ಕಪ್ಪು ಅಕ್ಕಿ ಸಕ್ಕರೆ ಕಾಯಿಲೆ ಇದ್ದವರಿಗೆ ಏನು ಗೊತ್ತಿಲ್ಲ!

ಅಕ್ಕಿಯಲ್ಲಿ ಹಲವು ವಿಧಗಳು ಇವೇ. ಬಿಳಿ ಅಕ್ಕಿ ಕಂದು ಬಣ್ಣದ ಅಕ್ಕಿ ಕೆಂಪು ಅಕ್ಕಿ ಕಪ್ಪು ಅಕ್ಕಿ ಇತ್ಯಾದಿ.. ಎಲ್ಲ ರೀತಿಯಲ್ಲಿಯೂ ತನ್ನದೇ ಆದ ವಿಶಿಷ್ಟ ಪೋಷಕಾಂಶಗಳನ್ನು ಒಳಗೊಂಡಿದೆ.ಕಪ್ಪು ಅಕ್ಕಿಯಲ್ಲಿ ಆರೋಗ್ಯಕ್ಕೆ ಬೇಕಾದ ಅನೇಕ ಗುಣಗಳು ಇವೇ.ಕಪ್ಪು ಅಕ್ಕಿಯಲ್ಲಿ ಹೇರಳವಾದ ಪ್ರೊಟೀನ್ ಕಬ್ಬಿಣಂಶ ಅಡಕವಾಗಿದೆ.ಅಷ್ಟೇ ಅಲ್ಲದೆ ಕಾರ್ಬೋ ಹೈಡ್ರಾಟ್ ಫೈಬರ್ ಅಲ್ಪ ಪ್ರಮಾಣದ ಕೊಬ್ಬಿನಂಶ ಕೂಡ ಇದೆ.ಹೀಗಾಗಿ ಕಪ್ಪು ಅಕ್ಕಿಯನ್ನು ಅನ್ನ ಮಾಡಿ ಸೇವಿಸಿದರೆ ಪರಿಪೂರ್ಣ ಊಟ ಆಗುತ್ತದೆ.ಚೀನಾದಲ್ಲಿ ಈ ಅಕ್ಕಿ ಯನ್ನು ಬೆಳೆಯಲಾಯಿತು.

ಮಧುಮೇಹಿಗಳಿಗೆ ಆಹಾರದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೆಚ್ಚು ಸಕ್ಕರೆ ಅಂಶವಿರುವ ಆಹಾರವನ್ನು ಸೇವನೆ ಮಾಡಬಾರದು. ಇನ್ನು ಕಪ್ಪು ಅಕ್ಕಿಯಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುತ್ತದೆ.ಆಂಟಿ ಆಕ್ಸಿಡೆಂಟ್ ಗಳನ್ನು ಈ ಕಪ್ಪು ಅಕ್ಕಿ ಹೊಂದಿರುತ್ತದೆ.ಹೀಗಾಗಿ ಮದುಮೆಹಿಗಳು ಭಯವಿಲ್ಲದೆ ಈ ಕಪ್ಪು ಅಕ್ಕಿಯನ್ನು ಸೇವಿಸಬಹುದಾಗಿದೆ.

ಕರುಳಿನ ಸಮಸ್ಯೆ ಇದ್ದವರು ಕೂಡ ಕಪ್ಪು ಅಕ್ಕಿ ಯನ್ನು ಸೇವನೆ ಮಾಡಬಹುದು. ಇನ್ನು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೇ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕಪ್ಪು ಅಕ್ಕಿಯ ಅನ್ನ ಸಹಾಯ ಮಾಡುತ್ತದೆ.

ಕಪ್ಪು ಅಕ್ಕಿಯ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡವು ನಿಯಂತ್ರಣಕ್ಕೆ ಬರುತ್ತದೆ.ಹೀಗಾಗಿ ಹೃದಯವನ್ನು ಅರೋಗ್ಯಕರವಾಗಿಸಿಕೊಳ್ಳಲು ಕಪ್ಪು ಅಕ್ಕಿಯ ಬಳಕೆ ಒಳ್ಳೆಯದು. ಅಷ್ಟೇ ಅಲ್ಲದೆ ಕಪ್ಪು ಅಕ್ಕಿ ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಮತ್ತು ಕಣ್ಣಿನ ಆರೋಗ್ಯಕ್ಕೆ ಬೇಕಾಗಿರುವ ಕೆರಟಿನ್ ಅಂಶವನ್ನು ಒಳಗೊಂಡಿದೆ. ಕಪ್ಪು ಅಕ್ಕಿಯ ಬಳಕೆಯಿಂದ ಕಣ್ಣಿನ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

Leave a Comment