Sonu Gowda: ಮೊದಲ ವಾರವೇ ಬಿಗ್​ ಬಾಸ್​ ಮನೆಯಿಂದ ಹೊರ ನಡೀತಾರಾ ಸೋನು ಗೌಡ?

Bigg Boss OTT Kannada Nomination: ಅಂತೂ ಇಂತೂ ಬಹುನಿರೀಕ್ಷಿತ ಕನ್ನಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಒಟಿಟಿ ಸೀಸನ್‌ 1 ಆರಂಭವಾಗಿದೆ. ಆರಂಭದಿಂದಲೇ ಅನೇಕ ಟ್ವಿಸ್ಟ್​ಗಳನ್ನು ಬಿಗ್​ ಬಾಸ್​ ಕನ್ನಡ ಒಟಿಟಿ ಮೊದಲ ಸೀಸನ್​ ನಡೆಯುತ್ತಿದೆ. ಅಲ್ಲದೇ ಮೊದಲ ವಾರವೇ ನಾಮಿನೇಷನ್​ ಬಿಸಿ ಕೂಡ ತಟ್ಟಿದೆ. ಮೊದಲ ವಾರದ ನಾಮಿನೇಷನ್‌ ಪ್ರಕ್ರಿಯೆ ಸಹ ಮುಗಿದಿದೆ. ವಾಡಿಕೆಯಂತೆ ಸ್ಪರ್ಧಿಗಳೆಲ್ಲರೂ ಕೆಲವು ಕಂಟೆಸ್ಟಂಟ್‌ಗಳನ್ನು ಗೌಪ್ಯವಾಗಿ ಬಿಗ್​ ಬಾಸ್​ ಬಳಿ ನಾಮಿನೇಟ್‌ ಮಾಡಿದ್ದಾರೆ. ಆ ಪೈಕಿ ಸೋನು ಶ್ರೀನಿವಾಸ್​ ಗೌಡ ಸಹ ನಾಮಿನೇಟ್‌ ಆಗಿದ್ದಾರೆ. ಈ ಬೆನ್ನಲ್ಲೇ ಸೋನು ಗೌಡ ಮೊದಲ ವಾರವೇ ದೊಡ್ಮನೆಯಿಂದ ಹೊರ ಹೋಗ್ತಾರಾ ಎಂಬ ಚರ್ಚೆ ಶುರುವಾಗಿದೆ. ಸೋನು ಆಯ್ಕೆ ಆಗಿರುವ ಬಗ್ಗೆ ನೆಟ್ಟಿಗರಿಗೆ ಅಸಮಾಧಾನವಿರುವುದು ಈಗಾಗಲೇ ಗೊತ್ತಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸೋನು ಗೌಡ ಆಯ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಎಲ್ಲರೂ ಅವರು ಬೇಗ ಎಲಿಮಿನೇಟ್​ ಆಗಲಿ ಎಂದೇ ಕಾಮೆಂಟ್‌ ಮಾಡುತ್ತಿದ್ದಾರೆ. ಈಗ ಅವರು ನಾಮಿನೇಟ್​ ಆಗಿರುವುದರಿಂದ ಬಿಗ್​ ಬಾಸ್ ಒಟಿಟಿ ಮೊದಲ ವಾರದ ಎಪಿಸೋಡ್​ಗಳು ತುಂಬಾ ಕ್ಯೂರಿಯಸ್‌ ಆಗಿವೆ. 

ಇದನ್ನೂ ಓದಿ: BBK OTT: ಬಿಗ್​ಬಾಸ್​ ​ಮನೆಯೊಳಗೆ ಜಶ್ವಂತ್ – ನಂದು.. ಮಾಡ್ತಾರಾ ಮೋಡಿ ರೋಡೀಸ್​ ಜೋಡಿ?

ಮೊದಲ ವಾರ ಒಟ್ಟು 8 ಸ್ಪರ್ಧಿಗಳು ಮೊದಲ ವಾರವೇ ನಾಮಿನೇಟ್​ ಆಗಿದ್ದಾರೆ. ಸೋನು ಗೌಡ, ಆರ್ಯವರ್ಧನ್​ ಗುರೂಜಿ, ಸ್ಫೂರ್ತಿ ಗೌಡ, ನಂದಿನಿ, ಜಶ್ವಂತ್​, ಜಯಶ್ರೀ ಆರಾಧ್ಯಾ, ಕಿರಣ್​ ಯೋಗೇಶ್ವರ್​ ಮತ್ತು ಅಕ್ಷತಾ ಕುಕ್ಕಿ ಎಲಿಮೀನೇಷನ್‌ ಭೀತಿಯಲ್ಲಿದ್ದಾರೆ. ಈ ಪೈಕಿ ಯಾರು ಬಿಗ್​ ಬಾಸ್​ ಮನೆಯಿಂದ ಮೊದಲು ಹೊರಬರುತ್ತಾರೆ ಎಂಬ ಬಿಸಿ ಬಿಸಿ ಚರ್ಚೆ ಇದೀಗ ಶುರುವಾಗಿದೆ. 

ಲೋಕೇಶ್​, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ, ಅರ್ಜುನ್​ ರಮೇಶ್​, ರಾಕೇಶ್​ ಅಡಿಗ, ಸಾನ್ಯಾ ಐಯ್ಯರ್, ಉದಯ್​ ಸೂರ್ಯ, ರೂಪೇಶ್​ ಶೆಟ್ಟಿ ಮೊದಲ ವಾರದ ಎಲಿಮಿನೇಷಮನ್‌ನಿಂದ ಸೇಫ್​ ಆಗಿದ್ದಾರೆ. ನಾಮಿನೇಟ್​ ಆಗಿರುವವರು ಅತಿ ಕಡಿಮೆ ಸಮಯದಲ್ಲಿಯೇ ವೀಕ್ಷಕರ ಮನ ಗೆಲ್ಲಬೇಕಿದೆ. ಇರುವ ಸಮಯದಲ್ಲೇ ಹೆಚ್ಚಿನ ವೋಟ್​ ಪಡೆಯಲು ಪ್ರಯತ್ನಿಸಬೇಕು. ಜನರ ವಿರೋಧಕ್ಕೆ ಒಳಗಾಗಿರುವ ಕಾರಣದಿಂದ ಈ ವಾರ ಸೋನು ಗೌಡಗೆ ಅತಿ ಕಡಿಮೆ ವೋಟ್‌ ಬಂದು ಮನೆಯಿಂದ ಹೊರ ಬರುತ್ತಾರಾ ಎಂಬ ಪ್ರಶ್ನೆ ಸಹ ಎಲ್ಲರಲ್ಲೂ ಮೂಡಿದೆ.

ಇದನ್ನೂ ಓದಿ:Bigg Boss Kannada OTT: ಕನ್ನಡದ ಮೊದಲ ರಾಪರ್ ಈ ಬಿಗ್‌ ಬಾಸ್ ಸ್ಪರ್ಧಿ!!

ಕನ್ನಡದಲ್ಲಿ ಇದೇ ಮೊದಲ ಸಲ ‘ಬಿಗ್​ ಬಾಸ್​ ಒಟಿಟಿ’ ಶುರುವಾಗಿದೆ. ‘ವೂಟ್​ ಸೆಲೆಕ್ಟ್​’ ಮೂಲಕ ಈ ಶೋ ಪ್ರಸಾರ ಆಗುತ್ತಿದೆ. ಇದು ವೀಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ. ಟಿವಿಗೆ ಹೋಲಿಸಿದರೆ ಇಲ್ಲಿ ಒಂದಷ್ಟು ಬದಲಾವಣೆಗಳು ಎದುರಾಗುವ ಸಾಧ್ಯತೆ ಇದೆ. ದಿನ 24 ಗಂಟೆಯೂ ಸ್ಪರ್ಧಿಗಳ ಚಟುವಟಿಕೆಯನ್ನು ವೀಕ್ಷಿಸಲು ‘ವೂಟ್​ ಸೆಲೆಕ್ಟ್​’ ಚಂದಾದಾರರಿಗೆ ಅವಕಾಶ ಇದೆ. ಪ್ರತಿದಿನ ಸಂಜೆ 7 ಗಂಟೆಗೆ ಹೈಲೈಟ್ಸ್​ ಎಪಿಸೋಡ್​ ಪ್ರಸಾರ ಆಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment