ಅನೇಕ ಜನರು ಮನೆಯ ಮುಂದೆ ಬೇರೆ ಬೇರೆ ರೀತಿಯ ಗಿಡಗಳನ್ನು ನೆಡಲು ಬಯಸುತ್ತಾರೆ. ಇದಕ್ಕಾಗಿ, ತಮಗೆ ಇಷ್ಟವಾದ ಗಿಡವನ್ನು ತಂದು ಮನೆಯಲ್ಲಿ ನೆಡುತ್ತಾರೆ. ಆದರೆ ವಾಸ್ತು ಪ್ರಕಾರ ಕೆಲವು ಗಿಡಗಳನ್ನು ಮನೆಯಲ್ಲಿ ನೆಡ ಲೇಬಾರದು. ಈ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ದಟ್ಟ ದಾರಿದ್ರ್ಯ ಕಾಡುತ್ತದೆ ಎನ್ನುವುದು ನಂಬಿಕೆ. ಹಾಗಾಯಿ ಅಂಥಹ ಗಿಡಗಳನ್ನು ತಪ್ಪಿಯೂ ಮೇಯಲ್ಲಿ ನೆಡಬಾರದು.
ಗೋರಂಟಿ ಗಿಡ :ಮನೆಯಲ್ಲಿ ಗೋರಂಟಿ ಗಿಡ ನೆಡುವುದು ಶುಭವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ದುಷ್ಟ ಶಕ್ತಿಗಳು ಈ ಸಸ್ಯದಲ್ಲಿ ನೆಲೆಸಿರುತ್ತವೆಯಂತೆ. ಮನೆಯಲ್ಲಿ ಗೋರಂಟಿ ಗಿಡವನ್ನು ನೆಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಬರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯವರು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಅಲ್ಲದೆ ಎಷ್ಟೇ ದುಡಿದರೂ ಹಣ ಉಳಿಸುವುದು ಸಾಧ್ಯವಾಗುವುದಿಲ್ಲವಂತೆ.
ಹುಣಸೆ ಮರ :ಹುಣಸೆಹಣ್ಣು ತಿನ್ನಲು ರುಚಿಯಾಗಿರಬಹುದು. ಆದರೆ ಮನೆಯಲ್ಲಿ ಇದರ ಗಿಡವನ್ನು ಹಾಕಬಾರದು. ವಾಸ್ತು ಶಾಸ್ತ್ರದ ಪ್ರಕಾರ ಹುಣಸೆ ಗಿಡ ನೆಡುವುದರಿಂದ ಮನೆಯಲ್ಲಿ ಸದಾ ಭಯದ ವಾತಾವರಣ ನೆಲೆಯಾಗುತ್ತದೆಯಂತೆ. ಹಾಗಾಗಿ ತಪ್ಪಿಯೂ ಕೂಡಾ ಮನೆಯಲ್ಲಿ ಹುಣಸೆ ಗಿಡ ನೆಡಬಾರದು.
ಬುಗರಿ ಹಣ್ಣಿನ ಗಿಡ :ಮನೆಯಲ್ಲಿ ಬುಗರಿ ಹಣ್ಣಿನ ಗಿಡವನ್ನು ನೆಟ್ಟರೆ ಸಂತೋಷ ನಾಶವಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಗಿಡ ಮುಳ್ಳುಗಳನ್ನು ಹೊಂದಿದೆ. ಅದೇ ರೀತಿಯಲ್ಲಿ, ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆ ಮಂದಿಯ ಜೀವನ ಕೂಡಾ ಮುಳ್ಳುಗಳಿಂದ ಕೂಡಿರುತ್ತದೆ. ಈ ಮರವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ.
ಕಳ್ಳಿ ಗಿಡ :ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ಜಗಳಗಳು, ನಡೆಯುತ್ತಿರುತ್ತವೆ. ಈ ಗಿದವ್ಕಾನ್ನು ನೆಡುವುದರಿಂದ ಮನೆಯಲ್ಲಿ ಯಾರೂ ಸಂತೋಷವಾಗಿರಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಈ ಸಸ್ಯವು ಮನೆಯಲ್ಲಿ ಯಶಸ್ಸನ್ನು ತಡೆಯುತ್ತದೆ, ಇದರಿಂದಾಗಿ ಮನೆಯಲ್ಲಿ ಬಡತನ ನೆಲೆಸುತ್ತದೆ.