ಕಣ್ಣು ದೇಹದ ಪ್ರಮುಖ ಮತ್ತು ಸೂಕ್ಷ್ಮ ಅಂಗವಾಗಿದೆ. ಕಣ್ಣಿನ ಸಮಸ್ಯೆಗಳು ಸಾಕಷ್ಟು ಚಿಂತೆ ಮತ್ತು ಒತ್ತಡಕ್ಕೆ ಕಾರಣವಾಗುತ್ತದೆ. ಕಣ್ಣಿನ ಸಮಸ್ಯೆಗಳು ದೈನಂದಿನ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಕಣ್ಣಿನ ಸಮಸ್ಯೆಯು ಯಾವಾಗ ಬೇಕಾದ್ರೂ ಸಂಭವಿಸಬಹುದು.
ಕಣ್ಣುಗಳು ಕೆಂಪಾಗುವುದು ಒಂದು ಸಮಸ್ಯೆ ಆಗಿದೆ. ಇದು ಕಣ್ಣಲ್ಲಿ ರಕ್ತ ಬಂದಂತೆ ಕಾಣುತ್ತದೆ. ಇದಕ್ಕೆ ಕಾರಣವೇನು, ಇದನ್ನು ಹೇಗೆ ತಡೆಯುವುದು ಎಂದು ತಿಳಿಯೋಣ. ಕಣ್ಣಿನಲ್ಲಿರುವ ಸಣ್ಣ ರಕ್ತನಾಳಗಳು ಉರಿ ಬಂದಾಗ, ನಾಳಗಳು ಊದಿಕೊಂಡಾಗ ಕಣ್ಣು ಕೆಂಪಾಗುವ ಸಮಸ್ಯೆ ಸಂಭವಿಸುತ್ತದೆ.
ಕಣ್ಣು ಕೆಂಪಗಾಗಲು ಹಲವು ಕಾರಣಗಳಿವೆ. ಕಣ್ಣು ಉರಿ, ಸಾಕಷ್ಟು ನಿದ್ದೆ ಬರದಿರುವುದು, ಕಣ್ಣಿನ ಮೇಲೆ ಅತಿಯಾದ ಒತ್ತಡವು ಕಣ್ಣು ಕೆಂಪಾಗಲು ಕಾರಣವಾಗುತ್ತದೆ. ಕಣ್ಣುಗಳು ಕೆಂಪಾಗಲು ಇನ್ನೂ ಕೆಲವು ಕಾರಣಗಳಿವೆ. ಧೂಳು, ಹೊಗೆ, ಕಣ್ಣೀರಿನ ಕೊರತೆ, ಕಣ್ಣಿನ ರೆಪ್ಪೆಗಳು ಕೆಡುವುದರ ಜೊತೆಗೆ ಕಣ್ಣಿನಲ್ಲಿ ಕಿರಿಕಿರಿ ಸಮಸ್ಯೆಗೆ ಕಾರಣವಾಗಿದೆ.
ಕೆಲವು ಮನೆಮದ್ದುಗಳು ಕಣ್ಣುಗಳಿಗೆ ವಿಶ್ರಾಂತಿ ನೀಡುತ್ತವೆ. ಕಣ್ಣು ಕೆಂಪಾಗುವ ಸಮಸ್ಯೆಯಿಂದ ಮನೆಮದ್ದುಗಳು ಪರಿಹಾರ ನೀಡುತ್ತವೆ. ಕಣ್ಣು ಕೆಂಪಾಗುವ ಸಮಸ್ಯೆ ತುಂಬಾ ಹೆಚ್ಚಿದ್ದರೆ ತಜ್ಞರನ್ನು ಸಂಪರ್ಕಿಸಿ, ಸರಿಯಾದ ಚಿಕಿತ್ಸೆ ಪಡೆಯುವುದು ಮುಖ್ಯ.
ಅಲೋವೆರಾ ಊತ ಕಡಿಮೆ ಮಾಡುತ್ತದೆ. ಇದು ಕಣ್ಣಿನ ಕೆಂಪು ಸಮಸ್ಯೆ ನಿವಾರಿಸುತ್ತದೆ. ಕಣ್ಣುಗಳಲ್ಲಿ ಊತದ ಸಮಸ್ಯೆ ಕಡಿಮೆ ಮಾಡುತ್ತದೆ. ಅಲೋವೆರಾ ಉರಿಯೂತದ ಗುಣಲಕ್ಷಣದಿಂದ ಸಮೃದ್ಧವಾಗಿದೆ. ಕಣ್ಣಿನ ಮೇಲೆ ಅಲೋವೆರಾ ಜೆಲ್ ಅಥವಾ ರಸ ಹಚ್ಚಿರಿ.
ಕಣ್ಣು ಕೆಂಪಾಗಿದ್ದರೆ ತೆಂಗಿನೆಣ್ಣೆ ಹಚ್ಚಿರಿ. ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಕೆ, ವಿಟಮಿನ್ ಇ, ಕ್ಯಾಲ್ಸಿಯಂ, ಕಬ್ಬಿಣಾಂಶವಿದೆ. ಇದು ಕಣ್ಣುಗಳಲ್ಲಿನ ಶುಷ್ಕತೆ ಮತ್ತು ಕಿರಿಕಿರಿ ಸಮಸ್ಯೆ ನಿವಾರಿಸಲು ಸಹಕಾರಿ. ಕಣ್ಣುಗಳಿಗೆ ಬಳಸಲು ಸ್ವಲ್ಪ ಸಾವಯವ ತೆಂಗಿನ ಎಣ್ಣೆ ಬಳಸಿ. ಇದು ಕಣ್ಣುಗಳಿಗೆ ಪರಿಹಾರ ನೀಡುತ್ತದೆ.
ಕಣ್ಣಿನ ಸುತ್ತಲೂ ಐಸ್ ಹಚ್ಚಿರಿ. ಕಣ್ಣು ಕೆಂಪು ಮತ್ತು ಊದಿಕೊಂಡಿದ್ದರೆ ಒಂದು ಸಣ್ಣ ತುಂಡು ಐಸ್ ನ್ನು ಸ್ವಚ್ಛವಾದ ಬಟ್ಟೆಯಲ್ಲಿ ಕಟ್ಟಿ, ಕಣ್ಣಿನ ಮೇಲೆ ಇಡಿ. ವೃತ್ತಾಕಾರದಲ್ಲಿ ತಿರುಗಿಸುತ್ತಾ ಇರಿ, 3 ನಿಮಿಷದ ನಂತರ ಕಣ್ಣಿನ ಮೇಲೆ ತಣ್ಣನೆ ಬಟ್ಟೆ ಹಾಕಿ.