24 ಏಕಾದಶಿಗಳ ಫಲ ಈ ನಿರ್ಜಲ ಏಕಾದಶಿ ಆಚರಣೆಯಿಂದ ಲಭಿಸುತ್ತೆ!ಈ ದಿನ ಈ ಕಾರ್ಯಗಳನ್ನು ಮಾಡುವುದು ತಪ್ಪಿಸಿ!

ಜೂನ್ 10 ರಂದು ನಿರ್ಜಲ ಏಕಾದಶಿ ಆಚರಣೆ ಮಾಡುತ್ತಾರೆ.ಹಿಂದೂ ಪಂಚಾಂಗದ ಪ್ರಕಾರ ವರ್ಷದ 24 ಏಕಾದಶಿ ಉಪವಾಸಗಳು ಬರುತ್ತವೆ.ಎಲ್ಲಾ 24 ಏಕಾದಶಿಗಳು ಕೂಡ ತುಂಬಾನೇ ವಿಶೇಷವಾದ ಮಹತ್ವವನ್ನು ಪಡೆದಿರುತ್ತದೆ.ಅದರಲ್ಲಿ ಏಕಾದಶಿ ಉಪವಾಸವನ್ನು ವಿಷ್ಣುವಿಗೆ ಸಮರ್ಪಣೆ ಮಾಡುತ್ತೇವೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ವರ್ಷವೂ ಕೂಡ ಜೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನದಂದು ನಿರ್ಜಲ ಏಕಾದಶಿ ಉಪವಾಸವನ್ನು ಆಚರಣೆ ಮಾಡುತ್ತೇವೆ.

ನಿರ್ಜಲ ಏಕಾದಶಿ ಆಚರಿಸುವ ವ್ಯಕ್ತಿ ಎಲ್ಲಾ ಏಕಾದಶಿಗಳ ಪುಣ್ಯವನ್ನು ಪಡೆಯುತ್ತಾರೆ.ಇನ್ನು ಜೇಷ್ಠ ಮಾಸದ ಏಕಾದಶಿ ಜೂನ್ 10ರಂದು ಬೆಳಗ್ಗೆ 7:25 ನಿಮಿಷಕ್ಕೆ ಪ್ರಾರಂಭವಾದರೆ ಜೂನ್ 11ನೇ ತಾರೀಕು ಬೆಳಗ್ಗೆ 5:45 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಶುಕ್ರವಾರ ಉಪವಾಸ ಇದ್ದು ಶನಿವಾರ ಬೆಳಗ್ಗೆ ಸ್ನಾನ ಮಾಡಿ ಪೂಜೆ ಮಾಡಿ ಉಪವಾಸ ಬಿಡಬಹುದು.

ಇನ್ನು ಏಕಾದಶಿ ಸಮಯದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಸ್ನಾನವನ್ನು ಮುಗಿಸಿಕೊಂಡು ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಆದಷ್ಟು ಹಳದಿ ಬಟ್ಟೆಯನ್ನು ಹಾಕಿಕೊಂಡರೆ ಒಳ್ಳೆಯದು. ಮನಸ್ಸಿನಲ್ಲಿ ವಿಷ್ಣುವನ್ನು ಸ್ಮರಿಸಿ ಪ್ರತಿಜ್ಞೆ ಮಾಡಬೇಕು.

ಇನ್ನು ಒಂದು ಪೀಠ ಇಟ್ಟು ರಂಗೋಲಿ ಹಾಕಬೇಕು.ನಂತರ ಹಳದಿ ವಸ್ತ್ರವನ್ನು ಹಾಕಿ ಹಾಗು ಗಂಗಾಜಲವನ್ನು ಸಿಂಪಡಿಸಿ. ನಂತರ ವಿಷ್ಣುವಿನ ವಿಗ್ರಹ ಅಥವಾ ಫೋಟೋವನ್ನು ಪ್ರತಿಷ್ಟಪಾನೇ ಮಾಡಿ.ಆದಷ್ಟು ಹಳದಿ ಹಾಗು ತುಳಸಿ ಮಾಲೆಯಿಂದ ಅಲಂಕಾರ ಮಾಡಿ.ಇನ್ನು ಪ್ರಸಾದಕ್ಕೆ ಹಾಲು ಹಣ್ಣು ಇಡಬಹುದು.ಏಕಾದಶಿ ಮಾಡುವವರು ಏನು ಸೇವನೇ ಮಾಡಬಾರದು.ಆದಷ್ಟು ಈ ಪೂಜೆಯಲ್ಲಿ ತುಪ್ಪದ ದೀಪವನ್ನು ಹಚ್ಚಿದರೆ ತುಂಬಾ ಒಳ್ಳೆಯದು.ಶ್ರೀ ವಿಷ್ಣುವಿನ ಮಂತ್ರವನ್ನು ಜಪ ಮಾಡಿ ಹಾಗು ವಿಷ್ಣು ಸಹಸ್ರನಾಮ ಹೇಳಿಕೊಂಡರೆ ತುಂಬಾ ಒಳ್ಳೆಯದು.ಆದಷ್ಟು ಈ ದಿನ ನೀರನ್ನು ಮುಟ್ಟದೆ ಉಪವಾಸವನ್ನು ಮಾಡಬೇಕಾಗುತ್ತದೆ.

Leave a Comment