ಸೊಳ್ಳೆಗಳನ್ನು ಹೊಡಿಸುವುದಕ್ಕೆ ಒಂದು ಈರುಳ್ಳಿ ಇದ್ದರೆ ಸಾಕು. ಒಂದೇ ಒಂದು ಸೊಳ್ಳೆ ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ.ಮಳೆಗಾಲದಲ್ಲಿ ಸೊಳ್ಳೆ ಕಾಟ ಜಾಸ್ತಿ ಎಂದು ಹೇಳಬಹುದು.ಸೊಳ್ಳೆಗಳ ಕಡಿತವು ಹಲವು ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ರಾಸಾಯನಿಕ ಕೀಟನಾಶಕಗಳ ಬದಲು ನೈಸರ್ಗಿಕವಾಗಿ ಸಿಗುವ ಕೆಲವು ಉತ್ಪನ್ನಗಳನ್ನು ಬಳಸಿ ಈ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು.
ಮಳೆಗಾಲ ಶುರುವಾಯಿತೆಂದರೆ, ಸೊಳ್ಳೆಗಳ ಕಾಟವು ಶುರುವಾಗಿದೆ ಎಂದರ್ಥ. ಏಕೆಂದರೆ ಈ ಮಳೆಗಾಲವು ಸೊಳ್ಳಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ಸೊಳ್ಳೆಗಳು ಹೆಚ್ಚಿರುತ್ತವೆ. ಸಂಜೆಯಾಗುತ್ತಿದ್ದಂತೆ ಮನೆಗೆ ಮುತ್ತಿಗೆಯಿಡುತ್ತ, ತನ್ನದೇ ರಾಜ್ಯಬಾರ ಎಂಬಂತೆ ಮನುಷ್ಯರಿಗ ಕಡಿಯುತ್ತ, ರಕ್ತವನ್ನು ಹೀರುತ್ತ ಕಾಟ ಕೊಡುತ್ತಿರುತ್ತವೆ. ಸೊಳ್ಳೆ ಕಡಿತವು ಫೈಲೇರಿಯಾ, ಎನ್ಸೆಫಾಲಿಟಿಸ್, ಚಿಕನ್ ಗೂನ್ಯಾ, ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ಕಾಯಿಲೆಗಳ ಹರಡುವಿಕಗೆ ಕಾರಣವಾಗುತ್ತದೆ. ಕೆಲವು ವಿಧದ ಸೊಳ್ಳೆಗಳ ಕಡಿತವು ಗುಳ್ಳೆಗಳು ಮತ್ತು ತೀವ್ರವಾದ ಉರಿಯೂತವನ್ನು ಉಂಟುಮಾಡಬಹುದು. ಸೊಳ್ಳೆಗಳ ಕಾಟವನ್ನು ನಿವಾರಿಸಲು ಹಲವಾರು ಪರಿಣಾಮಕಾರಿ ರಾಸಾಯನಿಕಯುಕ್ತ ಕೀಟನಾಶಕಗಳಿದ್ದರೂ, ಅದು ನಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಹಾಗಾಗಿ ರಾಸಾಯನಿಕ ಉತ್ಪನ್ನಗಳನ್ನು ಬಳಸದೆ ಆರೋಗ್ಯಕರ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸೊಳ್ಳೆಗಳು ಮನೆಯನ್ನು ಪ್ರವೇಶಿಸದಂತೆ ತಡೆಯಬಹುದು.
ಮೊದಲು ಒಂದು 7-8 ಲವಂಗವನ್ನು ತೆಗೆದುಕೊಳ್ಳಬೇಕು. ಲವಂಗವನ್ನು ಚೆನ್ನಾಗಿ ಗುದ್ದಿ ಪುಡಿ ಮಾಡಿ ಬೌಲ್ ಒಳಗೆ ಹಾಕಿ . ನಂತರ ಎಳ್ಳೆಣ್ಣೆ ತೆಗೆದುಕೊಂಡು ಬೌಲ್ ಒಳಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈರುಳ್ಳಿ ತೆಗೆದುಕೊಂಡು ಸಿಪ್ಪೆ ತೆಗೆದುಕೊಳ್ಳಿ. ಮದ್ಯದಲ್ಲಿ ಸ್ವಲ್ಪ ಈರುಳ್ಳಿ ತೆಗೆದು ಮಿಕ್ಸ್ ಮಾಡಿರುವ ಎಳ್ಳೆಣ್ಣೆ ಹಾಕಿ ಮತ್ತು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು.ಈ ರೀತಿ ದೀಪ ಉರಿಸುವುದರಿಂದ ಸೊಳ್ಳೆ ಕಾಟ ಇರುವುದಿಲ್ಲ.ಈ ಹೊಗೆ ಸೊಳ್ಳೆಗಳಿಗೆ ಆಗುವುದಿಲ್ಲ ಮತ್ತು ಸೊಳ್ಳೆಗಳು ಸಹ ಮನೆಯಿಂದ ಓಡಿ ಹೋಗುತ್ತದೆ.ತುಂಬಾನೇ ಎಫೆವ್ಟ್ ಆಗಿರುವ ಮನೆಮದ್ದು ಒಮ್ಮೆಯಾದರೂ ಟ್ರೈ ಮಾಡಿ ನೋಡಿ.