PSI Recruitment scam : ಪಿಎಸ್ಐ ನೇಮಕಾತಿ ಅಕ್ರಮ : ಸ್ಟ್ರಾಂಗ್ ರೂಮ್ ಗೆ ನುಗ್ಗಿ 22 OMR ಶೀಟ್ ತಿದ್ದಿದ್ದ ಪೊಲೀಸರು

ಬೆಂಗಳೂರು : ರಾಷ್ಟ್ರಮಟ್ಟದಲ್ಲಿ  ಸಾಕಷ್ಟು ಸದ್ದು ಮಾಡಿದ್ದ ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮ ಸಂಬಂಧ‌ ಪರೀಕ್ಷೆ ಮುಗಿದ ನಾಲ್ಕು ದಿನದ ಅಂತರದಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿ ನಾಲ್ವರು  ಸ್ಟ್ರಾಂಗ್ ರೂಮ್‌ ತೆರಳಿ 22 ಎಂಎಂಆರ್ ಶೀಟ್ ತಿದ್ದುಪಡಿ ಮಾಡಿದ್ದಾರೆ ಎಂದು ಸಿಐಡಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಬಂಧಿತ ಆರೋಪಿಗಳು ಮೂರು ಬಾರಿ ಪ್ರತ್ಯೇಕ ದಿನಗಳಲ್ಲಿ ಹೋಗಿ ಓಎಂಆರ್ ಶೀಟ್ ತಿದ್ದಿದ್ದಾರೆ.‌ ಕಳೆದ ವರ್ಷ ಅಕ್ಟೋಬರ್ 7, 8 ಹಾಗೂ 16ರಂದು ಬೆಳಗ್ಗೆ 6ರಿಂದ 9.30 ವರೆಗೆ ಉತ್ತರಪತ್ರಿಕೆಗಳ‌ ಟ್ಯಾಂಪರಿಂಗ್ ನಡೆದಿದೆ.‌545 ಪಿಎಸ್ಐ ನೇಮಕಾತಿಗಾಗಿ ಕಳೆದ ವರ್ಷ ಅಕ್ಟೋಬರ್ 3ರಂದು ಪೊಲೀಸ್ ಇಲಾಖೆಯು ಲಿಖಿತ ಪರೀಕ್ಷೆ ನಡೆಸಿತ್ತು.‌ ಪರೀಕ್ಷೆ ಮುಗಿದ ಉತ್ತರಪತ್ರಿಕೆಗಳನ್ನು ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿಯ ಸ್ಟ್ರಾಂಗ್ ರೂಮ್ ನಲ್ಲಿ‌ ಭದ್ರವಾಗಿ ಇಡಲಾಗಿತ್ತು. ಇದರ ಉಸ್ತುವಾರಿಯನ್ನ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪೌಲ್  ವಹಿಸಿಕೊಂಡಿದ್ದರಿಂದ. ಸ್ಟ್ರಾಂಗ್ ರೂಮ್ ಕೀ ಅವರ ಅಧೀನದಲ್ಲಿತ್ತು.

ಇದನ್ನೂ ಓದಿ : Anand Singh : ಕೊನೆಗೂ ಜಿಲ್ಲಾ ಉಸ್ತುವಾರಿ ಸ್ಥಾನ ಗಿಟ್ಟಿಸಿಕೊಂಡ ಸಚಿವ ಆನಂದ್ ಸಿಂಗ್!

ಆರೋಪಿಗಳು ಪ್ಲಾನ್‌ನಂತೆ  ಅ.5ರಂದು ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಪೌಲ್ ಅವರ ಕಚೇರಿಯ ಕೊಠಡಿಗೆ ಹೋಗಿ ಕಪಾಟಿನಲ್ಲಿದ್ದ ಸ್ಟ್ರಾಂಗ್ ರೂಮ್‌ ಕೀ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 6 ಮಹಾಲಯ ಅಮಾವಾಸ್ಯೆ ಹಿನ್ನೆಲೆ ರಜೆ ಇದ್ದಿದ್ದರಿಂದ  ಅ.7ರಂದು ಮುಂಜಾನೆ 6.30 ಕ್ಕೆ ಡಿವೈಎಸ್ಪಿ ಶಾಂತಕುಮಾರ್, ಎಫ್ ಡಿಎಗಳಾದ ಹರ್ಷ, ಶ್ರೀನಿವಾಸ್ ಹಾಗೂ ಕಾನ್ ಸ್ಟೇಬಲ್ ಶ್ರೀಧರ್ ಸಿಐಡಿ ಕಚೇರಿಗೆ ಹೋಗಿದ್ದರು. ಕೃತ್ಯದ ಬಗ್ಗೆ ತಿಳಿಯದಂತೆ ಮೊದಲಿಗೆ ಸ್ಟ್ರಾಂಗ್ ರೂಂ ಸಿಸಿಟಿವಿ ಕ್ಯಾಮರಾ ಆಫ್ ಮಾಡಿದ್ದಾರೆ. ಶ್ರೀನಿವಾಸ್ ಹಾಗೂ ಶ್ರೀಧರ್ ಒಳಹೋದರೆ ಸ್ಟ್ರಾಂಗ್ ರೂಮ್ ಬಾಗಿಲು ಬಳಿ ಹರ್ಷ ಕಾವಲು ಕಾದಿದ್ದ. ಮುಂಜಾನೆ 6.30ರಿಂದ 9.30ರವರೆಗೆ ಹಣ ನೀಡಿದ್ದ ಆಭ್ಯರ್ಥಿಗಳ ಒಎಂಅರ್ ಶೀಟ್ ತಿದ್ದಿದ್ದಾರೆ. ಅದೇ ರೀತಿ ಅ.8 ಹಾಗೂ 16 ರಂದು ಇದೇ ಅವಧಿಯಲ್ಲಿ ಉತ್ತರಪತ್ರಿಕೆಗಳ ಟ್ಯಾಂಪರಿಂಗ್ ಮಾಡಿದ್ದಾರೆ. ನಗರ ವ್ಯಾಪ್ತಿಯ 7 ಪರೀಕ್ಷಾ ಕೇಂದ್ರಗಳಲ್ಲಿ‌‌‌ ಪರೀಕ್ಷೆ ಬರೆದಿದ್ದ 22 ಪಿಎಸ್ಐ ಆಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದುಪಡಿ ಮಾಡಿರುವುದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವರದಿಯಲ್ಲಿ ರುಜುವಾತಾಗಿದೆ ಎಂದು‌ ಆರೋಪಪಟ್ಟಿಯಲ್ಲಿ ಸಿಐಡಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಇನ್ನೂ ಪಿಎಸ್ಐ ಅಕ್ರಮ ಜಾಲದಲ್ಲಿ ಇದುವರೆಗೆ 8 ಮಂದಿ ಪೊಲೀಸರನ್ನ ಬಂಧಿಸಿ ಅಮಾನತು ಮಾಡಲಾಗಿದೆ. ಡಿವೈಎಸ್ಪಿ ಶಾಂತಕುಮಾರ್, ಸಬ್ ಇನ್ಸ್‌ಪೆಕ್ಟರ್ ಹರೀಶ್, ಕೆಎಸ್ಆರ್ ಪಿ  ಇನ್ಸ್‌ಪೆಕ್ಟರ್ ಮಧು, ಗುರು ಬಸವರಾಜ್, ಕಾನ್ ಸ್ಟೇಬಲ್ ಶ್ರೀಧರ್ ಹಾಗೂ ಲೊಕೇಶಪ್ಪ, ಶ್ರೀನಿವಾಸ್ ಹಾಗೂ ಎಫ್ ಡಿಎ ಹರ್ಷ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಸಿಐಡಿ ಪತ್ರ ಬರೆದಿದೆ.

ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ್ದು, 3065 ಪುಟಗಳ ಚಾರ್ಜ್ ಶೀಟ್ ನಲ್ಲಿ 202 ಸಾಕ್ಷಿಗಳು ಹಾಗೂ 330 ದಾಖಲೆ, 30 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಇದನ್ನೂ ಓದಿ : HD Kumaraswamy : ‘ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಬಹುಮತ’

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment