ದೇಶದೆಲ್ಲೆಡೆ ಸದ್ಯಕ್ಕೆ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ರಾಜ್ಯದಲ್ಲೂ ಕೂಡಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲೆಡೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ಈ ವೇಳೆಯಲ್ಲಿ ಶ್ರೀರಾಮುಲು ಅವರು ಮಾಡಿರುವಂತಹ ಜನ ಸೇವೆ ಮತ್ತು ಜನಪರ ಕಾಳಜಿಯ ಕುರಿತಾಗಿ ಹಾಡೊಂದು ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಶ್ರೀರಾಮುಲು ಅವರ ಹಿನ್ನೆಲೆಯನ್ನೊಮ್ಮೆ ನೋಡಿದಾಗ ಅವರು ಒಂದ ಸಾಧಾರಣ ಹಿನ್ನೆಲೆಯಿಂದ ಬಂದು ರಾಜಕಾರಣದಲ್ಲಿ ಸಾಧನೆಯನ್ನು ಮಾಡುತ್ತಿರುವಂತಹ ಒಬ್ಬ ನಾಯಕನಾಗಿದ್ದಾರೆ. ಅವರ ಜನಪರ ಕಾಳಜಿಯ ಕಾರಣದಿಂದಲೇ ಅವರ ಜನಮನ್ನಣೆಯನ್ನು ಪಡೆದುಕೊಂಡಿದ್ದು, ಅವರ ಬಗ್ಗೆ ತಿಳಿಸುವ ಹಾಡೊಂದು ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವೈರಲ್ ಆಗ್ತಿದೆ.
ಶ್ರೀ ರಾಮುಲು ಅವರು ಕರ್ನಾಟಕದಲ್ಲಿ ಒಬ್ಬ ದಕ್ಷ ಶಾಸಕರಾಗಿ, ಸಚಿವರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಸಾಧನೆಗಳೇನು ಎಂಬುದನ್ನು ಈ ಹಾಡು ಎಲ್ಲರಿಗೂ ತಿಳಿಸುತ್ತಿದೆ. ಇಂತಹುದೊಂದು ಅದ್ಭುತವಾದ ಹಾಡನ್ನು ರಾಜೇಂದ್ರ ಅವರು ಬರೆದಿದ್ದು ಇದಕ್ಕೆ ರವಿ ಕಲ್ಯಾಣ ಅವರು ರಾಗ ಸಂಯೋಜನೆ ಮಾಡಿದ್ದು, ನಲಗೊಂಡ ಗದ್ದರ್ ಅವರು ಹಾಡಿದ್ದಾರೆ.
2024 ಲೋಕ ಸಮರದಲ್ಲಿ ಬಳ್ಳಾರಿಯಿಂದವ ಶ್ರೀ ರಾಮುಲು ಅವರು ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಈ ವೇಳೆಯಲ್ಲಿ ಅವರ ಕುರಿತಾದ ಹಾಡು ಬಿಡುಗಡೆಯಾಗಿದ್ದು, ಅದನ್ನು ಕೇಳಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಹಾಡಿನಲ್ಲಿ ಶ್ರೀರಾಮುಲು ಅವರು ಹತ್ತು ಹಲವು ಸೇವೆಗಳ ಕುರಿತಾಗಿ ಬಣ್ಣಿಸಲಾಗಿದೆ. ಅಭಿಮಾನಿಗಳು ಹಾಡನ್ನು ಕೇಳಿದ ನಂತರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೆಚ್ಚಿನ ನಾಯಕನಿಗೆ ಜಯ ಸಿಗಲೆಂದು ಶುಭ ಹಾರೈಸುತ್ತಿದ್ದಾರೆ.