Rahu and Mangal Yuti Yog: ಆಗಸ್ಟ್ 10 ರಿಂದ ಈ ರಾಶಿಗಳ ಜನರು ಅಶುಭ ಯೋಗದಿಂದ ಮುಕ್ತಿ ಪಡೆಯಲಿದ್ದಾರೆ

Mangal-Rahu Yuti: ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಪರಿವರ್ತನೆಯಿಂದ ಇತರ ರಾಶಿಗಳ ಜನರ ಮೇಲೆಯೂ ಕೂಡ ಪ್ರಭಾವ ಬೀರುತ್ತದೆ. ಇನ್ನೊಂದೆಡೆ ಒಂದು ಗ್ರಹ ಮತ್ತೊಂದು ಗ್ರಹದೊಂದಿಗೆ ಸೇರಿಕೊಳ್ಳುವುದನ್ನು ಸಂಯೋಜನೆ ಎಂದು ಹೇಳಲಾಗುತ್ತದೆ. ಮಂಗಳ ಗ್ರಹ ಪ್ರಸ್ತುತ ತನ್ನದೇ ಆದ ಮೇಷ ರಾಶಿಯಲ್ಲಿ ವಿರಾಜಮಾನವಾಗಿದೆ ಹಾಗೂ ಆಗಸ್ಟ್ 10ರಂದು ಅದು ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಜುಲೈ 27ರಂದು ಮಂಗಳ ಗ್ರಹ ಮೇಷ ರಾಶಿಗೆ ಪ್ರವೇಶಿಸುತ್ತಿದ್ದಂತೆ ಅಂಗಾರಕ ಯೋಗ ನಿರ್ಮಾಣಗೊಂಡಿತ್ತು. ಮೇಷ ರಾಶಿಯಲ್ಲಿ 37 ವರ್ಷಗಳ ಬಳಿಕ ಈ ಯೋಗ ನಿರ್ಮಾಣಗೊಂಡಿತ್ತು ಮತ್ತು ಆಗಸ್ಟ್ 10 ರಂದು ಮುಕ್ತಾಯವಾಗಲಿದೆ. ಇದರಿಂದ ಮೇಷ ರಾಶಿಯ ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.

ಈ ಗ್ರಹಗಳ ಸಂಯೋಜನೆಯಿಂದ ಅಂಗಾರಕ ಯೋಗ ನಿರ್ಮಾಣ
ಮೇಷರಾಶಿಗೆ ಮಂಗಳನ ಪ್ರವೇಶದಿಂದ ಅಂಗಾರಕ ಯೋಗ ನಿರ್ಮಾಣಗೊಂಡಿತ್ತು. ಸಾಮಾನ್ಯವಾಗಿ ಇದು ಅಶುಭ ಯೋಗಗಳ ಪಟ್ಟಿಗೆ ಸೇರುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಪಾಪಿ ಗ್ರಹ ರಾಹು ಹಾಗೂ ಮಂಗಳ ಗ್ರಹವನ್ನು ಸಾಮಾನ್ಯವಾಗಿ ಉಗ್ರಗ್ರಹಗಳೆಂದು ಭಾವಿಸಲಾಗುತ್ತದೆ. ಈ ಎರಡೂ ಗ್ರಹಗಳ ಸಂಯೋಜನೆಯಿಂದಲೇ ಅಂಗಾರಕ ಯೋಗ ನಿರ್ಮಾಣಗೊಳ್ಳುತ್ತದೆ. ಈ ಅಂಗಾರಕ ಯೋಗ ಕೆಲ ರಾಶಿಗಳ ಜನರಿಗೆ ಶುಭ ಸಾಬೀತಾದರೆ, ಕೆಲ ರಾಶಿಗಳ ಪಾಲಿಗೆ ಅಶುಭ ಫಲದಾಯಿ ಸಾಬೀತಾಗುತ್ತದೆ. 

ಈ ರಾಶಿಗಳ ಜನರಿಗೆ ಸಮಯ ಕಷ್ಟಕರವಾಗಿರುತ್ತದೆ
ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹ ತನ್ನ ಸ್ವಂತ ರಾಶಿಯಲ್ಲಿ ಇರುವಾಗ ಅದು ಅತ್ಯಂತ ಶಕ್ತಿಶಾಲಿಯಾಗಿರುತ್ತದೆ ಎಂದು ಭಾವಿಸಲಾಗುತ್ತದೆ. ಪ್ರಸ್ತುತ ಮಂಗಳ ಗ್ರಹ ತನ್ನ ಸ್ವಂತ ರಾಶಿಯಾಗಿರುವ ಮೇಷ ರಾಶಿಯಲ್ಲಿದೆ. ಹೀಗಾಗಿ ಮಂಗಳ ತನ್ನ ಅತ್ಯಧಿಕ ಶಕ್ತಿಯ ಪ್ರಯೋಗ ನಡೆಸುತ್ತಿದೆ. ಹೀಗಿರುವಾಗ ಮೇಷರಾಶಿಯಲ್ಲಿ ನಿರ್ಮಾಣಗೊಂಡ ಅಂಗಾರಕ ಯೋಗ ವೃಷಭ, ತುಲಾ ಹಾಗೂ ಸಿಂಹ ರಾಶಿಗಳ ಜಾತಕದವರಿಗೆ ಅತ್ಯಂತ ಕಷ್ಟಗಳನ್ನು ನೀಡುತ್ತಿದ್ದಾನೆ. ಆದರೆ, ನಾಳೆಯಿಂದ ಈ ಮೂರು ರಾಶಿಗಳ ಜಾತಕದವರಿಗೆ ಅಂಗಾರಕ ಯೋಗದಿಂದ ಮುಕ್ತಿ ಸಿಗಲಿದೆ.

ಇದನ್ನೂ ಓದಿ-ಹನ್ನೊಂದು ತಿಂಗಳ ನಂತರ ತನ್ನ ರಾಶಿ ಪ್ರವೇಶಿಸುತ್ತಿರುವ ಸೂರ್ಯ, ಈ ರಾಶಿಯವರಿಗೆ ಕಂಟಕ

ಆಗಸ್ಟ್ 10 ರಂದು ವೃಷಭ ರಾಶಿಗೆ ಮಂಗಳನ ಪ್ರವೇಶ
ಜುಲೈ 27ರಂದು ಮೇಷ ರಾಶಿ ಪ್ರವೇಶಿಸಿದ್ದ ಮಂಗಳ, ಹಲವು ರಾಶಿಗಳ ಜನರಿಗೆ ಕಷ್ಟದ ದಿನಗಳನ್ನು ನೀಡಿದ್ದ. ಆದರೆ, ಆಗಸ್ಟ್ 10 ರಿಂದ ಮಂಗಳ ವೃಷಭ ರಾಶಿಯಲ್ಲಿ ಗೋಚರಿಸುತ್ತಿದ್ದು, ರಾಹುವಿನ ಜೊತೆಗೆ ಮಂಗಳನ ಸಂಯೋಜನೆ ಅಂತ್ಯವಾಗಲಿದೆ ಮತ್ತು 37 ವರ್ಷಗಳ ಬಳಿಕ ನಿರ್ಮಾಣಗೊಂಡ ಈ ಯೋಗ ಕೂಡ ಅಂತ್ಯ ಕಾಣಲಿದೆ. ಆಗಸ್ಟ್ 10ರ ಬಳಿಕ ಈ ಮೂರು ರಾಶಿಗಳಿಗೆ ಭಾರಿ ನೆಮ್ಮದಿ ಸಿಗಲಿದೆ. 

ಇದನ್ನೂ ಓದಿ-Vastu tips : ಬೆಲ್ಲದಲ್ಲಿ ಅಡಗಿದೆ ನಿಮ್ಮ ಆರ್ಥಿಕ ಪ್ರಗತಿಯ ಗುಟ್ಟು! ಆರೋಗ್ಯ ಮಾತ್ರವಲ್ಲ ಅದೃಷ್ಟಕ್ಕೂ ಬೇಕು ಬೆಲ್ಲ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)  

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.



Source link

Leave a Comment