ಪ್ರತಿಯೊಬ್ಬರ ಮನೆಯಲ್ಲೂ ಕೂಡ ಪ್ರಾಣಿಗಳನ್ನ, ಪಕ್ಷಿಗಳನ್ನು ಸಾಕುದನ್ನ ಕಾಣುತ್ತೇವೆ. ಇದರಿಂದ ಮನಸ್ಸಿಗೆ ಉಲ್ಲಾಸ ಉತ್ಸವವನ್ನು ಕೂಡ ತಂದುಕೊಡುತ್ತದೆ. ಮನೆಯಲ್ಲಿ ಪ್ರಾಣಿಗಳು ಇದ್ದರೆ ಮನೆಯಲ್ಲಿ ಪ್ರತಿಯೊಬ್ಬರಿಗೂ ಕೂಡ ಸಂತೋಷವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದೈನಂದಿನ ಜೀವನದಲ್ಲಿ ಕೆಲವು ಮಾತುಗಳ ಕುರಿತು ತಿಳಿಸುತ್ತದೆ. ಅದನ್ನು ಅದರ ಅನುಸಾರವಾಗಿ ಮನೆಯಲ್ಲಿ ಕೆಲವು ಪ್ರಾಣಿ ಮತ್ತು ಪಕ್ಷಿ ಸಾಕುವುದನ್ನು ಕೂಡ ಉಲ್ಲೇಖಿಸಲಾಗಿದೆ.
ಸನಾತನ ಧರ್ಮದಲ್ಲಿ ಪ್ರಾಣಿ ಹಾಗೂ ಪಕ್ಷಿಗಳನ್ನು ಸಹ ದೇವರು ಮತ್ತು ದೇವತೆಗಳ ಸೇವಕರು ಅಥವಾ ವಾಹನಗಳು ಎಂದು ಗುರುತಿಸಲಾಗಿದೆ. ದೇವರು ದೇವತೆಗಳು ಅನೇಕ ರೀತಿಯ ಪ್ರಾಣಿಗಳನ್ನು ಪಕ್ಷಿಗಳನ್ನು ತಮ್ಮ ಸೇವಕರಾಗಿ ಇಟ್ಟಿರುವುದನ್ನು ಕಾಣುತ್ತೇವೆ ಗಣಪತಿಗೆ ಇಲ್ಲಿ ಷಣ್ಮುಖನಿಗೆ ನವಿಲು ಹಾಗೆ ಅನೇಕ ದೇವರಿಗೆ ಅನೇಕ ಪ್ರಾಣಿಗಳು ಇರುವುದನ್ನು ಕಾಣುತ್ತೇವೆ. ಯಾವೆಲ್ಲಾ ಪ್ರಾಣಿಗಳು ಮನೆಯಲ್ಲಿ ಇದ್ದರೆ ಹೆಚ್ಚು ಸಕಾರಾತ್ಮಕತೆ ಇರುತ್ತದೆ ಎಂಬುದನ್ನ ಮೊದಲು ತಿಳಿದುಕೊಳ್ಳಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಯಿಯನ್ನು ಸಾಕುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿ ನಲೆಸುತ್ತಾಳೆ.
ನಿಮ್ಮ ಮನೆಯಲ್ಲಿ ನಾಯಿಯನ್ನು ಸಾಕಲು ಆಗದಿದ್ದರೆ, ಪ್ರತಿದಿನ ಒಂದು ರೊಟ್ಟಿಯನ್ನ ಹೊರಗಿನ ನಾಯಿಗಳಿಗೆ ಹಾಕಬೇಕು. ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ. ನಾಯಿಯನ್ನು ಸಾಕುವುದನ್ನು ಪ್ರತಿಯೊಬ್ಬರ ಮನೆಯಲ್ಲೂ ಕೂಡ ಕಾಣಬಹುದು. ವಾಸ್ತು ಶಾಸ್ತ್ರದಲ್ಲಿ ಕುದುರೆಯನ್ನ ಐಶ್ವರ್ಯದ ಸಂಕೇತ ಎಂದು ಪರಿಗಣಿಸಲಾಗಿದೆ. ಆದರೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕುದುರೆಯನ್ನು ಸಾಕಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಮನೆಯಲ್ಲಿ ಕುದುರೆ ಚಿತ್ರ ಅಥವಾ ವಿಗ್ರಹವನ್ನು ಇರಿಸಬಹುದು ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಿರುವಂತೆ ಈ ಕುದುರೆ ಚಿತ್ರವನ್ನು ಹಾಕುವುದರಿಂದ ಮಂಗಳಕರವಾಗುತ್ತದೆ ಎಂದು ಹೇಳಲಾಗಿದೆ. ಕುದುರೆಯನ್ನ ಸಾಕಲು ಸಾಧ್ಯವಿಲ್ಲ ಕೆಲವೊಂದು ಪ್ರದೇಶದಲ್ಲಿ ಮಾತ್ರ ಕುದುರೆಯನ್ನು ಸಾಕುದನ್ನು ಕಾಣುತ್ತೇವೆ. ಈ ಚಿತ್ರವನ್ನು ಇರಿಸುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ, ಅಭಿವೃದ್ಧಿ ಆಗುತ್ತದೆ.
ಅಕ್ವೇರಿಯನ್ ಗಳನ್ನು ಮನೆಯಲ್ಲಿ ಇಡುವುದನ್ನು ಕಾಣಬಹುದು. ಅಕ್ವೇರಿಯಂ ಗಳನ್ನ ಮನೆಯಲ್ಲಿ ಇಡಲು ತುಂಬಾ ಜನರು ಇಷ್ಟಪಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಇದ್ದರೆ ಶುಭ. ಇದರಲ್ಲೂ ಚಿನ್ನದ ಬಣ್ಣದ ಮೀನುಗಳ ಇದ್ದರೆ ಮನೆಯಲ್ಲಿ ಸುಖ ಶಾಂತಿ ಹೆಚ್ಚಾಗುತ್ತದೆ.
ಹಸುವಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ಈ ಹಸುವನ್ನ ಸಾಕುವುದರಿಂದ ಮನೆಯಲ್ಲಿ ಲಕ್ಷ್ಮಿ ಆಶೀರ್ವಾದ ಇರುತ್ತದೆ. ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಯಲ್ಲೇ ಹಸುವನ್ನ ಸಾಕುವುದನ್ನು ಕಾಣುತ್ತೇವೆ. ಇದರಿಂದ ವಿಶೇಷವಾದ ಸಂಪತ್ತು ಅಭಿವೃದ್ಧಿಯನ್ನು ಹೊಂದಿರುತ್ತದೆ. ಮನೆಯಲ್ಲಿ ಹಸುಗಳು ಇದ್ದರೆ ಲಕ್ಷ್ಮಿ ಆಶೀರ್ವಾದ ಸದಾ ಇರುತ್ತದೆ ಎಂಬ ನಂಬಿಕೆ. ಹಿಂದಿನ ಕಾಲದಿಂದಲೂ ನಡೆದು ಬಂದಿದೆ. ಇದರಿಂದ ಹಸುಗಳನ್ನು ಸಾಕುವುದನ್ನು ಕಾಣುತ್ತೇವೆ. ಪ್ರತಿಯೊಂದು ಪ್ರಾಣಿ ಪಕ್ಷಿಗಳನ್ನು ಸಾಕುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕೂಡ ಪರಿಹಾರ ಮುಕ್ತಿಯನ್ನು ಹೊಂದಲು ಸಾಧ್ಯ.