ಈ ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಸರಿಯಾದ ಸಮಯಕ್ಕೆ ಊಟ ಮಾಡದೇ ನೆಮ್ಮದಿಯ ಜೀವನ ಇಲ್ಲದೆ ದುಡಿಮೆಗೆ ಎಲ್ಲಾರು ಕೂಡ ನಿಂತಿದ್ದರೆ. ದುಡಿಮೆ ಮಾಡಿ ದುಡ್ಡು ಗಳಿಸಬಹುದು ಅದರೆ ಎಷ್ಟೇ ಗಳಿಸಿದರು ಅರೋಗ್ಯವನ್ನು ಗಳಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ.ಹಾಗಾಗಿ ಅನಾರೋಗ್ಯಕ್ಕೆ ತುತ್ತಗುವ ಮೊದಲು ಅರೋಗ್ಯವನ್ನು ವೃದ್ಧಿಗೊಳಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರತಿದಿನ ಕೆಲಸದೊಂದಿಗೆ ಆರೋಗ್ಯದ ಕಡೆ ಗಮನವನ್ನು ಕೂಡ ವಹಿಸಬೇಕು.ಮನುಷ್ಯನ ಅರೋಗ್ಯವನ್ನು ಕಾಪಾಡಲು ಪ್ರಕೃತಿ ನೀಡಿರುವ ವಸ್ತು ಎಂದರೆ ಅದು ಹಾಲು.
ಹಾಲಿನಲ್ಲಿ ಇರುವ ಪೌಷ್ಟಿಕಾಂಶಗಳು ಬೇರೆ ಯಾವುದೇ ವಸ್ತುಗಳಲ್ಲಿ ಇಲ್ಲವೆನ್ನಾಬಹುದು. ಅದರಲ್ಲೂ ಕಡಿಮೆ ಕೊಬ್ಬು ಹೊಂದಿರುವ ಬಾದಾಮಿ ಹಾಲು ಹೆಚ್ಚು ಪೌಷ್ಟಿಕಾಂಶವನ್ನು ಒಳಗೊಂಡಿದೆ.ಬಾದಾಮಿಗಳು ಹೆಚ್ಚು ಪೌಷ್ಟಿಕಾಂಶಗಳಿಂದ ತುಂಬಿರುತ್ತವೆ ಮತ್ತು ಇದರ ಜೊತೆಗೆ ಫೈಬರ್, ಪ್ರೋಟೀನ್, ವಿಟಮಿನ್ ಇ, ಮ್ಯಾಂಗನೀಸ್, ಮೆಗ್ನೀಷಿಯಂ, ತಾಮ್ರ ಮತ್ತು ರಂಜಕದ ಅತ್ಯುತ್ತಮ ಮೂಲವನ್ನು ಹೊಂದಿದೆ. ಇದರ ಪ್ರಯೋಜನಗಳ ಬಗ್ಗೆ ಮಾತನಾಡುತ್ತ ಹೋದರೆ ಅದರ ಪಟ್ಟಿ ದೊಡ್ಡದಿದೆ.
ಇವುಗಳು ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದ್ದು, ತೂಕ ನಷ್ಟ ಮತ್ತು ಉತ್ತಮ ಮೂಳೆ ಆರೋಗ್ಯದಿಂದ ಹಿಡಿದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವವರೆಗೆ ಇದು ಸಹಕಾರ ನೀಡುತ್ತದೆ. ಹೃದಯ ರೋಗಗಳು, ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನನಿತ್ಯದಲ್ಲಿ ಬಾದಾಮಿಯ ನಿಯಮಿತವಾಗಿ ಸೇವಿಸುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ.
ಒಳ್ಳೆಯ ನಿದ್ರೆ:–ಈ ಹಾಲು ಮೆದುಳಿನಲ್ಲಿ ನಿದ್ರೆ ಬರದಂತೆ ತಡೆಯುವ ಒರೆಕ್ಸಿನ್ ಎನ್ನುವ ನ್ಯೂರೋಟ್ರಾನ್ಸ್ ಮಿಟ್ಟರ್ ಅನ್ನು ದೂರವಿಡುತ್ತದೆ. ಇದರಿಂದ ಒಳ್ಳೆಯ ನಿದ್ರೆ ಬರುವುದು.
ವಯಸ್ಸಾಗುವ ಲಕ್ಷಣವನ್ನು ನಿಧಾನಗೊಳಿಸುವುದು:-ವಯಸ್ಸಾಗುತ್ತಿರುವವರಿಗೆ ಇದು ಒಂದು ಧನಾತ್ಮಕವಾಗಿರುವ ಪಾನೀಯವಾಗಿದೆ. ಹಿಂದಿನ ಕಾಲದಲ್ಲಿ ಬಾದಾಮಿ ಹಾಲು ಮತ್ತು ಜೇನುತುಪ್ಪವನ್ನು ವಯಸ್ಸಾಗುವುದನ್ನು ತಡೆಯಲು ಬಳಸುತ್ತಾ ಇದ್ದರು.
ಬ್ಯಾಕ್ಟೀರಿಯಾ ವಿರುದ್ಧ ರಕ್ಷಣೆ:-ಬಾದಾಮಿ ಹಾಗೂ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರ ಬಹುದೊಡ್ಡ ಲಾಭವೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ.
ಜೀರ್ಣಕ್ರಿಯೆಗೆ:–ಬಾದಾಮಿ ಹಾಲಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುವುದು ಕರುಳಿನ ಸಮಸ್ಯೆಗಳನ್ನು ಪರಿಹರಿಸಿ ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುವುದು.
ಶೀತ ಹಾಗೂ ಕೆಮ್ಮಿಗೆ:–ಬಾದಾಮಿ ಹಾಲು ಹಾಗೂ ಜೇನುತುಪ್ಪವು ಶೀತ ಹಾಗೂ ಕೆಮ್ಮಿಗೆ ಹೇಳಿ ಮಾಡಿಸಿದಂತಹ ಔಷಧಿಯಾಗಿದೆ. ಇದು ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಿಂತ ಹೆಚ್ಚು ಪರಿಣಾಮಕಾರಿ. ಬಾದಾಮಿ ಹಾಲು ಮತ್ತು ಜೇನುತುಪ್ಪದ ಪ್ರಮುಖ ಲಾಭಗಳಲ್ಲಿ ಇದು ಒಂದಾಗಿದೆ.