ನಿಮ್ಮ ಮನೆಯ ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿ ಕೊಚ್ಚೆ ನೀರು ಹರಿಯುತ್ತಿದೆಯಾ?

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿದೆ. ನಿವೇಶನ ನಿರ್ಮಾಣ ಮಾಡುವಾಗ ಯಾವ ದಿಕ್ಕಿನಲ್ಲಿ ಬಾಗಿಲು, ಕಿಟಕಿ, ಮಲಗುವ ಕೋಣೆ, ಅಡುಗೆ ಮನೆ, ಪೂಜಾ ಕೊಠಡಿ ಸೇರಿದಂತೆ ಪ್ರತಿಯೊಂದು ಯಾವ ದಿಕ್ಕಿನಲ್ಲಿ ಬಂದರೆ ಸೂಕ್ತ ಎಂದು ಹೇಳಲಾಗಿದೆ. ಇನ್ನು ಮಲಗುವ ದಿಕ್ಕು, ಪೂಜೆ ಮಾಡುವ ದಿಕ್ಕನ್ನೂ ಸೂಚಿಸಲಾಗಿದೆ. ಮನೆಯಲ್ಲಿ ನೀರಿನ ಟ್ಯಾಂಕ್ ಯಾವ ದಿಕ್ಕಿನಲ್ಲಿರಬೇಕು ಎಂಬುದರ ಬಗ್ಗೆಯೂ ಹೇಳಲಾಗಿದೆ. ಅದರಂತೆಯೇ ಮನೆಗೆ ಯಾವ ದಿಕ್ಕಿನಿಂದ ನೀರು ಬರಬೇಕು ಹಾಗೂ ಯಾವ ದಿಕ್ಕಿನಿಂದ ತ್ಯಾಜ್ಯ ನೀರು ಹೊರಗೆ ಹರಿಯಬೇಕು ಎಂಬುದನ್ನೂ ವಾಸ್ತು ಗ್ರಂಥಗಳಲ್ಲಿ ತಿಳಿಸಲಾಗಿದೆ.

ಮನೆಗೆ ಪ್ರವೇಶಿಸುವ ದ್ವಾರ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆಯೋ ಹಾಗೆಯೇ ನೀರು ಹರಿಯುವ ದಿಕ್ಕನ್ನೂ ಸೂಚಿಸಲಾಗಿದೆ. ಈ ಬಗ್ಗೆ ವಾಸ್ತು ಶಾಸ್ತ್ರಜ್ಞರಾದ ಡಾ. ರೇವತಿ ವೀ ಕುಮಾರ್ ಅವರು ಹೇಳಿದ್ದಾರೆ. ಹಾಗಾದರೆ ಬನ್ನಿ ವಾಸ್ತು ಪ್ರಕಾರ ಮನೆಗೆ ಪ್ರವೇಶಿಸುವ ನೀರಿನ ಪೈಪ್ ಯಾವ ದಿಕ್ಕಿನಲ್ಲಿಬೇಕು ಹಾಗೂ ತ್ಯಾಜ್ಯ ನೀರು ಹೊರ ಹರಿಯುವ ದಿಕ್ಕು ಯಾವುದಿದ್ದರೆ ಮನೆಗೆ ಒಳ್ಳೆಯದಾಗುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿಯೋಣ.

ಮನೆ ನಿರ್ಮಾಣ ಮಾಡುವಾಗ ನಾವು ಉಳಿಯುವ ಸ್ಥಳದ ಬಗ್ಗೆ ಹೇಗೆ ವಾಸ್ತು ನೋಡುತ್ತೇವೋ ಹಾಗೆಯೇ ನಿರಿನ ಹರಿವಿನ ಬಗ್ಗೆಯೂ ಗಮನಿಸಬೇಕಾಗುತ್ತದೆ. ಸಾಕಷ್ಟು ವಾಸ್ತು ಗ್ರಂಥಗಳಲ್ಲಿ ನೀರು ಹರಿವಿಕೆಯ ಬಗ್ಗೆ ಹೇಳಲಾಗಿದೆ. ಆದರೆ, ಈ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ವಾಸ್ತು ಶಾಸ್ತ್ರಜ್ಞರಾದ ಡಾ. ರೇವತಿ ವೀ ಕುಮಾರ್ ಅವರ ಪ್ರಕಾರ, ನಿವೇಶನವನ್ನು ನಿರ್ಮಿಸುವಾಗ ನೀರಿನ ಹರಿಯುವಿಕೆ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಒಮ್ಮೆ ಮನೆ ನಿರ್ಮಾಣವಾದ ಮೇಲೆ ಮತ್ತೆ ಸರಿಪಡಿಸಲು ಸಾಧ್ಯವಿಲ್ಲ. ಅದರಲ್ಲೂ ನೀರಿನ ಪೈಪ್ ಕನೆಕ್ಷನ್ ಗಳನ್ನು ಬದಲಾಯಿಸಲು ಸಾಧ್ಯವಾಗದು.

ಹೀಗಾಗಿ ವಾಸ್ತು ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕೊಳಕು ನೀರು ಎಲ್ಲಿಂದ, ಎಲ್ಲಿಗೆ ಹರಿಯಬೇಕು ಎಂಬುದರ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಒಂದು ನಿವೇಶನವನ್ನು ನಿರ್ಮಾಣ ಮಾಡಿದಾಗ ಇದರ ಬಗ್ಗೆ ಗಮನಿಸಬೇಕು. ಒಳಗೆ ನೀರು ಬರುವುದಕ್ಕೆ ಜಲದ್ವಾರ ಎಂದು ಹೇಳಲಾಗುತ್ತದೆ. ಹಲವು ವಾಸ್ತು ಗ್ರಂಥಗಳಲ್ಲಿ ಈ ಬಗ್ಗೆ ಹೇಳಲಾಗಿದೆ. ಮನೆಯ ಯಾವದ ದಿಕ್ಕಿನಿಂದಲಾದರೂ ಸರಿಯೇ, ಅಂದರೆ, ಪೂರ್ವ, ದಕ್ಷಿಣ, ಪಶ್ಚಿಮ ಹಾಗೂ ನೈರುತ್ಯ ದಿಕ್ಕಿನ ಮೂರನೇ ಪಾದದಲ್ಲಿ ನೀರಿನ ಪೂಪ್ ಇರಬೇಕು. ಇಲ್ಲಿಂದ ನೀರು ಮನೆಗೆ ಪ್ರವೇಶಿಸದರೂ, ಇದರಿಂದ ಉತ್ತಮವಾದ ಫಲಗಳನ್ನು ಸಿಗುತ್ತದೆ. ಯಾವ ದಿಕ್ಕಾದರೂ ಪರವಾಗಿಲ್ಲ ಎಂದು ಹೇಳಿದ್ದಾರೆ.

ಇನ್ನು ತ್ಯಾಜ್ಯ ನೀರು ಯಾವ ದಿಕ್ಕಿನಲ್ಲಿ ಹರಿದರೆ ಒಳ್ಳೆಯದು ಎಂದು ಕೂಡ ಹೇಳಲಾಗಿದೆ. ವಾಸ್ತು ಮಾಣಿಕ್ಯ ರತ್ನಾಕರ ಎಂಬ ಗ್ರಂಥದಲ್ಲಿ ತ್ಯಾಜ್ಯ ನೀರು ದಕ್ಷಿಣ ಮತ್ತು ನೈರುತ್ಯದಲ್ಲಿ ಹೊರಗಡೆ ಹರಿಯಬಾರದು ಎಂದು ಹೇಳಲಾಗಿದೆ. ಇದು ಮನೆಗೆ ಸಮಸ್ಯಗಳನ್ನು ತಂದೊಟ್ಟುತ್ತದೆ. ಮನೆಯ ಸದಸ್ಯರಿಗೆ ತೋಮದರೆಗಳಾಗುತ್ತವೆ ಎಂದು ಹೇಳಲಾಗಿದೆ. ಅದೇ ಮನೆಯ ತ್ಯಾಜ್ಯ ನೀರು ಪಶ್ಚಿಮದಲ್ಲಿ ಹರಿದರೆ ಶುಭ-ಅಶುಭ ಎರಡೂ ಅಲ್ಲ. ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗಿದೆ. ಉತ್ತರ ಮತ್ತು ಪೂರ್ವದಲ್ಲಿ ಕೊಳಕು ನೀರು ಮನೆಯಿಂದ ಹೊರಗೆ ಹರಿದರೆ ಶುಭ ಎಂದು ಹೇಳಲಾಗಿದೆ. ಇದನ್ನು ನಿಮ್ಮ ಮನೆಯ ನಿವೇಶನ ನಿರ್ಮಾಣದ ವೇಳೆ ಗಮನವಿಟ್ಟು ಪಾಲಿಸದರೆ ಉತ್ತಮ ಫಲ ಸಿಗುತ್ತದೆ.

Leave a Comment