ಸಾಮುದ್ರಿಕ ಶಾಸ್ತ್ರದ ಸಹಾಯದಿಂದ ಮಹಿಳೆಯರು ಮತ್ತು ಪುರುಷರ ದೇಹದ ಭಾಗಗಳ ಮೂಲಕ ಅವರ ಭವಿಷ್ಯ ಮತ್ತು ವ್ಯಕ್ತಿತ್ವವನ್ನು ತಿಳಿಯಬಹುದು. ಪ್ರತಿಯೊಬ್ಬರ ದೇಹ ರಚನೆಯೂ ಬೇರೆ ಬೇರೆ ಆಗಿರುತ್ತದೆ. ಹೀಗಿರುವಾಗ ಪ್ರತಿಯೊಂದು ಅಂಗರಚನೆಯೂ ವ್ಯಕ್ತಿಯ ಅದೃಷ್ಟ, ದರಾದೃಷ್ಟವನ್ನು ಸೂಚಿಸುತ್ತದೆ. ಇಂದು ನಾವು ಹುಡುಗಿಯರ ದೇಹದ ಕೆಲವು ವಿಶೇಷ ಗುರುತುಗಳು ಮತ್ತು ಅಂಗಾಂಗಳ ಆಕಾರದ ಮೂಲಕ ಅವರ ಅದೃಷ್ಟ ತಿಳಿಯುವ ಬಗ್ಗೆ ಹೇಳಲಿದ್ದೇವೆ.
ಪಾದದ ಅಡಿಭಾಗ: ನಯವಾದ, ಮೃದುವಾದ ಮತ್ತು ಕೆಂಪು ಪಾದದ ಅಡಿಭಾಗವನ್ನು ಹೊಂದಿರುವ ಹುಡುಗಿಯರು ಅಥವಾ ಮಹಿಳೆಯರು ಲಕ್ಷ್ಮಿಯ ವಿಶೇಷ ಆಶೀರ್ವಾದವನ್ನು ಹೊಂದಿರುತ್ತಾರೆ. ಅಂತಹ ಮಹಿಳೆಯರಿಗೆ ಹಣದ ಕೊರತೆ ಇರುವುದಿಲ್ಲ. ಮತ್ತೊಂದೆಡೆ, ಪಾದದ ಮೇಲೆ ಕಮಲ, ಶಂಖ ಅಥವಾ ಚಕ್ರದ ಗುರುತು ಹೊಂದಿದ್ದರೆ ಅವರಿಗೆ ಹೆಚ್ಚಿನ ಗೌರವ ಸಿಗುತ್ತದೆ ಎಂದರ್ಥ.
ಕಾಲ್ಬೆರಳು: ಹೆಬ್ಬೆರಳು ಅಗಲ, ದುಂಡಾಗಿರುವ ಮಹಿಳೆಯರು ತಮ್ಮ ಕುಟುಂಬಕ್ಕೆ ತುಂಬಾ ಅದೃಷ್ಟವಂತರು. ಅವರು ತಮ್ಮ ಕಠಿಣ ಪರಿಶ್ರಮ, ಬುದ್ಧಿವಂತಿಕೆ ಮತ್ತು ಅದೃಷ್ಟದಿಂದ ಜೀವನದಲ್ಲಿ ಸಾಕಷ್ಟು ಪ್ರಗತಿ ಮತ್ತು ಸಂಪತ್ತನ್ನು ಪಡೆಯುತ್ತಾರೆ. ಅವರಿಂದಾಗಿ ಇಡೀ ಕುಟುಂಬ ಐಷಾರಾಮಿ ಜೀವನ ನಡೆಸುತ್ತದೆ.
ಕೈ ಬೆರಳುಗಳು: ಉದ್ದವಾದ ಕೈ ಬೆರಳುಗಳನ್ನು ಹೊಂದಿರುವ ಮಹಿಳೆಯರು ತಮ್ಮ ಗಂಡನಿಗೆ ತುಂಬಾ ಅದೃಷ್ಟಶಾಲಿ ಎಂದು ನಂಬಲಾಗಿದೆ. ಆಕೆಯ ಪತಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾನೆ. ಸಾಮಾನ್ಯ ಕುಟುಂಬದಲ್ಲಿ ಮದುವೆಯಾದರು ಸಹ ಪತಿ ಶೀಘ್ರದಲ್ಲೇ ಶ್ರೀಮಂತನಾಗುತ್ತಾನೆ.ಉದ್ದನೆಯ ಕುತ್ತಿಗೆ: ಅಂತಹ ಮಹಿಳೆಯರು ತಮ್ಮ ತಾಯಿಯ ಮನೆಯಲ್ಲಿ ಮಾತ್ರವಲ್ಲದೆ ಅವರ ಅತ್ತೆ ಮನೆಯಲ್ಲೂ ಗೌರವವನ್ನು ಪಡೆಯುತ್ತಾರೆ.