ನಮ್ಮ ಜಾತಕದಲ್ಲಿ ಗುರುಬಲ ಚೆನ್ನಾಗಿ ಇದ್ದು ಅಂದರೆ ಮನೆಗೆ ಲಕ್ಷ್ಮಿ ಪ್ರವೇಶ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಅದರೆ ನಮ್ಮ ಜಾತಕದಲ್ಲಿ ಗುರುಬಲ ಎನ್ನುವುದು ಜಾತಕ ಹಾಗು ಗ್ರಹಗಳ ಮೇಲೆ ಡಿಪೆಂಡ್ ಆಗಿರುತ್ತದೆ. ಈ ಕಾರಣದಿಂದ ಜೀವನಪೂರ್ತಿ ಗುರುಬಲ ಎನ್ನುವುದು ಇರುವುದಿಲ್ಲ. ಅದರೆ ಗುರುವಿನ ಆಶೀರ್ವಾದ ಇದ್ದರೆ ಗುರುಬಲ ಇದ್ದಷ್ಟೇ ಬಲ ಹೇಳಲಾಗುತ್ತದೆ. ಇನ್ನು ಗುರುವಿನ ಆಶೀರ್ವಾದ ನಿಮ್ಮ ಮೇಲೆ ಇರಬೇಕು ಎಂದರೆ ಗುರುವಾರದ ದಿನ ಒಳ್ಳೆಯ ಉಪಾಯಗಳನ್ನು ಮಾಡಬೇಕು ಹಾಗು ಗುರುವನ್ನು ಒಲಿಸಿಕೊಳ್ಳಬೇಕು.
ಇನ್ನು ಮನೆಯಲ್ಲಿ ಪ್ರತಿದಿನ ಬಳಸುವ ಪೊರಕೆ ಇದು ಒಂದು ಲಕ್ಷ್ಮಿಯ ಒಂದು ಸ್ವರೂಪ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಪೊರಕೆಗೆ ನಾವು ಎಷ್ಟು ಗೌರವ ಕೊಡುತ್ತೀವೋ ಅಷ್ಟು ಲಕ್ಷ್ಮಿ ನಿಮ್ಮ ಮನೆಗೆ ಒಲಿಯುತ್ತಾಳೆ. ಇನ್ನು ಈ ಒಂದು ಉಪಾಯವನ್ನು ಗುರುವಾರದ ದಿನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಲಾಭ ಸಿಗುತ್ತದೆ. ವಿಶೇಷವಾಗಿ ಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಳೆ.
ಇನ್ನು ಗುರುವಾರ ರಾತ್ರಿ 10:00 ಗಂಟೆ ಮೇಲೆ ಮಾಡಬೇಕು. ಪೊರಕೆಯನ್ನು ಮಲಗಿಸಿ ಒಂದು ರೂಪಾಯಿ ನಾಣ್ಯವನ್ನು ಇಡಬೇಕು. ಒಂದು ರೂಪಾಯಿ ನಾಣ್ಯ ಇಟ್ಟು ಲಕ್ಷ್ಮಿಯನ್ನು ಒಂದು ಬಾರಿ ನೆನೆಯಬೇಕು. ಈ ರೀತಿ ಲಕ್ಷ್ಮಿಯನ್ನು ನೆನೆದ ತಕ್ಷಣ ನೀವು ಒಂದು ರೂಪಾಯಿ ನಾಣ್ಯವನ್ನು ಅಲ್ಲೆ ಬಿಡಬೇಕು. ಈ ರೀತಿ ಮಾಡಿದರೆ ಪೊರಕೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಆ ನಾಣ್ಯ ಎಳೆದುಕೊಳ್ಳುತ್ತದೆ. ನಂತರ ಮಾರನೇ ದಿನ ಒಂದು ರೂಪಾಯಿ ನಾಣ್ಯವನ್ನು ಲಕ್ಷ್ಮಿಯ ಮುಂದೆ ಇಡಬೇಕು. ಈ ರೀತಿ ಇಟ್ಟಾಗ ನಕಾರಾತ್ಮಕ ಶಕ್ತಿಯನ್ನು ಲಕ್ಷ್ಮಿ ನಾಶ ಮಾಡುತ್ತಳೆ. ನಂತರ ಈ ರೂಪಾಯಿಯನ್ನು ಹಣ ಇಡುವ ಜಾಗದಲ್ಲಿ ಇಡಬೇಕು. ಇದರಿಂದ ಆರ್ಥಿಕ ಪರಿಸ್ಥಿತಿ ವೃದ್ಧಿಯಾಗುತ್ತದೆ.