ಕನಸಿನಲ್ಲಿ ನವಿಲು ಕಂಡರೆ ನಿಜವಾಗಿಯೂ ಶ್ರೀಮಂತರಾಗ್ತಾರಾ?

ನವಿಲು ಭಾರತದ ರಾಷ್ಟ್ರೀಯ ಪಕ್ಷಿಯಾಗಿರುವುದರಿಂದ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಈ ಹಕ್ಕಿಗೆ ಧಾರ್ಮಿಕ ಮಹತ್ವವೂ ಇದೆ. ಇದಲ್ಲದೆ, ನವಿಲು ಕಾರ್ತಿಕೇಯನ ವಾಹನ ಎಂದೂ ಹೇಳಲಾಗುತ್ತದೆ. ಆದರೆ ವಾತಾವರಣದಲ್ಲಿನ ಬದಲಾವಣೆಗಳಿಂದ ನವಿಲುಗಳು ಕಾಡುಗಳಲ್ಲಿ ಕಣ್ಮರೆಯಾಗುತ್ತಿವೆ. ನಗರಗಳಿಗೆ ಸಂಬಂಧಿಸಿದಂತೆ, ಅವುಗಳನ್ನು ಉದ್ಯಾನವನಗಳಲ್ಲಿ ಮಾತ್ರ ಕಾಣಬಹುದು. ಹಠಾತ್ತನೆ ನವಿಲು ಕಾಣಿಸಿಕೊಂಡರೆ ಅದು ತುಂಬಾ ಮಂಗಳಕರವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನವಿಲು ಕಾಣಿಸಿಕೊಂಡ ಕಾರಣ, ಅದರ ಎಲ್ಲಾ ಫಲಗಳು ಮನುಷ್ಯನಿಗೆ ಲಭಿಸುತ್ತದಂತೆ. ಇದಲ್ಲದೆ, ಅದರ ಗರಿಗಳು ಎಲ್ಲಾ ರೀತಿಯ ಗ್ರಹಗಳ ದೋಷಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ ಎಂದು ಹೇಳಲಾಗುತ್ತದೆ.

ಮನೆಯಲ್ಲಿ ನವಿಲು: ಬೆಳಗ್ಗೆ ಇದ್ದಕ್ಕಿದ್ದಂತೆ ನವಿಲು ನಿಮ್ಮ ಮನೆಗೆ ಬಂದರೆ. ನಿಮಗೆ ಅದೃಷ್ಟದ ಮಳೆಯಾಗುವ ಸಾಧ್ಯತೆಗಳಿವೆ. ಇದಲ್ಲದೆ, ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ. ಇದಲ್ಲದೆ, ಅದೃಷ್ಟವೂ ಹೆಚ್ಚಾಗುತ್ತದೆ. ಇದರಿಂದಾಗಿ ಮನೆಯಲ್ಲಿಯೂ ಕೆಲವು ಶುಭ ಕಾರ್ಯಗಳು ನಡೆಯಬಹುದು.

ಮುಂಜಾನೆ ನವಿಲು ಕಂಡರೆ: ಬೆಳಗ್ಗೆ ಮನೆಯಿಂದ ಹೊರಗೆ ಬರುವಾಗ ಅಚಾನಕ್ಕಾಗಿ ನವಿಲು ಕಂಡರೆ ನಿಮಗೆ ಒಳ್ಳೆಯ ದಿನ ಬರಲಿದೆ ಎಂದರ್ಥ. ವಿಶೇಷವಾಗಿ ನೀವು ಕೆಲಸ ಮಾಡುವ ಕಚೇರಿಗಳಲ್ಲಿ ನೀವು ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆಯುತ್ತೀರಿ. ಶಾಸ್ತ್ರದ ಪ್ರಕಾರ, ಮುಂಜಾನೆ ನವಿಲಿನ ಧ್ವನಿಯನ್ನು ಕೇಳುವುದು ಅಥವಾ ನವಿಲು ಗರಿಗಳನ್ನು ನೋಡುವುದು ಸಹ ಮಂಗಳಕರವಾಗಿದೆ.

ಕನಸಿನಲ್ಲಿ ನವಿಲು ಬಂದರೆ: ಒಂದು ಕನಸಿನಲ್ಲಿ ನವಿಲು ನೃತ್ಯ ಮಾಡುವುದನ್ನು ನೋಡಿದರೆ, ಭವಿಷ್ಯದ ಯಶಸ್ಸಿನ ಬಗ್ಗೆ ಹೇಳುತ್ತದೆ ಎಂದು ಅರ್ಥೈಸಬಹುದು. ಈ ರೀತಿ ನೋಡಿದರೆ ಭವಿಷ್ಯದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವ ಸಾಧ್ಯತೆಗಳಿವೆ. ಅರ್ಧಕ್ಕೆ ನಿಂತ ಕೆಲಸಗಳೂ ಪೂರ್ಣಗೊಳ್ಳುತ್ತವೆ.ಹಾರುವ ನವಿಲು: ಹಾರುವ ನವಿಲು ಕಾಣುವುದೇ ಅಪರೂಪ. ಇಂತಹ ದೃಶ್ಯ ಅಪರೂಪಕ್ಕೆ ಕಾಣಸಿಗುತ್ತದೆ. ಆದರೆ ಅಂತಹ ದೃಶ್ಯಗಳನ್ನು ನೋಡುವುದರಿಂದ ಎಲ್ಲಿಂದಲಾದರೂ ಒಳ್ಳೆಯ ಫಲಿತಾಂಶ ಬರುತ್ತದೆ ಎಂದು ಅರ್ಥ.

ನವಿಲಿನ ನೃತ್ಯ  ನೋಡುವುದು: ನರ್ತಿಸುವ ನವಿಲು ಕಾಣುವುದು ತೀರಾ ಅಪರೂಪ. ಆದರೆ ಇದನ್ನು ನೋಡಿದರೆ ಭವಿಷ್ಯದ ಸಮಸ್ಯೆಗಳ ಬಗ್ಗೆ ಮೊದಲೇ ತಿಳಿದುಕೊಳ್ಳಬಹುದಂತೆ. ಇದಲ್ಲದೆ, ಜೀವನದಲ್ಲಿ ಹೊಸ ಬೆಳವಣಿಗೆಗಳು ಸಂಭವಿಸುತ್ತವೆ ಎಂದರ್ಥವಂತೆ.

Leave a Comment