Taapsee Pannu: ತನ್ನ ಚಿತ್ರವನ್ನೇ ಬಹಿಷ್ಕರಿಸಲು ನೆಟ್ಟಿಗರಿಗೆ ಕರೆ ನೀಡಿದ ತಾಪ್ಸಿ ಪನ್ನು , ಕಾರಣ ಇಲ್ಲಿದೆ

Taapsee Pannu On Dobaaraa Boycott: ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ಮುಂಬರುವ ಚಿತ್ರ ‘ದೋಬಾರಾ’ ದಿಂದ ಇತ್ತೀಚಿಗೆ ಸಾಕಷ್ಟು ಸುದ್ದಿಯಲ್ಲಿದ್ದಾಳೆ. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರವು ಆಗಸ್ಟ್ 19 ರಂದು ತೆರೆಕಾಣಲಿದೆ, ಈ ಕಾರಣದಿಂದಾಗಿ ನಟಿ ಚಿತ್ರದ ಭರ್ಜರಿ ಪ್ರಚಾರ ಕಾರ್ಯದಲ್ಲಿ ದಲ್ಲಿ ನಿರತಲಾಗಿದ್ದಾಳೆ. ಇದೇ ವೇಳೆ ಚಿತ್ರಗಳ ಬಹಿಷ್ಕಾರದ ಬಗ್ಗೆ ತಾಪ್ಸಿ ಮಾತನಾಡಿದ್ದಾಳೆ.

‘ದೋಬಾರಾ’ ಅನ್ನು ಬಹಿಷ್ಕರಿಸಬೇಕು
ಇತ್ತೀಚೆಗೆ, ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ, ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಮತ್ತು ಅಕ್ಷಯ್ ಕುಮಾರ್ ಅವರ ‘ರಕ್ಷಾಬನ್’ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿಷ್ಕರಿಸಲಾಗುತ್ತಿದೆ ಮತ್ತು ಎರಡೂ ಚಿತ್ರಗಳ ಬಹಿಷ್ಕಾರಕ್ಕೆ ಸಂಬಂಧಿಸಿದ ಹ್ಯಾಶ್‌ಟ್ಯಾಗ್‌ಗಳು ಅಂತರ್ಜಾಲದಲ್ಲಿ ಟ್ರೆಂಡ್ ಸೃಷ್ಟಿಸುತ್ತಿವೆ. ಇದು ನಿಮ್ಮ ಚಿತ್ರದ ಬಗ್ಗೆ ನಿಮಗೆ ಚಿಂತೆಗೀಡು ಮಾಡುತ್ತದೆಯೇ? ಎಂದು ಪ್ರಶ್ನಿಸಲಾಗಿದೆ.  ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಾಪ್ಸಿ, ತಮ್ಮ ‘ದೋಬಾರಾ’ ಚಿತ್ರವನ್ನು ಕೂಡ ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ ಮತ್ತು ಅವರು ತಮ್ಮ ಚಿತ್ರವನ್ನು ಬಹಿಷ್ಕರಿಸಲು ಎಲ್ಲರಿಗೂ ಕರೆ ನೀಡಿದ್ದಾರೆ. ಅಮೀರ್ ಖಾನ್ ಮತ್ತು  ಅಕ್ಷಯ್ ಕುಮಾರ್ ಅವರನ್ನು ಬಹಿಷ್ಕರಿಸಿದಾಗ, ನಾನು ಕೂಡ ಆ ಲೀಗ್‌ಗೆ ಸೇರಲು ಬಯಸುತ್ತೇನೆ ಎಂದು ತಾಪ್ಸಿ ಪನ್ನು ಹೇಳಿದ್ದಾಳೆ.

ಬಳಿಕ ಇದೆಲ್ಲ ಏನು? ಎಂದು ಸಿದ್ಧಾರ್ಥ್ ಕಣ್ಣನ್‌ಗೆ ತಾಪ್ಸಿಯನ್ನು ಮರುಪ್ರಶ್ನಿಸಿದ್ದಾರೆ. ನೆಟ್ಟಿಗರು ಚಿತ್ರವನ್ನು ನೋಡುತ್ತಾರೆಯೋ ಅಥವಾ ಇಲ್ಲವೋ ಅದರಿಂದ ಯಾವುದೇ ಪ್ರಭಾವ ಉಂಟಾಗುವುದಿಲ್ಲ ಆದರೆ, ಅವರು ಚಿತ್ರವನ್ನು ಬಹಿಷ್ಕರಿಸಬೇಕು ಎಂದು ತಾಪ್ಸಿ ಹೇಳಿದ್ದಾಳೆ.

ಇದನ್ನೂ ಓದಿ-Sonu Gowda: ಮೊದಲ ವಾರವೇ ಬಿಗ್​ ಬಾಸ್​ ಮನೆಯಿಂದ ಹೊರ ನಡೀತಾರಾ ಸೋನು ಗೌಡ?

ಅನುರಾಗ್ ಕಶ್ಯಪ್ ಕೂಡ ಬಹಿಷ್ಕಾರ ಬಯಸುತ್ತಿದ್ದಾರೆ
ಈ ಬಗ್ಗೆ ‘ದೋಬಾರ’ ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು ಕೂಡ ಪ್ರಶ್ನಿಸಿದಾಗ, ಪ್ರತಿಕ್ರಿಯೆ ನೀಡಿರುವ ಅನುರಾಗ ಕಶ್ಯಪ್, “ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಮಾಡದ ಕಾರಣ ತಮ್ಮನ್ನು ಹೊರಗಿಡಲಾಗಿದೆ ಮತ್ತು ಅವರು #BoycottKashyap ಪ್ರವೃತ್ತಿಯನ್ನು ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ-ಕುಡಿದ ಅಮಲಿನಲ್ಲಿ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ಗಲಾಟೆ, ದೂರು ದಾಖಲು

ಇತ್ತೀಚೆಗಷ್ಟೇ  ತಾಪ್ಸಿ ಪನ್ನು ಅಭಿನಯದ ‘ದೋಬಾರಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ, ಇದು ನಿಗೂಢತೆ, ಸಸ್ಪೆನ್ಸ್, ಟೈಮ್ ಟ್ರಾವೆಲಿಂಗ್ ಮತ್ತು ಸಾಕಷ್ಟು ಥ್ರಿಲ್ ನಿಂದ ಕೂಡಿದ ಚಿತ್ರವಾಗಿದೆ ಎಂಬಂತೆ ತೋರುತ್ತಿದೆ. ಅದೇನೇ ಇದ್ದರೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರುತ್ತದೆಯೆ ಅಥವಾ ಇಲ್ಲವೇ ಎಂಬುದು ಮಾತ್ರ ಕಾದುನೋಡಬೇಕು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  



Source link

Leave a Comment