ಕರ್ಪೂರವನ್ನು ಬಕೆಟ್ ನೀರಿನಲ್ಲಿ ಹಾಕಿ ಅಮೇಲೆ ನೋಡಿ ಮ್ಯಾಜಿಕ್!

ಕರ್ಪೂರವನ್ನು ನಾವು ಪೂಜೆಗೆ ಬಳಸುತ್ತೇವೆ. ಅದರೆ ಪೂಜೆಗೆ ಅಷ್ಟೇ ಅಲ್ಲ ಇದು ಇನ್ನು ಹಲವಾರು ರೀತಿಯಲ್ಲಿ ಇದರ ಬಳಕೆಯನ್ನು ಮಾಡಬಹುದು. ಇನ್ನು ನೆಲ ವರೆಸುವುದು ಎಲ್ಲರಿಗೂ ದೊಡ್ಡ ಕೆಲಸ ಎಂದೂ ಹೇಳಬಹುದು. ಇನ್ನು ನೆಲದಲ್ಲಿ ದೂಳು ಕೊಳೆ ಜಾಸ್ತಿನೇ ಇರುತ್ತದೆ. ಎಷ್ಟೇ ವರೆಸಿ ಎಷ್ಟೇ ಕ್ಲೀನ್ ಆಗಿಟ್ಟರು ಸಾಲುವುದಿಲ್ಲ. ನಿಮಗೂ ಕೂಡ ಈ ರಿತು ಸಮಸ್ಸೆ ಇದ್ದರೆ ಈ ರೀತಿ ನೆಲವನ್ನು ವರೆಸಿ. ನೆಲ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ. ನೆಲದಲ್ಲಿ ಒಳ್ಳೆಯ ಶೈನ್ ಇರುತ್ತದೆ. ಹಾಗೇನೆ ಮನೆಯಲ್ಲಿ ಒಳ್ಳೆಯ ಸುವಾಸನೆ ಇರುತ್ತದೆ.

ಮೊದಲು ಮನೆ ವರೆಸುವುದಕ್ಕೆ ಎಷ್ಟು ನೀರು ಬೇಕೋ ಅಷ್ಟು ನೀರು ತೆಗೆದುಕೊಳ್ಳಿ. ಇದಕ್ಕೆ ಸ್ವಲ್ಪ ಅರಿಶಿನವನ್ನು ಬೇರೆಸಿ ಮತ್ತು ಇದಕ್ಕೆ ಒಂದು ಚಮಚ ಉಪ್ಪು, ಒಂದು ಚಮಚ ಅಡುಗೆ ಸೋಡ, ಸ್ವಲ್ಪ ಕಂಫರ್ಟ್, ಅರ್ಧ ಚಮಚ ವಿಮ್ ಜೆಲ್ , ಎರಡು ಕರ್ಪೂರವನ್ನು ಹಾಕಿ ಮಿಕ್ಸ್ ಮಾಡಿ. ಇದರಿಂದ ನೆಲವನ್ನು ವರೆಸಬೇಕು. ಇದರಿಂದ ನೆಲ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ ಹಾಗು ನೆಲದಲ್ಲಿ ಯಾವುದೇ ರೀತಿಯ ಬಾಕ್ಟೆರಿಯಗಳು ಆಗಲಿ, ಇರುವೆ, ನೋಣದ ಕಾಟ ಇರುವುದಿಲ್ಲ.

ಇದರಿಂದ ಕಿಚನ್ ಅನ್ನು ಕ್ಲೀನ್ ಮಾಡಿದರೆ ಎಣ್ಣೆ ಎಲ್ಲಾ ಇದ್ದರೆ ಕ್ಲೀನ್ ಆಗುತ್ತದೆ. ಇನ್ನು ಈ ನೀರನ್ನು ಬಾತ್ ರೂಮ್ ಗೆ ಹಾಕಿ ಬಾತ್ ರೂಮ್ ಕೂಡ ತುಂಬಾ ನಿಟ್ ಆಗಿ ಸ್ವಚ್ಛವಾಗಿ ಕಾಣಿಸುತ್ತದೆ. ಬಾತ್ ರೂಮ್ ನಲ್ಲಿ ಒಳ್ಳೆಯ ಸ್ಮೆಲ್ ಕೂಡ ಬರುತ್ತದೆ.

ಇನ್ನು ಮನೆಯಲ್ಲಿ ಸೊಳ್ಳೆ ಸಮಸ್ಸೆ ಇದ್ದರೆ ಹಲವಾರು ರೀತಿಯ ರೋಗಗಳು ಕಾಡಲು ಶುರು ಆಗುತ್ತದೆ. ಇದಕ್ಕೆ ಕೆಮಿಕಲ್ ಬಳಸಿದರೆ ಅರೋಗ್ಯಕ್ಕೆ ತೊಂದರೆ ಉಂಟು ಆಗುತ್ತದೆ. ಹಾಗಾಗಿ ಇದಕ್ಕೆ ಮೊದಲು ಚಿಪ್ಪು ತೆಗೆದುಕೊಂಡು ಇದಕ್ಕೆ ಬೆಳ್ಳುಳ್ಳಿ ಸಿಪ್ಪೆ ಅಥವಾ ಈರುಳ್ಳಿ ಸಿಪ್ಪೆ ಹಾಕಿ ಮತ್ತು ತೆಂಗಿನಕಾಯಿ ನಾರು ಹಾಕಿ ಬೆಂಕಿ ಹಚ್ಚಬೇಕು. ಇದರಿಂದ ಬರುವ ಹೊಗೆಯನ್ನು ಇಡೀ ಮನೆಗೆ ಇಡಿಯಬೇಕು. ಇದರಿಂದ ಹೊಗೆಯ ವಾಸನೆಗೆ ಸೊಳ್ಳೆಗಳು ಫುಲ್ ಹೋಗುತ್ತದೆ.

Leave a Comment