ಮನೆಯಲ್ಲಿ ದಾರಿದ್ರ ಬರಬಾರದು ಎಂದರೆ ಶ್ರೀ ಕೃಷ್ಣ ಹೇಳಿದ ಮಾತುಗಳನ್ನು ನೀವು ಅಳವಡಿಸಿಕೊಳ್ಳಿ.
-ಮನೆಯಲ್ಲಿ ದಾರಿದ್ರ ಬರಬಾರದು ಎಂದರೆ ಪ್ರತಿದಿನ ದೀಪವನ್ನು ಹಚ್ಚಬೇಕಾಗುತ್ತದೆ.
-ಒಂದು ವೇಳೆ ಮನೆಗೆ ಅತಿಥಿಗಳು ಬಂದರೆ ಅವರಿಗೆ ಅತಿಥಿ ಸತ್ಕಾರವನ್ನು ಮಾಡಲೇಬೇಕು. ಯಾಕೆಂದರೆ ಅತಿಥಿಗಳು ದೇವರ ಸಮ ಆಗಿರುತ್ತಾರೆ. ಅವರ ಮೇಲೆ ಯಾವತ್ತಿಗೂ ನೀವು ಸಿಟ್ಟನ್ನು ಮಾಡಿಕೊಳ್ಳಬಾರದು. ಅವರಿಗೆ ಯಾವುದೇ ರೀತಿಯ ಕೊರತೆ ಬಾರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅತಿಥಿಗಳಿಗೆ ಗೌರವ ಕೊಡದಿದ್ದರೆ ತಾಯಿ ಲಕ್ಷ್ಮೀದೇವಿ ಸಿಟ್ಟಾಗುತ್ತಾಳೆ. ಇದು ನಿಮ್ಮ ಬಡತನಕ್ಕೆ ಕಾರಣವಾಗುತ್ತದೆ.
-ಜೇನಿನ ಹನಿಯನ್ನು ಸ್ವಚ್ಛವಾಗಿ ಇರುವ ಜಾಗದಲ್ಲಿ ಇಡಬೇಕು. ಇದು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.
-ಸರಸ್ವತಿ ಮಾತೆಯ ಫೋಟೋ ಅಥವಾ ವೀಣೆಯನ್ನು ಇಟ್ಟರೆ ಬಹಳ ಒಳ್ಳೆಯದು.
-ಸಾಮಾನ್ಯವಾಗಿ ನೀವು ಮನೆಯನ್ನು ಸ್ವಚ್ಛವಾಗಿ ಇಡಬೇಕು. ಒಂದು ವೇಳೆ ಕೊಳಕಾದ ವಸ್ತುಗಳನ್ನು ಇಟ್ಟರೆ. ಇಂತಹ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಎಂದಿಗೂ ನೆಲೆಸುವುದಿಲ್ಲ. ಹಾಗಾಗಿ ಮನೆಯನ್ನು ಸ್ವಚ್ಛವಾಗಿಡಿ. ಸ್ವಚ್ಛ ಇರುವ ಮನೆಯಲ್ಲಿ ಯಾವಾಗಲೂ ಲಕ್ಷ್ಮೀದೇವಿ ನೆಲೆಸುತ್ತಾಳೆ.
-ಹೊರಗಡೆ ಹೊಗಿ ಮನೆಯ ಒಳಗೆ ಹೋಗುವಾಗ ಕೈ ಕಾಲು ಮುಖವನ್ನು ತೊಳೆದುಕೊಂಡು ಹೋಗಬೇಕು.
-ಚಪ್ಪಲಿಯನ್ನು ಸಹ ನಿಟ್ ಆಗಿ ಇಡಬೇಕು. ಎಲ್ಲಿ ಬೇಕೋ ಅಲ್ಲಿ ಬಿಡಬಾರದು.
-ಇನ್ನು ಅಡುಗೆ ಮನೆಯನ್ನು ಯಾವಾಗಲು ಸ್ವಚ್ಛವಾಗಿ ಇಡಬೇಕು ಹಾಗು ತಿಂಗಳಿಗೆ ಒಮ್ಮೆ ಸ್ವೀಟ್ ಮಾಡಿ ದೇವರಿಗೆ ಅರ್ಪಿಸಿ ನೀವು ಸಹ ಸೇವನೆ ಮಾಡಬೇಕು.