ಜೂನ್ 2023 ಮೈತ್ರೇಯಿ ಮುಹೂರ್ತ ದಿನಾಂಕ ಮತ್ತು ಸಮಯ!

ಈ ಮೈತ್ರೇಯಿ ಮುಹೂರ್ತದಲ್ಲಿ ಸಾಲದ ಹಣದಲ್ಲಿ ಒಂದು ಭಾಗದಷ್ಟು ಈ ಮೈತ್ರೇಯಿ ಮುಹೂರ್ತದ ಸಮಯದಲ್ಲಿ ಕೊಟ್ಟರೆ ಆ ಹಣ ಎಷ್ಟೇ ಸಾಲವಾದ ಹಣವಾದರು ಅದು ಅತೀ ಬೇಗನೆ ತಿರುತ್ತದೆ. ನಂತರ ಸಾಲ ಮಾಡುವ ಅವಶ್ಯಕತೆ ಮತ್ತು ಪರಿಸ್ಥಿತಿ ಎದುರಾಗುವುದಿಲ್ಲ. ಈ ಜೂನ್ ತಿಂಗಳಿನಲ್ಲಿ 2023 ರಲ್ಲಿ 3 ಮೈತ್ರೇಯಿ ಮುಹೂರ್ತಗಳು ಬಂದಿದೆ. ಅದರಲ್ಲಿ ಮೊದಲನೇಯದು ಜೂನ್ 3 ಶನಿವಾರ 2023 ಸಂಜೆ 5:08 ನಿಮಿಷದಿಂದ 7:19ರವರೆಗೆ ಮೈತ್ರೇಯಿ ಮುಹೂರ್ತದ ಸೂಕ್ಷ್ಮವಾದ ಸಮಯವಿರುತ್ತದೆ.

ಇನ್ನು ಎರಡನೇಯದು ಜೂನ್ 14 ಬುಧವಾರದಂದು 2023 ಬೆಳಗಿನ ಜಾವ 2:03 ನಿಮಿಷದಿಂದ 3:50 ನಿಮಿಷದವರೆಗೆ ಮೈತ್ರೇಯಿ ಮುಹೂರ್ತದ ಸಮಯವಿರುತ್ತದೆ. ಈ ಸಮಯದಲ್ಲಿ ಸಾಲದ ಹಣವನ್ನು ತಕ್ಷಣಕ್ಕೆ ಅವರಿಗೆ ಕೊಡುವುದಕ್ಕೆ ಆಗಲ್ಲ ಎನ್ನುವವರು ಆ ಸಾಲದ ಒಂದು ಭಾಗದಷ್ಟು ಹಣವನ್ನು ಅವರಿಗೆ ಎಂದು ಇಟ್ಟುಬಿಡಿ. ಮಾರನೇ ದಿನ ಅವರಿಗೆ ಕೊಟ್ಟುಬಿಡಿ.

ಇನ್ನು ಮೂರನೇಯ ಮೈತ್ರೇಯಿ ಮುಹೂರ್ತ ಜೂನ್ 30 ಶುಕ್ರವಾರ 2023 ಸಂಜೆ 4:11 ನಿಮಿಷದಿಂದ ಹಿಡಿದು 5:33 ನಿಮಿಷದವರೆಗೆ ಮೈತ್ರೇಯಿ ಮುಹೂರ್ತದ ಸಮಯ.

Leave a Comment