ನಿಜ ಪ್ರೀತಿ ಸಂಪಾದಿಸಲು ಈ ರಾಶಿಗಳ ಜನರು ಸಾಕಷ್ಟು ಕಷ್ಟಪಡಬೇಕು!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯನ್ನು ಚೆನ್ನಾಗಿ ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು, ಆತನ ರಾಶಿ ಸಾಕಾಗುತ್ತದೆ ಎನ್ನಲಾಗುತ್ತದೆ. ರಾಶಿಯ ಆಧಾರದ ಮೇಲೆ ಆ ವ್ಯಕ್ತಿಯ ಭವಿಷ್ಯ, ಯಶಸ್ಸು ಮತ್ತು ವೈಫಲ್ಯ ಇತ್ಯಾದಿಗಳ ಕುರಿತು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ ಆ ವ್ಯಕ್ತಿಗೆ ಜೀವನದಲ್ಲಿ ನಿಜವಾದ ಪ್ರೀತಿ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಕೂಡ ತಿಳಿದುಕೊಳ್ಳಬಹುದು. ಒಂದು ವೇಳೆ ಆತನಿಗೆ ನಿಜವಾದ ಪ್ರೀತಿ ದಕ್ಕಿದರೂ ಕೂಡ ಅದು ಯಾವ ವಯಸ್ಸಿನಲ್ಲಿ ಸಿಗುತ್ತದೆ ಎಂಬುದನ್ನು ಕೂಡ ಆತನ ರಾಶಿಯಿಂದ ಸುಲಭವಾಗಿ ತಿಳಿದುಕೊಳ್ಳಬಹುದು. ಇಂದು ನಾವು ನಿಮಗೆ ಅಂತಹ ಕೆಲ ರಾಶಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದು, ಈ ರಾಶಿಗಳ ಜನರು ಜೀವನದಲ್ಲಿ ನಿಜವಾದ ಪ್ರೀತಿಯನ್ನು ಗಳಿಸಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ.

ಈ ರಾಶಿಯವರಿಗೆ ಪ್ರೀತಿ ಸುಲಭವಾಗಿ ಸಿಗುವುದಿಲ್ಲ–ಕುಂಭ ರಾಶಿ- ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳ ಕುರಿತು ಉಲ್ಲೇಖಿಸಲಾಗಿದೆ. ಇವುಗಳಲ್ಲಿ 11ನೇ ಸ್ಥಾನದಲ್ಲಿ ಕುಂಭ ರಾಶಿ ಇದೆ. ಕುಂಭ ರಾಶಿಗೆ ಶನಿ ಅಧಿಪತಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯ ಸ್ವಭಾವ ಕ್ರೂರ ಸ್ವಭಾವ ಎನ್ನಲಾಗುತ್ತದೆ. ಇದೇ ವೇಳೆ ಶನಿಯನ್ನು ನ್ಯಾಯದ ಮತ್ತು ಕರ್ಮಫಲದಾತ ಎಂದೂ ಕೂಡ ಕರೆಯಲಾಗುತ್ತದೆ. ಹೀಗಿರುವಾಗ ಈ ರಾಶಿಯ ಜನರ ಜಾತಕದಲ್ಲಿ ಶನಿದೇವನು ಅಶುಭ ಸ್ಥಾನದಲ್ಲಿದ್ದಾಗ, ಈ ರಾಶಿಯ ಜನರು ತನ್ನ ಪ್ರೀತಿಯನ್ನು ಪಡೆಯಲು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಜವಾದ ಪ್ರೀತಿಯನ್ನು ಹುಡುಕಲು ಮತ್ತು ಪಡೆದುಕೊಳ್ಳಲು ಇವರು ತುಂಬಾ ಶ್ರಮಿಸಬೇಕಾಗುತ್ತದೆ.

ತುಲಾ ರಾಶಿ- ತುಲಾ ರಾಶಿಯ ಅಧಿಪತಿ ಶುಕ್ರ. ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹವನ್ನು ಆನಂದ, ಪ್ರೀತಿ, ಪ್ರಣಯ, ಐಷಾರಾಮಿ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಇದೇ ವೇಳೆ ಈ ರಾಶಿಯು ಅಗ್ನಿ ತತ್ವದ ರಾಶಿಯಾಗಿದೆ ಮತ್ತು ಈ ರಾಶಿ ಶನಿಗೆ ತುಂಬಾ ಪ್ರಿಯವಾದ ರಾಶಿ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.  ಆದ್ದರಿಂದ, ಈ ರಾಶಿ ಜನರು ನಿಯಮಗಳು ಮತ್ತು ಶಿಸ್ತುಗಳನ್ನು ತುಂಬಾ ಇಷ್ಟಪಡುತ್ತಾರೆ. ಈ ಜನರು ಪ್ರೀತಿಯನ್ನು ಪಡೆಯಲು ಹಲವು ಬಾರಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ, ಏಕೆಂದರೆ ಶನಿದೇವನು ಕಠಿಣ ಪರಿಶ್ರಮದ ನಂತರವೇ ಈ ರಾಶಿಗಳ ವ್ಯಕ್ತಿಗೆ ಫಲವನ್ನು ನೀಡುತ್ತಾನೆ.

ಮಕರ ರಾಶಿ- ಮಕರರಾಶಿಯೂ ಕೂಡ ಶನಿಯ ರಾಶಿಯಾಗಿದೆ. ಶನಿ ದೇವ ವ್ಯಕ್ತಿಗಳ ಕರ್ಮದ ಆಧಾರದ ಮೇಲೆ ವ್ಯಕ್ತಿಗೆ ಶುಭ ಮತ್ತು ಅಶುಭ ಫಲಗಳನ್ನು ದಯಪಾಲಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ರಾಶಿಯವರು ಪ್ರೀತಿಗಾಗಿ ಕಷ್ಟಪಡಬೇಕಾಗುತ್ತದೆ. ಮಕರ ರಾಶಿಯ ಜನರ ಜಾತಕದಲ್ಲಿ ಶನಿಯು ಅಶುಭವಾಗಿದ್ದರೆ, ಅದುವೇ ಈ ಜಾತಕ ಹೊಂದಿದವರ ಪ್ರೀತಿಯಲ್ಲಿ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶನಿಯನ್ನು ಆತನು ನೀಡುವ ಶುಭ ಫಲಗಳಿಗಾಗಿ ಪೂಜಿಸಿ ಮತ್ತು ಕೆಟ್ಟ ಜನರ ಸಹವಾಸದಿಂದ ದೂರವಿರಿ.

Leave a Comment