ಜಗತ್ತಿನಲ್ಲಿ ಶಕ್ತಿಶಾಲಿ ಆಹಾರ ಶೇಂಗಾ/ಕಡ್ಲೆಕಾಯಿ!

ನೆನಸಿದ ಶೇಂಗಾ ಪ್ರಯೋಜನಗಳ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ. ಯಾವುದೇ ಧಾನ್ಯವನ್ನು ನೆನೆಸಿ ಉಪಯೋಗ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಇದರ ಪ್ರಯೋಜನ 100% ಸಿಗುತ್ತದೆ. ಶೇಂಗಾ ಬೀಜವನ್ನು ಹಾಗೆ ಸೇವನೆ ಮಾಡುವುದರಿಂದ ಪಿತ್ತ ಮತ್ತು ಉಲ್ಬಣ ವೃದ್ಧಿಯಾಗುತ್ತದೆ. ಅದೇ ಶೇಂಗಾವನ್ನು ನೆನೆಸಿ ತಿಂದರೆ ಪಿತ್ತ ಮತ್ತು ವಾತ ಶಮನವಾಗುತ್ತದೆ. ಇನ್ನು ನೆನಸಿದ ಕಡಲೆ ಬೀಜದಲ್ಲಿ ಅದ್ಭುತವಾದ ಸತ್ವಗಳನ್ನು ಕಾಣಬಹುದು. ಇದರಲ್ಲಿ ಪ್ರೊಟೀನ್ ಐರನ್ ವಿಟಮಿನ್ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ.

ಶೇಂಗಾ ಬೀಜವನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಬಾದಾಮಿ ಗಿಂತಲೂ ಹತ್ತುಪಟ್ಟು ಹೆಚ್ಚು ಪೋಷಕಾಂಶ ಶೇಂಗಾಬೀಜದಲ್ಲಿದೆ. ಪ್ರತಿದಿನ ಶೇಂಗಾ ಬೀಜವನ್ನು ನೆನೆಸಿ ಬೆಲ್ಲದ ಜೊತೆ ಮಕ್ಕಳಿಗೆ ಕೊಡುವುದರಿಂದ ಮಕ್ಕಳ ಮಾನಸಿಕ ವಿಕಾಸ ಆಗುತ್ತದೆ. ಶರೀರಿಕ ವಿಕಾಸ ಆಗುತ್ತದೆ.ಶರೀರದಲ್ಲಿ ವಾತ ಪಿತ್ತ ಕಫ ವಿಕಾರಗಳು ಶಮನ ಆಗುತ್ತದೆ. ಶರೀರ ಸಮರ್ಪಕವಾಗಿ ಬೆಳವಣಿಗೆ ಆಗುತ್ತದೆ.ಶೇಂಗಾ ಬೀಜವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಬಲ ವೃದ್ಧಿಯಾಗುತ್ತದೆ.

ನೆನೆಸಿದ ಕಡಲೆ ಬೀಜವನ್ನು ಸೇವನೆ ಮಾಡುವುದರಿಂದ ಹೃದಯದ ರಕ್ತನಾಳಗಳ ಆಗಿರುವ ಬ್ಲಾಕೆಜ್ ಕಡಿಮೆಯಾಗುತ್ತದೆ.ಕಣ್ಣಿನ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ. ಇದನ್ನು ಸೇವನೆ ಮಾಡುವುದರಿಂದ ಗ್ಯಾಸ್ಟಿಕ್ ಅಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ. ಕ್ಯಾಲ್ಸಿಯಂ ಕೊರತೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ತಪ್ಪದೇ ಪ್ರತಿದಿನ ಬೆಳಗ್ಗೆ 50 ಗ್ರಾಂ ನೆನೆಸಿದ ಶೇಂಗಾ ಬೀಜವನ್ನು ಸೇವನೆ ಮಾಡಿ.

ನೆನೆಸಿದ ಬಾದಾಮಿ ಹೇಗೆ ಆರೋಗ್ಯಾಭಿವೃದ್ಧಿಗೆ ಸಹಾಯವೋ ಅದೇ ರೀತಿ ನೆನೆಸಿದ ಶೇಂಗಾ ತಿನ್ನುವುದರಿಂದಲೂ ಹಲವು ಆರೋಗ್ಯಕರ ಲಾಭಗಳಿದೆ. ಹಾಗಾದ್ರೆ ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.

1.. ಮಧುಮೇಹದಿಂದ ದೂರವಿರಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ಸೇವಿಸಿ. ಇದರಿಂದ ಬ್ಲಡ್ ಶುಗರ್ ಲೆವಲ್ ಕಂಟ್ರೋಲಿನಲ್ಲಿರುತ್ತದೆ.

2..ನೆನೆಸಿಟ್ಟ ಶೇಂಗಾ ಸೇವನೆಯಿಂದ ಸಂಧಿವಾತದ ಸಮಸ್ಯೆ ದೂರವಾಗುತ್ತದೆ. ಅಲ್ಲದೇ, ಮೂಳೆ ಗಟ್ಟಿಯಾಗಿರುತ್ತದೆ.

3..ವಿದ್ಯಾರ್ಥಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.

4..ಬಡವರ ಬಾದಾಮಿ ಅಂತಾನೇ ಪ್ರಚಲಿತವಾಗಿರೋ ಶೇಂಗಾ ಬೀಜದ ಸೇವನೆ ಆರೋಗ್ಯಕ್ಕೆ ತುಂಬಾನೇ ಲಾಭಕಾರಿ, ಅದರಲ್ಲೂ ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ತಿನ್ನುವುದು ಉತ್ತಮ

5..ನೆನೆಸಿಟ್ಟ ಶೇಂಗಾ ಸೇವನೆಯಿಂದ ರಕ್ತ ಸಂಚಲನೆ ಸರಾಗವಾಗಲಿದ್ದು, ಹೃದಯ ಸಂಬಂಧಿ ಖಾಯಿಲೆಯಿಂದ ದೂರವಿರಿಸುತ್ತದೆ.

6..ಪಚನಕ್ರಿಯೆ ಸರಿಯಾಗಿರಬೇಕು, ಹೊಟ್ಟೆಗೆ ಸಂಬಂಧಿಸಿದ ರೋಗಗಳು ಬಾಧಿಸಬಾರದು ಎಂದಾದರೆ ನೆನೆಸಿಟ್ಟ ಶೇಂಗಾ ಕಾಳು ಸೇವಿಸಿ.

7.. ಚಳಿಗಾಲದಲ್ಲಿ ನೆನೆಸಿಟ್ಟ ಶೇಂಗಾ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಉಷ್ಣತೆ ದೊರಕುವುದಲ್ಲದೇ, ಶಕ್ತಿಯುತವಾಗಿರಲು ಸಹಾಯವಾಗುತ್ತದೆ.

8.. ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ಬಿಪಿ ಕಂಟ್ರೋಲಿನಲ್ಲಿರುತ್ತದೆ

9..ಜಿಮ್‌ಗೆ ಹೋಗುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ಬೀಜದ ಸೇವನೆ ಮಾಡಬೇಕು. ಇದರಲ್ಲಿ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಇರುವುದರಿಂದ ಬಾಡಿ ಬಿಲ್ಡ್ ಮಾಡುವಲ್ಲಿ ಸಹಾಯವಾಗುತ್ತದೆ.

10..ಶೇಂಗಾ ಕಾಳಿನಲ್ಲಿ ಒಮೇಗಾ-3 ಇರುವುದರಿಂದ ಇದರ ಸೇವನೆ ತ್ವಚೆಯ ಆರೋಗ್ಯ ಕಾಪಾಡುವುದಕ್ಕೆ ಸಹಕಾರಿಯಾಗಿದೆ.

11..ನೆನಪಿರಲಿ, ಪ್ರತಿನಿತ್ಯ 15ರಿಂದ 20 ನೆನೆಸಿಟ್ಟ ಶೇಂಗಾ ಬೀಜಗಳನ್ನ ಸೇವಿಸಿ. ಅದಕ್ಕೂ ಹೆಚ್ಚು ಸೇವಿಸದಿರಿ.

Leave a Comment