ಲಕ್ಷ್ಮಿ ದೇವಿಗೆ ಇಷ್ಟವಾದ ಈ 5 ವಸ್ತುಗಳು ಮನೆಯಲ್ಲಿ ಇದ್ದರೆ ಸಾಕು .. ಕೈಯಲ್ಲಿ ಹಣದ ಸಮಸ್ಯೆ ಇರುವುದಿಲ್ಲ !

ಶ್ರೀ ಮಹಾಲಕ್ಷ್ಮಿ ಪ್ರತಿಯೊಬ್ಬರ ಮನೆಯಲ್ಲಿ ಧನ, ಧನ್ಯ , ಐಶ್ವರ್ಯ, ಸಂಪತ್ತು ರೂಪಗಳಲ್ಲಿ ನೆಲೆಸಿರುವಂತಹಳು. ಸರ್ವಮಾಂಗಳೆಯಾದ ಐಶ್ವರ್ಯ ಪ್ರಧಾನಿಯಾದ ಸಿರಿಸಂಪತ್ತಿನ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿ ಪ್ರತಿಯೊಬ್ಬರ ಮನೆಯಲ್ಲಿ ನೆಲೆಸಿರುತ್ತಾಳೆ. ಇನ್ನು ಅನಾದಿಕಾಲದಿಂದಲೂ ಧನ, ಧಾನ್ಯದಲ್ಲಿ ಪ್ರತಿಯೊಂದು ಮನೆಯಲ್ಲಿ ಪ್ರತಿಯೊಂದು ವಸ್ತುಗಳಲ್ಲಿ ದೇವಾನು ದೇವತೆಗಳು ನೆಲೆಸಿದ್ದಾರೆ ಎಂದು ನಮ್ಮ ಹಿರಿಯರು ಹೇಳುವುದುಂಟು.ಧನ ಧಾನ್ಯ ದಲ್ಲಿಯೇ ಪ್ರತಿಯೊಬ್ಬ ದೇವಾನು ದೇವತೆಗಳು ನೆಲೆಸಿದ್ದಾರೆ. ಮುಖ್ಯವಾಗಿ ಶ್ರೀ ಮಹಾಲಕ್ಷ್ಮಿ ಅದರಲ್ಲಿ ನೆಲೆಸಿರುತ್ತಾಳೆ ಆದ್ದರಿಂದ ಅಂತಹ ವಸ್ತುಗಳು ಮನೆಯಲ್ಲಿ ಯಾವಾಗಲೂ ಆಗಿಹೋಗಿದೆ ಎಂದು ಹೇಳಬಾರದು

.ಸಾಮಾನ್ಯವಾಗಿ ಮನೆಯಲ್ಲಿ ಯಾವುದೇ ವಸ್ತು ಮುಗಿದು ಹೋಗಿದ್ದಾರೆ ಅದು ಆಗಿಹೋಗಿದೆ ಎಂದು ಹೇಳಬಾರದು. ತುಂಬಿಕೊಂಡಿದೆ ಎಂದು ಹಿರಿಯರು ಎಚ್ಚರಿಕೆಯನ್ನು ನೀಡುತ್ತಾರೆ. ಈ ವಸ್ತುಗಳು ಮನೆಯಲ್ಲಿ ಖಾಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮನೆಯವರದು.ಮುನ್ನೆಚ್ಚರಿಕೆ ಕ್ರಮದಿಂದ ಈ ವಸ್ತುಗಳು ತುಂಬಿ ತುಳುಕುವಂತೆ ಸದಾ ಮನೆಯಲ್ಲಿ ಇಟ್ಟುಕೊಳ್ಳಬೇಕು. ಯಾವ ಕಾರಣಕ್ಕೂ ಬಾಯಿಯಿಂದ ಈ ವಸ್ತುಗಳು ಖಾಲಿಯಾಗಿದೆ ಎಂದು ಹೇಳಬಾರದು. ಖಾಲಿಯಾದ ವಸ್ತುಗಳಲ್ಲಿ ಅಥವಾ ಮುಗಿದು ಹೋದ ವಸ್ತುಗಳಲ್ಲಿ ಖಾಲಿತನ ಇರುತ್ತದೆ. ಅಲ್ಲಿ ಶ್ರೀ ಮಹಾಲಕ್ಷ್ಮಿಯು ನೆಲೆಸುವುದಿಲ್ಲ.ಎಲ್ಲಿ ವಸ್ತುಗಳು ತುಂಬಿ ತುಳುಕುತ್ತಿರುತ್ತವೊ ಅಲ್ಲಿ ಸಮೃದ್ಧಿ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿಯು ಬಂದು ನೆಲೆಸುತ್ತಾಳೆ. ಲಕ್ಷ್ಮಿ ದೇವತೆಗೆ ಇಷ್ಟವಾದ ಆ ವಸ್ತುಗಳು ಯಾವುದು ಎಂದರೆ..

ಹಾಲು : ಪ್ರತಿನಿತ್ಯ ನಾವು ಉಪಯೋಗಿಸುವಂತಹ ಪದಾರ್ಥ ಮನೆಯಲ್ಲಿ ಖಾಲಿಯಾಗಿದೆ ಎಂದು ಹೇಳಬಾರದ ಅಂತೆ.ಹಾಲು ಮುಗಿಯಲು ಬಂದಾಗ ತುಂಬಿಕೊಂಡಿದೆ ಎಂದು ಹೇಳಬೇಕಂತೆ. ಇನ್ನೂ ಒಂದು ಲೋಟ ಹಾಲನ್ನು ಇಟ್ಟುಕೊಂಡು ಉಳಿದ ಹಾಲಿನಲ್ಲಿ ನಿಮ್ಮ ಕೆಲಸವನ್ನು ಮಾಡಿಕೊಳ್ಳಬೇಕಂತೆ. ಒಂದು ಲೋಟ ಹಾಲು ಮನೆಯಲ್ಲಿ ಯಾವಾಗಲೂ ಇರಬೇಕಂತೆ.

ನೀರು: ನೀರು ಹೇಗೆ ಖರ್ಚಾಗುತ್ತೋ ಮನೆಯಲ್ಲಿ ಧನ ಧಾನ್ಯ ಕೂಡ ಖರ್ಚಾಗುತ್ತೆ.ಅದಕ್ಕಾಗಿ ನೀರನ್ನು ಹಿತಮಿತವಾಗಿ ಉಪಯೋಗಿಸಬೇಕು.ಕೂಡಿಟ್ಟ ಹಣ ಯಾವಾಗಾದರೂ ಕರಗಿಹೋಗುವುದು. ಅದಕ್ಕಾಗಿ ನೀರನ್ನು ಮಿತವಾಗಿ ಬಳಸಬೇಕು.

ಅಕ್ಕಿ ಅಥವಾ ಬತ್ತ: ಪ್ರತಿನಿತ್ಯ ನಾವು ಅನ್ನವನ್ನು ಮಾಡಿಕೊಂಳ್ಳುವ ಅಕ್ಕಿಯನ್ನ ಸಾಧ್ಯವಾದಷ್ಟು ಮೊದಲಿಗೆ ತಂದಿಟ್ಟು ಕೊಳ್ಳಬೇಕು. ಸಾಧ್ಯವಾಗದಿದ್ದರೆ ಯಾತನ ಶಕ್ತಿ ಅವರವರ ಸಾಮರ್ಥ್ಯ ತಕ್ಕಂತೆ ಮನೆಯಲ್ಲಿ ಅಕ್ಕಿ ಶೇಖರಣೆ ಮಾಡಿಕೊಳ್ಳಬೇಕು. ಇನ್ನೇನು ಮುಗಿಯಲು ಬಂದಿದೆ ಅನ್ನುವಷ್ಟರಲ್ಲಿ ಮತ್ತೆ ಅದನ್ನು ತಂದು ಶೇಖರಣೆ ಮಾಡಿಟ್ಟುಕೊಳ್ಳಬೇಕು.ಹೀಗೆ ಅಕ್ಕಿ ಆಗಿಹೋಗಿದೆ ಎಂದು ಹೇಳಬಾರದಂತೆ. ಅಕ್ಕಿ ತುಂಬಿಕೊಂಡಿದೆ ಎಂದು ಹೇಳಿ ತಕ್ಷಣವೇ ಅದನ್ನು ತರಲು ಪ್ರಯತ್ನ ಮಾಡಬೇಕಂತೆ.

ಉಪ್ಪು:ಉಪ್ಪು ಕೂಡ ಇನ್ನೇನು ಖಾಲಿಯಾಗುತ್ತದೆ ಅನ್ನೋವಾಗ ಉಪ್ಪನ್ನು ತಂದಿಟ್ಟು ಕೊಳ್ಳಬೇಕು. ಉಪ್ಪು ಖಾಲಿಯಾಗಿದೆ ಎಂದು ಹೇಳಬಾರದು. ಇನ್ನು ಕೊನೆಯದಾಗಿ ಶ್ರೀ ಮಹಾಲಕ್ಷ್ಮಿ ನೆಲೆಸಿರುವುದು ಧನದಲ್ಲಿ ಧನಾಲಕ್ಷ್ಮಿ ನಾವು ಪೂಜಿಸುತ್ತೇವೆ ಇತ್ತೀಚಿಗೆ ನೋಟುಗಳು ಬಂದಾಗ ನಾಣ್ಯಗಳ ಬಳಕೆ ಕಡಿಮೆಯಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಕೆಲವು ನಾಣ್ಯಗಳನ್ನು ಇಟ್ಟುಕೊಳ್ಳಲೇಬೇಕು. ಮುಖ್ಯವಾಗಿ ಲಾಕರ್ ನಲ್ಲಿ ಅಥವಾ ಪರ್ಸ್ ನಲ್ಲಿ, ಇಲ್ಲ ಪೂಜಾ ಮಂದಿರದಲ್ಲಿ ಇಟ್ಟುಕೊಳ್ಳಬೇಕಂತೆ. ನಾಣ್ಯಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಶ್ರೀಮಹಾಲಕ್ಷ್ಮಿ ಯು ಮನೆಯಲ್ಲಿ ತುಂಬಿ ತುಳುಕುತ್ತಾಳೆ.

Leave a Comment