ನಿಮ್ಮ ತಾಕತ್ತು ಎರಡು ಪಟ್ಟು ಜಾಸ್ತಿ ಆಗಲು ಮನೆಯಲ್ಲಿ ಈ ಲಡ್ಡು ಮಾಡಿಕೊಂಡು ತಿನ್ನಿ!

ಇವತ್ತಿನ ಲೇಖನದಲ್ಲಿ ರುಚಿಕರವಾದ ಪ್ರೊಟೀನ್ ಲಡ್ಡುವಿನ ಬಗ್ಗೆ ತಿಳಿಸಿಕೊಡುತ್ತೇವೆ.ಈ ಲದ್ದುವನ್ನು ಚಿಕ್ಕ ಮಕ್ಕಳಿಂದ ಇಡಿದು ದೊಡ್ಡವರು ಸಹ ತಿನ್ನಬಹುದು ಅಷ್ಟು ರುಚಿಯಾಗಿ ಇರುತ್ತದೆ. ಇದನ್ನು ಸೇವನೆ ಮಾಡುವುದರಿಂದ ನಿಶಕ್ತಿ ಕೂಡ ಕಡಿಮೆ ಆಗುತ್ತದೆ ಮತ್ತು ಚಿಕ್ಕ ಮಕ್ಕಳು ಇದನ್ನು ಸೇವನೆ ಮಾಡುವುದರಿಂದ ಮಕ್ಕಳ ದೇಹದ ತೂಕ ಜಾಸ್ತಿ ಆಗಲು ಸಹಾಯ ಆಗುತ್ತದೆ. ಜೊತೆಗೆ ಅವರಿಗೆ ಉತ್ತಮವಾದ ಪೌಷ್ಟಿಕಾಂಶಗಳು ಸಿಗುತ್ತವೆ.

ಲಡ್ಡು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು
-500 ಗ್ರಾಂ ಶೇಂಗಾ
-509 ಗ್ರಾಂ ಎಲ್ಲಾ ರೀತಿಯ ಡ್ರೈ ಫ್ರೂಟ್ಸ್
-ರುಚಿಗೆ ತಕ್ಕಷ್ಟು ಬೆಲ್ಲ

ಲಡ್ಡು ಮಾಡುವ ವಿಧಾನ–ಮೊದಲು ಶೇಂಗಾ ಮತ್ತು ಡ್ರೈ ಫ್ರೂಟ್ಸ್ ಗಳನ್ನು ಉರಿದುಕೊಳ್ಳಬೇಕು. ನಂತರ ಉರಿದ ಶೇಂಗಾ ಸಿಪ್ಪೆಯನ್ನು ಬಿಡಿಸಬೇಕು ಮತ್ತು ಸಿಪ್ಪೆ ಬಿಡಿಸಿದ ಮೇಲೆ ಶೇಂಗಾವನ್ನು ಮಿಕ್ಸಿ ಯಲ್ಲಿ ಹಾಕಿ ಪುಡಿ ಮಾಡಬೇಕು. ಹಾಗು ಅದೇ ರೀತಿ ಡ್ರೈ ಫ್ರೂಟ್ಸ್ ಗಳನ್ನು ಮಿಕ್ಸಿ ಗೆ ಹಾಕಿ ಪುಡಿ ಮಾಡಿ. ನಂತರ ಇವೆರಡನ್ನು ಮಟ್ಟಿ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮತ್ತೆ ಮಿಕ್ಸಿ ಗೆ ಪುಡಿ ಮಾಡಿದ ಮೇಲೆ ಸುಲಭವಾಗಿ ಉಂಡೆಯನ್ನು ಕಟ್ಟಬಹುದು. ಇದನ್ನು ಸೇವನೆ ಮಾಡಿದರೆ ನಿಮ್ಮ ಅರೋಗ್ಯ ಕೂಡ ಚೆನ್ನಾಗಿ ಇರುತ್ತದೆ.

Leave a Comment