ನವೆಂಬರ್‌ನಲ್ಲಿ ಸೂರ್ಯ ದೇವ ರಾಶಿಯನ್ನು ಬದಲಾಯಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ 16 ರ ಸಂಜೆ 6.58 ನಿಮಿಷಕ್ಕೆ ವೃಶ್ಚಿಕ ರಾಶಿಯಲ್ಲಿ ಸೂರ್ಯ ಸಂಕ್ರಮಿಸುತ್ತಾನೆ. ಈ ಬದಲಾವಣೆಯು ಯಾವ ರಾಶಿಚಕ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಯಾವ ರಾಶಿಯವರ ಅದೃಷ್ಟ ತೆರೆಯಲಿದೆ ನೋಡೋಣ.
ಮೇಷ ರಾಶಿ :ಸೂರ್ಯ ದೇವರು ಮೇಷ ರಾಶಿಯ ಐದನೇ ಮತ್ತು ಎಂಟನೇ ಮನೆಯ ಅಧಿಪತಿ. ಆದ್ದರಿಂದ, ಈ ರಾಶಿಚಕ್ರದ ಜನರು ಸಂಶೋಧನಾ ಕಾರ್ಯದಲ್ಲಿ ಪ್ರಗತಿಯನ್ನು ಹೊಂದುತ್ತಾರೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ಕೂಡಾ ಎದುರಾಗಬಹುದು.ವೃಷಭ ರಾಶಿ:ಸೂರ್ಯ ದೇವರು ವೃಷಭ ರಾಶಿಯ ಏಳನೇ ಮತ್ತು ನಾಲ್ಕನೇ ಮನೆಯ ಅಧಿಪತಿ. ವ್ಯಾಪಾರ ಮಾಡುತ್ತಿರುವವರು ಹೊಸ ಅವಕಾಶಗಳನ್ನು ಪಡೆಯಬಹುದು. ಸಂಬಂಧದಲ್ಲಿಯೂ ಏರಿಳಿತಗಳಿರಬಹುದು. ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.
ಮಿಥುನ ರಾಶಿ :ಮಿಥುನ ರಾಶಿಯ ಮೂರು ಮತ್ತು ಆರನೇ ಮನೆಗಳ ಅಧಿಪತಿ ಸೂರ್ಯ. ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯಬಹುದು. ಎಂಎನ್‌ಸಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭವಾಗಲಿದೆ.ಮಕರ ರಾಶಿ :ಈ ರಾಶಿಯವರ ಸಂಪತ್ತು ವೃದ್ಧಿಯಾಗಲಿದೆ. ಇದರ ಹೊರತಾಗಿ, ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವಾಗಲಿದೆ. ಈ ರಾಶಿಯವರ ವೈಯಕ್ತಿಕ ಜೀವನಕ್ಕೆ ಇದು ಉತ್ತಮ ಸಮಯವಾಗಿರುತ್ತದೆ.
Learn from IIT Madras Faculty & Industry ExpertsIntel
ವೃಶ್ಚಿಕ ರಾಶಿ :ವೃಶ್ಚಿಕ ರಾಶಿಯ ಹತ್ತನೇ ಮನೆಯ ಅಧಿಪತಿ ಸೂರ್ಯ. ವ್ಯಾಪಾರ ಮಾಡುವವರು ಲಾಭವನ್ನು ಪಡೆಯಬಹುದು. ಜನರಿಂದ ಗೌರವ ಸಿಗಲಿದೆ. ತುಲಾ ರಾಶಿ :ಸೂರ್ಯ ದೇವರು ತುಲಾ ರಾಶಿಯವರ ಎರಡನೇ ಮತ್ತು 11 ನೇ ಮನೆಯ ಅಧಿಪತಿ. ಈ ರಾಶಿಯವರಿಗೆ ಆರ್ಥಿಕ ಲಾಭವಾಗಬಹುದು. ಇದಲ್ಲದೇ ಉಳಿತಾಯ ಮಾಡುವುದರಲ್ಲೂ ಯಶಸ್ವಿಯಾಗಲಿದ್ದಾರೆ.