ಆರೋಗ್ಯ ಸಮಸ್ಯೆ ಇರುವಾಗ ಅಥವಾ ಮಾನಸಿಕ ಸಮಸ್ಯೆ ಇರುವಾಗ ಧ್ಯಾನ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುವುದು ಎಂದು ಹೇಳುವುದನ್ನು ಕೇಳಿರುತ್ತೀರಿ. ಧ್ಯಾನಕ್ಕೆ ಮನಸ್ಸಿನಲ್ಲಿರುವ ಚಡಪಡಿಕೆ, ಗೊಂದಲ, ನೋವು ಎಲ್ಲವನ್ನೂ ಹೊರಹಾಕುವ ಶಕ್ತಿ ಇದೆ. ಧ್ಯಾನದಿಂದ ಏಕಾಗ್ರತೆ ಹೆಚ್ಚುವುದು. ಇನ್ನು ಮನಸ್ಸು ಶಾಂತವಾದಾಗ ರಕ್ತದೊತ್ತಡ ಸರಿಯಾದ ರೀತಿಯಲ್ಲಿರುತ್ತದೆ, ಇನ್ನಿತರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವುದು. ದೇಹವೂ ಚಟಿವಟಿಕೆಯಿಂದ ಕೂಡಿರುತ್ತದೆ.
ಧ್ಯಾನ ಎಂದರೇನು ಎಂಬುವುದು ಬಹುತೇಕ ಎಲ್ಲರಿಗೆ ಗೊತ್ತಿರುತ್ತದೆ. ಧ್ಯಾನವನ್ನು ಒಂದು ಕಡೆ ಕೂತೇ ಮಾಡಬೇಕಾ, ನಡೆಯುವಾಗ, ಪ್ರಯಾಣಿಸುವಾಗ ಧ್ಯಾನ ಮಾಡಬಹುದಾ? ಧ್ಯಾನಕ್ಕೆ ಎಷ್ಟು ಸಮಯ ಮೀಸಲಿಡಬೇಕು, ಯಾವಾಗ ಧ್ಯಾನದಿಂದ ತುಂಬಾ ಪ್ರಯೋಜನ ಸಿಗುವುದು ಇದರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂಬೆಲ್ಲಾ ಮಾಹಿತಿಗಳು ಈ ಲೇಖನದಲ್ಲಿದೆ ನೋಡಿ:
ಧ್ಯಾನದ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? ಧ್ಯಾನ ಮನುಷ್ಯನ ಮೇಲೆ ಬೀರುವ ಪ್ರಭಾವಗಳು, ಇದರ ಪ್ರಯೋಜನಗಳ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ, ಅವುಗಳಿಂದ ತಿಳಿದು ಬಂದಿದ್ದು ಏನೆಂದರೆ ಈ ಕೆಳಗಿನ ಧ್ಯಾನದಿಂದ ಪಡೆಯಬಹುದಾದ ಪ್ರಯೋಜನಗಳ ಮೇಲೆ ಪ್ರಭಾವ ಬೀರುವುದು.
ಧ್ಯಾನವನ್ನು ಪ್ರತಿನಿತ್ಯ ಮಾಡುವುದು ಅಥವಾ ಅಪರೂಪಕ್ಕೆ ಮಾಡುವುದು
ಧ್ಯಾನಕ್ಕಾಗಿ ಮೀಸಲಿಡುವ ಸಮಯ
ಧ್ಯಾನಕ್ಕೆ ಕೂರುವ ಸ್ಥಳ
ಧ್ಯಾನದ ಬಗ್ಗೆ ನಿಮ್ಮಲ್ಲಿರುವ ತಿಳುವಳಿಕೆ
ಸಂತೋಷ 2017ರಲ್ಲಿ ಈ ಕುರಿತು ಅಧ್ಯಯನ ನಡೆಸಲಾಯಿತು, ಆಗ ತಿಳಿದು ಬಂದ ಅಂಶವೆಂದರೆ ಧ್ಯಾನಕ್ಕೆ ಹೆಚ್ಚು ಸಮಯ ಮೀಸಲಿಟ್ಟಷ್ಟೂ ಹೆಚ್ಚು ಧನಾತ್ಮಕ ಫಲಿತಾಂಶ ದೊರೆಯುವುದು. ಬೆಂಗಳೂರಿಗರೇ. ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ ಧ್ಯಾನ ಯಾವಾಗ ಹೆಚ್ಚು ಪರಿಣಾಮಕಾರಿ ಧ್ಯಾನ ಮಾಡುವವರಿಗೆ ನಾನು ಏಕೆ ಧ್ಯಾನ ಮಾಡಬೇಕು, ಇದರಿಂದ ದೊರೆಯುವ ಪ್ರಯೋಜನಗಳೇನು, ಸಾಂಸ್ಕೃತಿಕ, ಆಧ್ಯಾತ್ಮಿಕ ಮಹತ್ವದ ಬಗ್ಗೆ ತಿಳಿದಿರಬೇಕು. ಆಗ ಧ್ಯಾನವನ್ನು ಮತ್ತಷ್ಟು ಶ್ರದ್ಧೆಯಿಂದ ಮಾಡಲಾಗುವುದು. ಪ್ರತೀ ಬಾರಿ ಧ್ಯಾನ ಮಾಡುವಾಗ ಇದೇ ಮೊದಲ ಬಾರಿಗೆ ಮಾಡುತ್ತಿದ್ದೇವೆ ಎಂಬಂತೆ ಶ್ರದ್ಧೆ ಮತ್ತು ಭಕ್ತಿ ಇರಬೇಕು. ಧ್ಯಾನ ಮಾಡುವಾಗ ತಲೆಯಲ್ಲಿರುವ ನೂರಾರು ಆಲೋಚನೆಗಳನ್ನು ಬದಿಗಿಡಿ, ಆ ಕ್ಷಣದಲ್ಲಿ ಜೀವಿಸಿ. ಓಂಕಾರವಷ್ಟೇ ನಿಮ್ಮ ಕಿವಿಗೆ ಬೀಳಲಿ. ಓಂ ಉಚ್ಛಾರಣೆ ಮಾಡುವಾಗ ಅದರ ಕಂಪನ ನಿಮ್ಮ ಹೃದಯದಲ್ಲಾಗುವುದು. ನಿಮಗೆ ಹೇಗೆ ಸಾಧ್ಯವೋ ಹಾಗೆ ಧ್ಯಾನ ಮಾಡಬಹುದು. ಇಷ್ಟೇ ಸಮಯ ಎಂಬುವುದಾಗಿ ಇಲ್ಲ… ಪ್ರತಿದಿನ ಧ್ಯಾನ ಅಭ್ಯಾಸ ಮಾಡುವವರು 5 ನಿಮಿಷ ಮಾಡಿ ಹಾಗೂ ತಿಂಗಳಿಗೊಮ್ಮೆ 13 ನಿಮಿಷ ಧ್ಯಾನ ಮಾಡಿ. ಇನ್ನು ಧ್ಯಾನ ಮಾಡೋಕೆ ಇಷ್ಟೇ ಸಮಯ ಎಂಬುವುದಾಗಿ ಇಲ್ಲ. ಧ್ಯಾನ ಎಷ್ಟು ಸಮಯ ಮಾಡಬೇಕು ಎಂಬುವುದನ್ನು ನೀವು ಈ ಅಂಶಗಳಿಂದ ನಿರ್ಧರಿಸಬಹುದು:
ಎಷ್ಟು ಸಮಯ ಧ್ಯಾನಕ್ಕೆ ಮೀಸಲಿಡಬಹುದು
ಧ್ಯಾನದಿಂದ ಮನಸ್ಸಿಗೆ ಸಿಗುವ ವಿಶ್ರಾಂತಿ
ಧ್ಯಾನದಿಂದ ಸಿಗುವ ಆನಂದ ಧ್ಯಾನ ಎಷ್ಟು ಸಮಯ ಮಾಡಬೇಕು ಎಂಬುವುದು ನಾವು ಧ್ಯಾನ ಅಭ್ಯಾಸ ಮಾಡಲು ಪ್ರಾರಂಭಿಸಿದ ಮೇಲೆ ತಿಳಿಯುವುದು, ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ..! ಎಷ್ಟು ಲಾಭವಿದೆ ಗೊತ್ತಾ? ಧ್ಯಾನದ ಬಗೆಗಳು ಹಲವು ಬಗೆಯಲ್ಲಿ ಧ್ಯಾನ ಮಾಡಬಹುದು
ಮಂತ್ರ ಹೇಳುವ ಮೂಲಕ ಧ್ಯಾನ ಮಾಡಬಹುದು
ಧಾರ್ಮಿಕ ಆಚರಣೆ ಮಾಡುತ್ತಾ ಧ್ಯಾನ ಮಾಡಬಹುದು
ಒಂದೇ ವಸ್ತುವಿನ ಕಡೆ ಗಮನ ಹರಿಸಿ ಧ್ಯಾನ ಮಾಡಬಹುದು
ಯಾವುದೇ ಒಂದು ವಸ್ತು ಅಥವಾ ವಿಷಯವನ್ನು ಕಲ್ಪಿಸಿಕೊಂಡು ಧ್ಯಾನ ಮಾಡಬಹುದು
ನಡೆಯುತ್ತಾ ಧ್ಯಾನ ಮಾಡಬಹುದು
ಅತೀಂದ್ರಿಯ ಧ್ಯಾನ ಹೀಗೆ ಅನೇಕ ಬಗೆಯ ಧ್ಯಾನದ ವಿಧಗಳಿವೆ.
ಮೊದಲಿಗೆ ಧ್ಯಾನ ಪ್ರಾರಂಭಿಸಿ ಧ್ಯಾನ ಎಂದರೇನು, ಅದರ ಪ್ರಯೋಜನಗಳೇನು ಎಂಬುವುದು ತಿಳಿಯಬೇಕೆಂದರೆ ಮೊದಲಿಗೆ ನೀವು ಧ್ಯಾನವನ್ನು ಅಭ್ಯಾಸ ಮಾಡಬೇಕು. ಅಭ್ಯಾಸ ಮಾಡಿದವರಿಗಷ್ಟೇ ಅದರ ಮಹತ್ವ ತಿಳಿಯಲು ಸಾಧ್ಯ, ಅದರಿಂದ ಸಿಗುವ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಲು ಸಾಧ್ಯ. ಧ್ಯಾನವನ್ನು ಯಾರು ಬೇಕಾದರೂ ಮಾಡಬಹುದು… ಧರ್ಮ, ಜಾತಿಯ ನಿರ್ಬಂಧಗಳಿಲ್ಲ. ಮಾನಸಿಕ ಒತ್ತಡ ಕಡಿಮೆ ಮಾಡಿ ಆರೋಗ್ಯ ಹೆಚ್ಚಿಸುವಲ್ಲಿ ಧ್ಯಾನ ತುಂಬಾನೇ ಸಹಕಾರಿಯಾಗಿದೆ.