ವ್ಯಾಸಲಿನ್ ದಿಂದ ಹೀಗೆ ಮಾಡಿದರೆ ನಿಮ್ಮ ಪಾದಗಳ ಹಿಮ್ಮಡಿ 3 ದಿನಗಳಲ್ಲಿ ಮಟ್ಟು ಮಾಯವಾಗುತ್ತದೆ!

ಚಳಿಗಾಲ ಬಂತೆಂದರೆ ಸಾಕು ನಮ್ಮ ತ್ವಚೆಯ ಆರೈಕೆಗೆ ನಾವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಾತಾವರಣದಲ್ಲಿ ತ್ವಚೆಯು ಹೆಚ್ಚು ಶುಷ್ಕಗೊಳ್ಳುವುದರಿಂದ ನಾವು ನಮ್ಮ ತ್ವಚೆಗೆ ಬೆಚ್ಚಗಿನ ವರ್ತುಲವನ್ನು ನಿರ್ಮಿಸಬೇಕಾಗುತ್ತದೆ. ಅದರಲ್ಲೂ ನಿಮ್ಮ ತುಟಿ ಒಡೆಯುವಿಕೆ ಮುಖದಲ್ಲಿ ಬಿರುಕು ಬಿಡುವಿಕೆ ಇಲ್ಲವೇ ಬಿಳಿಯ ಚರ್ಮದಂತಹ ಪದರದ ನಿರ್ಮಾಣ ಅದರಲ್ಲಿ ಗಾಯಗಳುಂಟಾಗುವುದು ಮೊದಲಾದ ಸಮಸ್ಯೆಗಳನ್ನು ಹೋಗಲಾಡಿಸಲು ನೀವು ತುಪ್ಪ ಇಲ್ಲವೇ ತೆಂಗಿನೆಣ್ಣೆಯ ಬಳಕೆಯನ್ನು ಮಾಡಬಹುದು. ಇವುಗಳು ಯಾವುದೇ ನೋವಿಲ್ಲದೆಯೇ ಈ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ವ್ಯಾಸಲಿನ್ ಹಚ್ಚಿಕೊಳ್ಳುವುದರಿಂದ ಕೂಡ ಬಿರುಕಿನ ಸಮಸ್ಯೆಗೆ ಮಂಗಳ ಹಾಡಬಹುದು.

ನಿಮ್ಮ ತುಟಿ ಮತ್ತು ಮುಖದೊಂದಿಗೆ ಕಾಲುಗಳೂ ಕೂಡ ಚಳಿಗಾಲದಲ್ಲಿ ಬಿರುಕು ಬಿಡುತ್ತವೆ ಮತ್ತು ತಮ್ಮ ಅಂದವನ್ನು ಕಳೆದುಕೊಂಡುಬಿಡುತ್ತವೆ. ಅಂತೆಯೆ ಕಾಲು ಅಲ್ಲವೇ ಎಂಬಂತಹ ತಾತ್ಸಾರ ಕೂಡ ಮನದಲ್ಲಿರುತ್ತದೆ. ಆದರೆ ನಿಮ್ಮ ಕಾಲು ಪಾದಗಳೂ ಕೂಡ ನಿಮ್ಮ ಸೌಂದರ್ಯಕ್ಕೆ ಮೆರುಗನ್ನು ನೀಡುತ್ತವೆ ಎಂಬುದನ್ನು ಮಾತ್ರ ಮರೆಯದಿರಿ. ಕಾಲಿನ ಸೌಂದರ್ಯಕ್ಕೆ ಮತ್ತು ಸ್ವಚ್ಛತೆಗೆ ನೀವು ಹೆಚ್ಚಿನ ಗಮನವನ್ನು ನೀಡಲೇಬೇಕು. ಆಗ ಮಾತ್ರವೇ ಪಾದದ ಹಿಮ್ಮಡಿ ಒಡೆಯುವಿಕೆ, ಬಿರುಕಿನಲ್ಲಿರುವ ನೋವನ್ನು ತಡೆಯಲು ಸಾಧ್ಯ. ಇಂದಿನ ಲೇಖನದಲ್ಲಿ ಕೆಲವೊಂದು ಸರಳ ಸಲಹೆಗಳ ಮೂಲಕ ಪಾದದ ಸ್ವಚ್ಛತೆ ಮತ್ತು ಆರೈಕೆಯನ್ನು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ…

ಮಾಯಿಶ್ಚರೈಸರ್

ಚಳಿಗಾಲದಲ್ಲಿ ನಿಮ್ಮ ಪಾದಗಳಿಗೆ ನಿರಂತರ ಮಾಯಿಶ್ಚರೈಸಿಂಗ್ ಮಾಡುತ್ತಿರಿ. ಇದು ಪಾದಗಳನ್ನು ಮೃದುವಾಗಿಸುತ್ತದೆ ಮತ್ತು ಒಣಗದಂತೆ ತಡೆಯುತ್ತದೆ. ದಿನಕ್ಕೊಮ್ಮೆಯಾದರೂ ಮಾಯಿಶ್ಚರೈಸಿಂಗ್ ಕ್ರಮವನ್ನು ಅನುಸರಿಸಿ.

ಎಕ್ಸ್‌ಫೋಲಿಯೇಶನ್

ಮೃತಕೋಶಗಳನ್ನು ನಿವಾರಿಸಲು ಮತ್ತು ನಿಮ್ಮ ಉಗುರು ಹಾಗೂ ಪಾದದ ತ್ವಚೆಯಲ್ಲಿ ಸ್ಥಳ ಪಡೆದುಕೊಂಡಿರುವ ಕೆಲವೊಂದು ಬೇಡದ ಅಂಶಗಳನ್ನು ನಿವಾರಿಸಲು ಎಕ್ಸ್‌ಫೋಲಿಯೇಶನ್ ನೆರವಾಗುತ್ತದೆ. ಇದನ್ನು ಸ್ವಚ್ಛಮಾಡಲು ಮೃದುವಾದ ಬ್ರಶ್ ಬಳಸಿ.

ಪ್ಯೂಮಿಕ್ ಸ್ಟೋನ್ ನಿಂದ ಕಾಲು ತಿಕ್ಕಿ

ವಾರಕ್ಕೆ ಎರಡು ಬಾರಿಯಾದರು ಮೈ ಉಜ್ಜುವ ಕಲ್ಲಿನಿಂದ ನಿಮ್ಮ ಪಾದಗಳನ್ನು. ಬೆರಳುಗಳನ್ನು ಮತ್ತು ಅಂಗಾಲುಗಳನ್ನು ಮೃದುವಾಗಿ ತಿಕ್ಕಿ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಪಾದದಲ್ಲಿನ ನಿರ್ಜೀವ ಕೋಶಗಳನ್ನು ನಿವಾರಿಸಬಹುದು. ಪ್ರತಿ ಪಾದವನ್ನು ಎರಡು ನಿಮಿಷಗಳ ಕಾಲ ಮೆದುವಾಗಿ ತಿಕ್ಕುವುದರಿಂದ ಪಾದಗಳು ಮೃದುವಾಗುತ್ತವೆ ಮತ್ತು ರೇಶ್ಮೆಯಂತೆ ಹೊಳೆಯುತ್ತವೆ. ಆದರೆ ಯಾವುದೇ ಕಾರಣಕ್ಕು ಜೋರಾಗಿ ತಿಕ್ಕಬೇಡಿ. ಇದರಿಂದ ಚರ್ಮ ಹರಿಯುವ ಮತ್ತು ಕಿರಿಕಿರಿಯುಂಟು ಮಾಡುವ ಸಾಧ್ಯತೆಯಿದೆ.

ಸಾಕ್ಸ್ ಧರಿಸಿ

ಸಾಕ್ಸ್ ಧರಿಸುವುದರಿಂದ ನಿಮ್ಮ ಪಾದಗಳು ಧೂಳಿನಿಂದ ಸಂರಕ್ಷಣೆ ಪಡೆಯುತ್ತವೆ ಮತ್ತು ಬೇಗನೇ ಶುಷ್ಕಗೊಳ್ಳುವುದಿಲ್ಲ, ಬೆಚ್ಚಗಿರುತ್ತದೆ. ಮಾಯಿಶ್ಚರೈಸರ್ ಅನ್ನು ದಪ್ಪನಾಗಿ ಪಾದಗಳಿಗೆ ಹಚ್ಚಿಕೊಂಡ ನಂತರ ಸಾಕ್ಸ್‌ನಿಂದ ಅದನ್ನು ಕವರ್ ಮಾಡಿ.

ಬಿಸಿ ನೀರಿನ ಆರೈಕೆ

ಚಳಿಗಾದಲ್ಲಿ ನಿಮ್ಮ ಪಾದಗಳ ಆರೈಕೆಯಲ್ಲಿ ನೀವು ಅನುಸರಿಬೇಕಾದ ಸಲಹೆ ಬಿಸಿ ನೀರಿನ ಬಳಕೆಯಾಗಿದೆ. ಬಿಸಿ ನೀರಿನಲ್ಲಿ ಸ್ನಾನ ಮಾಡಿ ಇಲ್ಲವೇ ಸ್ವಲ್ಪ ಸಮಯ ನಿಮ್ಮ ಕಾಲುಗಳನ್ನು ಬೆಚ್ಚಗಿನ ನೀರಿನಲ್ಲಿ ಇರಿಸಿ. ಇದು ಪಾದವನ್ನು ರಿಫ್ರೆಶ್ ಮಾಡುತ್ತದೆ.

ತೆಂಗಿನೆಣ್ಣೆಯ ಮಸಾಜ್

ಪಾದಗಳನ್ನು ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದು ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ. ರಕ್ತದ ಹರಿವು ತ್ವಚೆಯನ್ನು ಮೃದುವಾಗಿಸುತ್ತದೆ. ದಿನದಲ್ಲಿ 2-3 ಬಾರಿ ಈ ಕ್ರಿಯೆಯನ್ನು ನೀವು ಅನುಸರಿಸಬಹುದಾಗಿದೆ. ಒಂದು ವೇಳೆ ನಿಮ್ಮ ಒಣ ತ್ವಚೆಗೆ ತೆಂಗಿನೆಣ್ಣೆ ಉತ್ತಮವಾದುದು. ಬಿಸಿಯಾದ ತೆಂಗಿನೆಣ್ಣೆಯನ್ನು ಹಿಮ್ಮಡಿಗೆ ಹಚ್ಚಿಕೊಂಡಿ ಮಸಾಜ್ ಮಾಡಿಕೊಳ್ಳಿ ನಂತರ ಬೆರಳು ತುದಿಯವರೆಗೆ ಚೆನ್ನಾಗಿ ನೀವಿಕೊಳ್ಳಿ ಕನಿ ಪಕ್ಷ 15 ನಿಮಿಷಗಳು ಕಾಲನ್ನು ಮಸಾಜ್ ಮಾಡಿ ನಂತರವಷ್ಟೇ ಮಲಗಲು ಹೋಗಿ.

ನಿಮ್ಮ ಪಾದಗಳನ್ನು ನೆನೆಸಿ

ಸ್ನಾನ ಮಾಡಿ ಪಾದಗಳನ್ನು ತೊಳೆದ ಮಾತ್ರಕ್ಕೆ ನಿಮ್ಮ ಪಾದಗಳು ಮೃದುವಾಗುವುದಿಲ್ಲ. ಇದರ ಜೊತೆಗೆ ಸ್ನಾನ ಮಾಡುವಾ ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ 5-10 ನಿಮಿಷಗಳ ಕಾಲ ನೆನೆಸಿ. ಹೀಗೆ ಮಾಡುವುದರಿಂದ ನಿಮ್ಮ ಒಣ ಹಾಗು ಒಡೆದ ಪಾದಗಳನ್ನು ಮೃದುವಾಗಿಸಬಹುದು. ಪಾದಗಳಲ್ಲಿರುವ ನಿರ್ಜೀವ ಕೋಶಗಳನ್ನು ಸುಲಭವಾಗಿ ತೊಡೆದು ಹಾಕಬಹುದು. ಆದರೆ ನಿಮ್ಮ ಪಾದಗಳನ್ನು ತುಂಬಾ ಹೊತ್ತು ನೆನೆಸಲು ಹೋಗಬೇಡಿ.

ಆಲೀವ್ ಆಯಿಲ್ ಬಳಕೆ

ಆಲೀವ್ ಆಯಿಲ್ ನೈಸರ್ಗಿಕ ಮಾಯಿಶ್ಚರೈಸರ್‌ನಂತೆ ಕೆಲಸ ಮಾಡುತ್ತಿದ್ದು ನಿಮ್ಮ ತ್ವಚೆಯು ಇದನ್ನು ಹೀರಿಕೊಂಡು ಒಣತ್ವವವನ್ನು ದೂರಮಾಡುತ್ತದೆ. ರಾತ್ರಿ ಮಲಗುವ ಮುನ್ನ ಆಲೀವ್ ಎಣ್ಣೆಯನ್ನು ಪಾದಗಳಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ನಿತ್ಯವೂ ಈ ಕ್ರಮವನ್ನು ಅನುಸರಿಸಿ.

ಶಿಯಾ ಬಟರ್ ಹಚ್ಚಿಕೊಳ್ಳಿ

ಡ್ರೈ ಸ್ಕಿನ್ ಮತ್ತು ತ್ವಚೆಯ ಬಿರುಕನ್ನು ಸಂರಕ್ಷಿಸುವಲ್ಲಿ ಶಿಯಾ ಬಟರ್ ಅತ್ಯುತ್ತಮವಾಗಿದೆ. ಇದು ತ್ವಚೆಯನ್ನು ಮೃದುವಾಗಿಸುತ್ತದೆ ಮತ್ತು ಆರೈಕೆ ಮಾಡುತ್ತದೆ. ನಿಮ್ಮ ಪಾದಗಳಿಗೆ ಇದನ್ನು ಹಚ್ಚಿ 30 ನಿಮಿಷ ಹಾಗೆಯೇ ಬಿಡಿ ನಂತರ ನೀರಿನಿಂದ ತೊಳೆದುಕೊಳ್ಳಿ.

ವ್ಯಾಸಲೀನ್

ಪ್ರತೀ ರಾತ್ರಿ ಮಲಗುವ ಮುನ್ನ, ನಿಮ್ಮ ಹಿಮ್ಮಡಿಗೆ ವ್ಯಾಸಲಿನ್ ಅನ್ನು ಸವರಿಕೊಳ್ಳಿ ಈ ಪೆಟ್ರೋಲಿಯಮ್ ಜೆಲ್ಲಿ ತ್ವಚೆಯನ್ನು ಮೃದುವಾಗಿಸುವುದರ ಜೊತೆಗೆ ಕಡಿಮೆ ಸಮಯದಲ್ಲೇ ಬಿರುಕಿನ ಸಮಸ್ಯೆಯನ್ನು ದೂರಮಾಡುತ್ತದೆ.

ಜೇನಿನ ಮಸಾಜ್

ನಿಮ್ಮ ಪಾದ ಒಣಗಿದ್ದು ತುರಿಕೆಯುಂಟಾಗುತ್ತಿದೆಯೇ? ಹಾಗಿದ್ದರೆ ಈ ಸರಳ ಪರಿಹಾರವನ್ನು ಅನುಸರಿಸಿ. ಒಂದು ಪಾತ್ರೆಯಲ್ಲಿ ಬಿಸಿ ನೀರು ತೆಗೆದುಕೊಂಡು, ಕಾಲನ್ನು 20 ನಿಮಷಗಳ ಕಾಲ ನೀರಿನಲ್ಲಿರಿಸಿ. ನಂತರ ಕಾಲುಗಳನ್ನು ಹೊರತೆಗೆದು ಒಣಗಿಸಿಕೊಳ್ಳಿ. ಈಗ ಪಾದಗಳಿಗೆ ಜೇನಿನಿಂದ 15 ನಿಮಿಷ ಮಸಾಜ್ ಮಾಡಿ. ಪುನಃ ನೀರಿನಲ್ಲಿ ಕಾಲುಗಳನ್ನು ಇರಿಸಿಕೊಂಡು ನೀರನಿಂದ ಹೊರತೆಗೆದು ಒಣಗಿಸಿಕೊಳ್ಳಿ.

Leave a Comment