿಮಿಷಕ್ಕೆ ಪ್ರಾರಂಭವಾದರೆ 11ನೇ ತಾರೀಕು ಶನಿವಾರ ಮಧ್ಯಾಹ್ನ 1:58 ನಿಮಿಷಕ್ಕೆ ಮುಕ್ತಯ ಆಗುತ್ತದೆ. ಈ ಒಂದು ಸಮಯದಲ್ಲಿ ಯಾವೆಲ್ಲಾ ಪೂಜೆ ಆಚರಣೆ ಮಾಡಬೇಕು ಎಂದರೆ ನವೆಂಬರ್ 10ನೇ ತಾರೀಕು ಬೆಳಗ್ಗೆನೇ ಪೂಜೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇನ್ನು ಅರೋಗ್ಯ ಸಮಸ್ಸೆ ಇರುವವರು ದನ್ವತರಿ ಪೂಜೆಯನ್ನೂ ಮಾಡುತ್ತಾರೆ.
ಇನ್ನು ನವೆಂಬರ್ 10ನೇ ತಾರೀಕು ಯಾಮ ದೀಪರಾಧನೆಯನ್ನು ಸಂಜೆ ಸಮಯದಲ್ಲಿ ಮಾಡಬೇಕು ಹಾಗು ಕುಬೇರ ಪೂಜೆಯನ್ನು ಮಾಡಬಹುದು. ಇನ್ನು ನವೆಂಬರ್ 11 ನೇ ತಾರೀಕು ನೀರು ತುಂಬುವ ಹಬ್ಬ ಹಾಗು ಕುಬೇರ ಪೂಜೆಯನ್ನು ಸಹ ಮಾಡಬಹುದು.
ನಂತರ ಅಶ್ವಿಜ ಮಾಸ ಕೃಷ್ಣ ಪಕ್ಷ ಚತುರ್ದಶಿ ತಿಥಿ ಪ್ರಾರಂಭವಾಗುವುದು ಮತ್ತು ನವೆಂಬರ್ 10ನೇ ತಾರೀಕು ಶನಿವಾರ ಮಧ್ಯಾಹ್ನ 1:58 ನಿಮಿಷಕ್ಕೆ ಪ್ರಾರಂಭವಾದರೆ ಅದು 11ನೇ ತಾರೀಕು ಭಾನುವಾರ ಮಧ್ಯಾಹ್ನ 2:45 ನಿಮಿಷದವರೆಗೂ ಇರುತ್ತದೆ.
ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಅಮಾವಾಸ್ಯೆ ತಿಥಿಯು ನವೆಂಬರ್ 12ರಂದು ಮಧ್ಯಾಹ್ನ 02:45 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಅಂದರೆ ನವೆಂಬರ್ 13 ಮಧ್ಯಾಹ್ನ 02:57 ಕ್ಕೆ ಕೊನೆಗೊಳ್ಳುತ್ತದೆ. ದೀಪಾವಳಿಯ ದಿನದಂದು, ಪ್ರದೋಷಕಾಲದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಆದ್ದರಿಂದ ಮಹಾಲಕ್ಷ್ಮಿಯನ್ನು ಪೂಜಿಸುವ ಸಮಯ ನವೆಂಬರ್ 10 ರಂದು ಲಭ್ಯವಿದೆ.ಇನ್ನು ನವೆಂಬರ್ 12ನೇ ತಾರೀಕು ಸೋಮವಾರ ಅಮಾವಾಸ್ಯೆ ಪೂಜೆ ಒಂದೇ ಇರುತ್ತದೆ. ಇನ್ನು ನವೆಂಬರ್ 15ನೇ ತಾರೀಕು ಸಂಜೆ ಯಮದೀಪರಾಧನೆ ಮಾಡಬಹುದು.
ದೀಪಾವಳಿ ಹಬ್ಬದ ದಿನ ಕಳಸವನ್ನು ಯಾವ ರೀತಿ ಸಂಪ್ರದಾಯಕವಾಗಿ ಕಳಸವನ್ನು ಪ್ರತಿಷ್ಟಾಪನೆ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ. ಮೊದಲು ಪೀಠವನ್ನು ಸಿದ್ಧತೆ ಮಾಡಿಕೊಂಡು ಲಕ್ಷ್ಮಿ ಕಟಾಕ್ಷ ರಂಗೋಲಿ ಅಂತ ಕರೆಯುತ್ತಾರೆ ಹಾಗು ಅಮ್ಮನವರ ಬಿಜಾಕ್ಷರಿ ಮಂತ್ರವನ್ನು ಬರೆಯಬೇಕು. ನಂತರ ರಂಗೋಲಿ ಮೇಲೆ ಜವಾದ್ ಪೌಡರ್ ಮತ್ತು ಪಂಚಾ ಕರ್ಪೂರ ಹಾಕಿದರೆ ತುಂಬಾ ಒಳ್ಳೆಯದು. ನಂತರ ಒಂದು ತಟ್ಟೆಯಲ್ಲಿ 5 ಇಡೀ ಅಕ್ಕಿಯನ್ನು ತೆಗೆದುಕೊಳ್ಳಬೇಕು. ಮೊದಲು ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು,ಓಂ, ಶ್ರೀಂ ಅಂತ ಹೇಳಿ ಬರೆಯಬೇಕಾಗುತ್ತದೆ. ನಂತರ ಎರಡು ವೀಳ್ಯದೆಲೆ ತೆಗೆದುಕೊಂಡು ಅದರ ಮೇಲೆ ಶ್ರೀ ಗಂಧದಿಂದ ಶ್ರೀಂ ಅಂತ ಬರೆಯಬೇಕು. ನಂತರ ಅಕ್ಷತೆ ಹಾಕಿ ಕಳಸವನ್ನು ಪ್ರತಿಷ್ಟಪಾನೇ ಮಾಡಿಕೊಳ್ಳಬೇಕು.
ಪುಟ್ಟ ಬಿಂದಿಗೆ ಅಥವಾ ಪುಟ್ಟ ಕಳಸವನ್ನು ಇಡಬೇಕು. ಕಳಸಕ್ಕೆ ಶ್ರೀಗಂಧ ಅರಿಶಿನ ಕುಂಕುಮವನ್ನು ಹಚ್ಚಬೇಕು. ಅಕ್ಟೋಬರ್ 26ನೇ ತಾರೀಕು ಬುಧವಾರ ಬೆಳಗ್ಗೆ 6:28 ನಿಮಿಷದಿಂದ ಇಡಿದು 8:43 ನಿಮಿಷದವರೆಗೆ ನಿಮಗೆ ಸಮಯ ಇರುತ್ತದೆ. ಈ ಸಮಯದಲ್ಲಿ ನೀವು ಕಳಸವನ್ನು ಪ್ರತಿಷ್ಟಾಪನೆ ಮಾಡಬಹುದು ಹಾಗು ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡುವವರು ಕೂಡ ಮಾಡಬಹುದು. ಇನ್ನು ಕಳಸದ ಒಳಗೆ ಹಸುವಿನ ಗಂಜಲ, ಗಂಗಾಜಲ, ರೋಸ್ ವಾಟರ್, ಶ್ರೀಗಂಧ, ಅರಿಶಿನ ಕುಂಕುಮ ಪಂಚಾ ಕರ್ಪೂರ, ಜವಾದ್ ಪೌಡರ್,2ಆಡಿಕೆ,ಗೊರಚನ್ ಹಾಕಬೇಕು. ನಂತರ ಕಳಸಕ್ಕೆ ಕಂಕಣವನ್ನು ಕಟ್ಟಬೇಕು.ಇನ್ನು ಮುಖ್ಯವಾಗಿ ಕಳಸದ ಒಳಗೆ ಗರಿಕೆ ಹಾಗು ಒಂದು ಹೂವನ್ನು ಕೂಡ ಹಾಕಬೇಕು.
ನಂತರ ಗಣೇಶ ಹಾಗು ಲಕ್ಷ್ಮಿ ಹತ್ತಿರ ಬೇಡಿಕೊಳ್ಳಿ. ಇವತ್ತು ಲಕ್ಷ್ಮಿ ಪೂಜೆ ಮಾಡುತ್ತೇವೆ ನಮ್ಮ ಕಷ್ಟವನ್ನು ಪರಿಹಾರ ಮಾಡಿಕೊಂಡು ನಮ್ಮಲ್ಲಿ ಸಂಪತ್ತು ಹೆಚ್ಚಾಗಲಿ ಮತ್ತು ನಮಗೆ ಆಶೀರ್ವಾದ ಮಾಡಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು ಹಾಗು ಯಾವುದೇ ರೀತಿಯ ವಿಘ್ನಗಳು ಬರಬಾರದು ಎಂದು ಕೇಳಿಕೊಳ್ಳಿ. ಇದರ ನಂತರ ಕಳಸ ಪ್ರತಿಷ್ಟಾಪನೆ ಮಾಡಿಕೊಳ್ಳಿ.
ನಂತರ 5 ವೀಳ್ಯದೆಲೆ ಹಾಗು ಮಾವಿನ ಸೊಪ್ಪು ಹಾಕಬೇಕು. ನಂತರ ಒಂದು ಚೆನ್ನಾಗಿ ಇರುವ ತೆಂಗಿನಕಾಯಿ ಇಡಬೇಕು. ಗೆಜ್ಜೆ ವಸ್ತ್ರ ಹಾಗು ಮಾಂಗಲ್ಯವನ್ನು ಹಾಕಬೇಕು. ಇನ್ನು ವರಮಹಾಲಕ್ಷ್ಮಿ ಇಟ್ಟಿರುವ ಅಮ್ಮನವರ ಮುಖಪದ್ಮವನ್ನು ಸಹ ಇಡಬಹುದು. ಆದಷ್ಟು ಅವತ್ತು ಮಲ್ಲಿಗೆ ಹೂವು, ಕೆಂಪು ಹೂವು, ಸೇವಂತಿಗೆ ಹೂವಿನಿಂದ ಅಲಂಕಾರ ಮಾಡಿ. ಅಮ್ಮನವರಿಗೆ ಪ್ರಿಯವಾದ ವಸ್ತುಗಳನ್ನು ಸಹ ಇಡಬೇಕು. ಲವಂಗ ಏಲಕ್ಕಿ ಕಮಲ ಬಳೆ, ಕವಡೆ ಹಾಗು ಇನ್ನು ಅಮ್ಮನವರಿಗೆ ಇಷ್ಟವಾದ ವಸ್ತುಗಳನ್ನು ಸಹ ಇಡಬಹುದು.
ಇನ್ನು 5 ರೀತಿಯಾ ಹಣ್ಣುಗಳು ಹಾಗು ಸ್ವೀಟ್, ಹೋಳಿಗೆ, ಹೆಸರು ಬೆಳೆ ಪಾಯಸ, ಕೋಸಂಬರೀ ಅನ್ನು ಸಹ ಇಡಬಹುದು.ಅದರಲ್ಲು ಬೆಲ್ಲದಲ್ಲಿ ಮಾಡಿದ ಪಾನಕವನ್ನು ಇಡಬೇಕು. ಕಾಯಿಯನ್ನು ಪೂಜೆ ಮುಗಿಯುವ ಸಮಯದಲ್ಲಿ ಮಹಾ ಮಂಗಳರಾತಿ ಮಾಡಿ ಕಾಯಿಯನ್ನು ಒಡೆಯಬೇಕು.ಅಮ್ಮನವರಿಗೆ ನೀವು ಸೀರೆಯನ್ನು ಉಡಿಸಿ ಅಲಂಕಾರ ಮಾಡಬಹುದು. ಆದಷ್ಟು ಇರುವ ಬಂಗಾರವನ್ನೇ ಅಮ್ಮನವರಿಗೆ ಹಾಕಿದರೇ ಒಳ್ಳೆಯದು. ಹಾಗಾಗಿ ಅಮ್ಮನವರ ಪೂಜೆಯನ್ನು ಶ್ರೇದ್ದೆ ಭಕ್ತಿಯಿಂದ ಪೂಜೆ ಮಾಡಿದರೇ ತುಂಬಾ ಒಳ್ಳೆಯದು ಆಗುತ್ತದೆ.