Puneeth Rajkumar Rakhi: ರಕ್ಷಾ ಬಂಧನಕ್ಕೆ ಮಾರುಕಟ್ಟೆಗೆ ಬಂತು “ಅಪ್ಪು ರಾಖಿ”

Appu Rakhi: ಸದ್ಯ ಎಲ್ಲೆಲ್ಲೂ ರಕ್ಷಾ ಬಂಧನದ ತಯಾರಿ ಜೋರಾಗಿದೆ. ಮಾರುಕಟ್ಟೆಯಲ್ಲಿ ತರಹೇವಾರಿ ರಾಖಿಗಳು ಬಂದಿವೆ. ಸಹೋದರ-ಸಹೋದರಿಯರ ಬಾಂಧವ್ಯದ ಸಂಕೇತವಾಗಿರುವ ರಕ್ಷಾ ಬಂಧನದ ಪ್ರಯುಕ್ತ ರಾಜ್ಯದ ಅನೇಕ ಕಡೆಗಳಲ್ಲಿ ಪುನೀತ್ ರಾಜ್​ಕುಮಾರ್​ ಫೋಟೋ ಇರುವ ರಾಖಿಗಳು ಮಾರುಕಟ್ಟೆಗೆ ಬಂದಿವೆ. ಅಪ್ಪು ಮೇಲಿನ ಅಭಿಮಾನದಿಂದ ಜನ ಈ ರಾಖಿಗಳನ್ನು ಕೊಳ್ಳುತ್ತಿದ್ದಾರೆ. ನಟ ಪುನೀತ್​ ರಾಜ್​ಕುಮಾರ್ ಅವರು ಇಹಲೋಕ ತ್ಯಜಿಸಿ ಹಲವು ತಿಂಗಳುಗಳು ಕಳೆದರೂ ಅವರು ಜನಮಾನಸದಲ್ಲಿ ಅಜಾರಾಮರರಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಉದಾಹರಣೆಗಳು ಸಿಗುತ್ತಿವೆ. ಪ್ರತಿ ವಿಶೇಷ ಸಂದರ್ಭದಲ್ಲೂ, ಹಬ್ಬ-ಹರಿದಿನಗಳಲ್ಲೂ ಪುನೀತ್‌ ಅವರ ಸ್ಮರಣೆ ಇದ್ದೇಇರುತ್ತದೆ. ಇದೀಗ ರಕ್ಷಾ ಬಂಧನದ ಪ್ರಯುಕ್ತ ಮಾರುಕಟ್ಟೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಫೋಟೋ ಇರುವ ಅಪ್ಪು ರಾಖಿ ಬಂದಿದ್ದು, ಜನರ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಆಗಸ್ಟ್​ 11ರಂದು ಅಂದರೆ ನಾಳೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಬಗೆಬಗೆಯ ರಾಖಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಸಿಂಪಲ್ ಹಾಗೂ ಬಜೆಟ್‌ ಫ್ರೆಂಡ್ಲಿ​ ರಾಖಿಯಿಂದ ದುಬಾರಿ ಬೆಲೆಯ ರಾಖಿಗಳು, ಹಲವು ಡಿಸೈನ್​ಗಳ ರಾಖಿಗಳನ್ನು ನಾವು ಮಾರ್ಕೆಟ್‌ನಲ್ಲಿ ಕಾಣಬಹುದು. 

ಇದನ್ನೂ ಓದಿ : Vastu tips : ಬೆಲ್ಲದಲ್ಲಿ ಅಡಗಿದೆ ನಿಮ್ಮ ಆರ್ಥಿಕ ಪ್ರಗತಿಯ ಗುಟ್ಟು! ಆರೋಗ್ಯ ಮಾತ್ರವಲ್ಲ ಅದೃಷ್ಟಕ್ಕೂ ಬೇಕು ಬೆಲ್ಲ

ಇದೀಗ ಕೊಪ್ಪಳ ಸೇರಿದಂತೆ ಕರ್ನಾಟಕದ ಹಲವು ಕಡೆಗಳಲ್ಲಿಅಪ್ಪು ಅವರ​ ಫೋಟೋ ಇರುವ ರಾಖಿಗಳನ್ನು ತಯಾರಿಸಲಾಗಿದ್ದು, ಆ ಮೂಲಕ ರಕ್ಷಾ ಬಂಧನಕ್ಕೆ ವಿಶೇಷ ಕಳೆ ಬಂದತಾಗಿದೆ. ಕೇವಲ ಸಿನಿಮಾ, ನಟನೆ ಮಾತ್ರವಲ್ಲದೇ ತಮ್ಮ ನಗು, ವ್ಯಕ್ತಿತ್ವ, ಸಮಾಜಮುಖಿ ಕಾರ್ಯಗಳಿಂದ ಪುನೀತ್​ ರಾಜ್‌ಕುಮಾರ್‌ ಅವರು ಜನಮನ ಗೆದ್ದಿದ್ದಾರೆ. ಇದೇ ಕಾರಣಕ್ಕೆ ಇಂದಿಗೂ ಅವರನ್ನು ದ್ವೇಷಿಸುವವರಿಲ್ಲ. ಪ್ರತಿ ಮನೆಯ ಮಗನಂತಿದ್ದ ಅಪ್ಪು ಅಗಲಿಕೆಗೆ ಇಡೀ ಕರುನಾಡೇ ಕಣ್ಣೀರಿಟ್ಟಿತ್ತು. ಈಗಲೂ ಅದೊಂದು ಕರಾಳ ದಿನದಂತೆಯೇ ಎಲ್ಲರೀಗೂ ಭಾಸವಾಗುತ್ತಿದೆ. ನಾಡು-ನುಡಿಯ ಮೇಲೆ ಅಪಾರ ಗೌರವ ಇಟ್ಟಿದ್ದ ಪುನೀತ್​ ರಾಜ್‌ಕುಮಾರ್‌ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.

 

 

ಪುನೀತ್‌ ಅವರ ಮಾದರಿ ಕೆಲಸಗಳನ್ನು ಪರಿಗಣಿಸಿ, ಮರಣೋತ್ತರವಾಗಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿತು. ನವೆಂಬರ್​ 1ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಇನ್ನೂ ಅವರ ‘ಗಂಧದ ಗುಡಿ’ ಸಾಕ್ಷ್ಯಚಿತ್ರದಲ್ಲಿ ಕರುನಾಡಿನ ಅರಣ್ಯ ಮತ್ತು ವನ್ಯ ಜೀವಿಗಳ ಬಗ್ಗೆ ಬಿಚ್ಚಿಡಲಾಗಿದೆ. ಈ ಡಾಕ್ಯುಮೆಂಟರಿ ಮೂವಿ ಅಕ್ಟೋಬರ್​ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. 

ಇದನ್ನೂ ಓದಿ : Vastu Tips : ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಹಾಕಿದ್ರೆ ನಿಮ್ಮ ಕೆಟ್ಟ ಸಮಯ ಶುರುವಾದಂತೆ

ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಅಪರಾಹ್ನ ಅಥವಾ ಪ್ರದೋಷ (ಮುಸ್ಸಂಜೆ ) ಕಾಲದಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಇದೊಂದು ಮಹತ್ವ ಪೂರ್ಣ ಆಚರಣೆಯಾಗಿದ್ದು, ಅಕ್ಕ-ತಂಗಿಯರು ಅಣ್ಣ-ತಮ್ಮಂದಿರಿಗೆ ರಾಖಿಯನ್ನು ಕಟ್ಟುವ ಸಂಪ್ರದಾಯವಿದೆ. ರಕ್ಷಾ ಬಂಧನವು ಸಹೋದರ ಸಹೋದರಿಯರ ಹಬ್ಬವಾಗಿದ್ದು, ಈ ದಿನ ಸಹೋದರಿ ತನ್ನ ಸಹೋದರನ ಕೈ ಮಣಿಕಟ್ಟಿಗೆ ರಾಖಿಯನ್ನು ಕಟ್ಟುತ್ತಾಳೆ. ರಕ್ಷಾ ಬಂಧನ ಹಬ್ಬದ ಸಂಭ್ರಮಕ್ಕೆ ಈ ಬಾರಿ ಅಪ್ಪು ರಾಖಿ ಮೆರಗು ತಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment