ನಮ್ಮ ಜೀವನದಲ್ಲಿ ಜ್ಯೋತಿಷ್ಯ ಮತ್ತು ಹಸ್ತಸಾಮುದ್ರಿಕ ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹೇಗೆ ಜೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕವನ್ನು ನೋಡಲಾಗುತ್ತದೆಯೋ, ಹಾಗೆಯೇ ಹಸ್ತ ಸಾಮುದ್ರಿಕ ಶ್ತಾಸ್ತ್ರದಲ್ಲಿ ಹಸ್ತದ ರೇಖೆಗಳನ್ನು ನೋಡುವ ಮೂಲಕ ವ್ಯಕ್ತಿಯ ಭವಿಷ್ಯದ ಕುರಿತು ಲೆಕ್ಕ ಹಾಕಲಾಗುತ್ತದೆ. ಇದೇ ರೀತಿ ಸಾಮುದ್ರಿಕ ಶಾಸ್ತ್ರಕ್ಕೂ ಕೂಡ ತನ್ನದೇ ಆದ ಮಹತ್ವವಿದೆ. ಇದರಲ್ಲಿ, ಮಾನವ ದೇಹದ ರಚನೆ, ಮಚ್ಚೆ ಮತ್ತು ಚಿಹ್ನೆಗಳನ್ನೂ ನೋಡುವ ಮೂಲಕ, ಮಾನವನ ವ್ಯಕ್ತಿತ್ವ ಮತ್ತು ಭವಿಷ್ಯದ ಕುರಿತು ಹೇಳಲಾಗುತ್ತದೆ. ಇಂದು ಸಾಮುದ್ರಿಕ ಶಾಸ್ತ್ರದಲ್ಲಿ ನಾವು ಮನುಷ್ಯರ ನಿದ್ರೆಯ ವಿಧಾನಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ನೇರವಾಗಿ ಮಲಗುವುದು-ಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಾಸಿಗೆಯ ಮೇಲೆ ನೇರವಾಗಿ ಮಲಗುವ ಜನರು ತುಂಬಾ ಶಿಸ್ತಿನವರಾಗಿರುತ್ತಾರೆ. ಈ ಜನರು ತಮ್ಮ ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ನಿಪುಣರು ಎಂದು ಪರಿಗಣಿಸಲ್ಪಡುತ್ತಾರೆ. ಇವರು ನಿಯಮಗಳನ್ನು ಅನುಸರಿಸಲು ತುಂಬಾ ಇಷ್ಟಪಡುತ್ತಾರೆ ಮತ್ತು ಇತರರಿಂದ ಕೂಡ ಅದನ್ನೇ ನಿರೀಕ್ಷಿಸುತ್ತಾರೆ.
ದೇಹವನ್ನು ಹರಡಿ ಮಲಗುವರು-ನಮ್ಮಲ್ಲ್ಲಿ ಹಲವು ಜನರು ಇಡೀ ಹಾಸಿಗೆಯ ಮೇಲೆ ಕೈ, ಕಾಲು ಹಾಗೂ ಪಾದಗಳನ್ನು ಚಾಚಿ ಮಲಗುವ ಅಭ್ಯಾಸ ಹೊಂದಿರುತ್ತಾರೆ. ಈ ರೀತಿ ಮಾಡಿದರೆ ಮಾತ್ರ ಅವರಿಗೆ ಒಳ್ಳೆಯ ನಿದ್ದೆ ಬರುತ್ತದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ, ಈ ರೀತಿ ಮಲಗುವ ಜನರ ಆರ್ಥಿಕ ಸ್ಥಿತಿ ದುರ್ಬಲವಾಗಿರುತ್ತದೆ ಮತ್ತು ಅವರು ತಮ್ಮ ಜೀವನದುದ್ದಕ್ಕೂ ಹೋರಾಟ ನಡೆಸಬೇಕಾಗುತ್ತದೆ. ಅಂದರೆ ಇಂತಹ ಜನರಿಗೆ ಅದೃಷ್ಟ ತುಂಬಾ ವಿರಳವಾಗಿ ಒಲಿಯುತ್ತದೆ.
ಸಾಕಷ್ಟು ನಿದ್ರೆ ಮಾಡುವವರು-ಹಲವು ಜನರಿಗೆ ಸಾಕಷ್ಟು ನಿದ್ದೆ ಮಾಡುವುದು ಎಂದರೆ ತುಂಬಾ ಇಷ್ಟದ ಸಂಗತಿಯಾಗಿರುತ್ತದೆ. ಸಾಮುದ್ರಿ ಶಾಸ್ತ್ರದ ಪ್ರಕಾರ, ಸಾಕಷ್ಟು ನಿದ್ರೆ ಪಡೆಯುವ ಜನರ ನಡವಳಿಕೆಯು ತುಂಬಾ ಮೃದುವಾಗಿರುತ್ತದೆ. ಆದರೆ, ಇದಕ್ಕೆ ವಿಪರೀತ ಎಂಬಂತೆ ಈ ಜನರನ್ನು ಸ್ವಲ್ಪ ಸೋಮಾರಿಗಳೆಂದು ಪರಿಗಣಿಸಲಾಗುತ್ತದೆ, ಸ್ವತಂತ್ರ ನಿಯಮಾವಳಿಗಳನ್ನು ರೂಪಿಸಿ ಬದುಕುವುದರಲ್ಲಿ ಇವರಿಗೆ ಹೆಚ್ಚಿನ ನಂಬಿಕೆ ಇರುತ್ತದೆ.
ಒಂದೇ ಮಗ್ಗುಲಲ್ಲಿ ಮಲಗುವರು ಸಾಮುದ್ರಿಕ ಶಾಸ್ತ್ರದ ಪ್ರಕಾರ, ಒಂದೇ ಮಗ್ಗುಲಲ್ಲಿ ಮಲಗುವ ಬಹುತೇಕ ಜನರು ತಮ್ಮ ಹೃದಯವನ್ನು ಯಾರೊಂದಿಗೂ ಸುಲಭವಾಗಿ ಹಂಚಿಕೊಳ್ಳುವುದಿಲ್ಲ. ಈ ಜನರು ಬಹಳಷ್ಟು ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ ಮತ್ತು ಕಠಿಣ ಪರಿಶ್ರಮದ ಆಧಾರದ ಮೇಲೆ ಇವರು ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. ಈ ಜನರು ಪ್ರಯಾಣವನ್ನು ತುಂಬಾ ಇಷ್ಟಪಡುತ್ತಾರೆ.