ಅತ್ಯಂತ ಪ್ರಾಚೀನ ಲೋಹ ಆಗಿರುವ ತಾಮ್ರವು ಜ್ಯೋತಿಷ್ಯ ಶಾಸ್ತ್ರದಲ್ಲು ಕೂಡ ತಾಮ್ರಕ್ಕೆ ವಿಶೇಷವಾದ ಸ್ಥಾನವಿದೆ. ಇದನ್ನು ಪವಿತ್ರ ಲೋಹ ಎಂದು ಪರಿಗಣಿಸಲಾಗುತ್ತದೆ. ಗ್ರಹ ದೋಷದ ಜೊತೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಗುಣಪಡಿಸುವಂತಹ ಶಕ್ತಿ ಈ ತಾಮ್ರ ಲೋಹಕ್ಕೆ ಇದೆ. ತಾಮ್ರದಲ್ಲಿ ಇರುವಂತಹ ವಿಶೇಷವಾದ ಅಂಶಗಳಿಂದಲೇ ಇದನ್ನು ನಮ್ಮ ಪೂರ್ವಜರು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ತಾಮ್ರದ ಲೋಹದ ಉಗುರವನ್ನು ಧರಿಸುವುದರಿಂದ ಅಷ್ಟೇ ಲಾಭವಿದೆ.
ಕೆಲವರಿಗೆ ಕೈ ಕಾಲು ಮತ್ತು ಕೀಲು ನೋವಿನಿಂದ ಸಾಕಷ್ಟು ನೋವನ್ನು ಅನುಭವಿಸುತ್ತಿರುತ್ತಾರೆ.ಇಂತವರು ತಾಮ್ರದ ಉಂಗುರವನ್ನು ಧರಿಸಿದರೆ ಕೈಕಾಲು ಮತ್ತು ಕೀಲು ನೋವಿನ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಮಾತ್ರವಲ್ಲದೆ ಪುರುಷರು ತಾಮ್ರದ ಖಡ್ಗವನ್ನು ಧರಿಸುತ್ತಿದ್ದರು. ಹಿರಿಯರು ಹೇಳುವಂತೆ ತಾಮ್ರದ ಆಭರಣಗಳನ್ನು ಕೈಬೆರಳಿಗೆ ಅಥವಾ ಕೈಗಳಿಗೆ ಹಾಕಿಕೊಳ್ಳುವುದರಿಂದ ಕೀಲು ನೋವಿನ ಸಮಸ್ಯೆಗಳು ಬೇಗನೆ ನಿವಾರಣೆಯಾಗುತ್ತದೆ. ತಾಮ್ರದ ಉಂಗುರವನ್ನು ಧರಿಸುವುದರಿಂದ ದೇಹದಲ್ಲಿ ರಕ್ತಸಂಚಾರ ಸರಾಗವಾಗಿಸಲು ಸಹಕರಿಸುತ್ತದೆ ಮತ್ತು ಮನಸ್ಸು ಕೂಡ ಶಾಂತವಾಗಿರುತ್ತದೆ.
ಹೆಚ್ಚು ಕೋಪಿಷ್ಟರು ತಾಮ್ರದ ಉಂಗುರವನ್ನು ಧರಿಸಬೇಕು. ಮನೆಯಲ್ಲಿ ತಾಮ್ರದ ಪಾತ್ರೆ ಇದ್ದರು ಕೂಡ ಒಳ್ಳೆಯದು. ತಾಮ್ರದ ಉಂಗುರವನ್ನು ಧರಿಸುವುದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ.ಇದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಪಾಸಿಟಿವ್ ಗುಣ ಅವರಲ್ಲಿ ಅಭಿವೃದ್ಧಿಯಾಗುತ್ತದೆ.ತಾಮ್ರದ ಉಂಗುರ ಧರಿಸುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಜ್ಯೋತಿಷ್ಯದಲ್ಲಿ ತಾಮ್ರದ ಉಂಗುರವನ್ನು ಧರಿಸುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ತಾಮ್ರದ ಉಂಗುರವನ್ನು ಧರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಕೂಡಾ ಸಿಗಲಿದೆ.ತಾಮ್ರವನ್ನು ಸೂರ್ಯ ಮತ್ತು ಮಂಗಳನ ಲೋಹವೆಂದು ಹೇಳಲಾಗುತ್ತದೆ. ತಾಮ್ರದ ಉಂಗುರವನ್ನು ಧರಿಸುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ.
ಅಥವಾ ಬಳೆ ಧರಿಸಿದರೆ ಕೀಲು ನೋವು ನಿವಾರಣೆಯಾಗುತ್ತದೆ. ಇದಲ್ಲದೆ, ಇದನ್ನು ಹಾಕುವುದರಿಂದ ಹೊಟ್ಟೆಗೆ ಸಂಬಂಧಿಸಿದ ರೋಗಗಳು ಸಹ ದೂರವಾಗುತ್ತವೆ. ಸಂಧಿವಾತ ರೋಗಿಗಳು ತಾಮ್ರದ ಕಂಕಣವನ್ನು ಧರಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನಲಾಗಿದೆ.
ಸೂರ್ಯ ಮತ್ತು ಮಂಗಳ ದೋಷ ನಿವಾರಣೆಯಾಗುತ್ತದೆ :ಉಂಗುರದ ಬೆರಳಿನಲ್ಲಿ ತಾಮ್ರದ ಉಂಗುರವನ್ನು ಧರಿಸುವುದರಿಂದ ಸೂರ್ಯನ ದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ಮಂಗಳನ ಅಶುಭ ಫಲದಿಂದಲೂ ಮುಕ್ತಿ ಸಿಗಲಿದೆ ಎನ್ನಲಾಗುತ್ತದೆ.
ರಕ್ತ ಸಂಚಲನ ಸುಧಾರಿಸುತ್ತದೆ :ತಾಮ್ರದ ಉಂಗುರ ಅಥವಾ ಬಳೆ ಧರಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ಮತ್ತು ಅದರ ಸಂಚಲನ ಕೂಡಾ ಉತ್ತಮವಾಗಿರುತ್ತದೆ. ಇದನ್ನು ಹಾಕುವುದರಿಂದ ಮಾನಸಿಕ ಮತ್ತು ದೈಹಿಕ ಒತ್ತಡ ಕೂಡ ಕಡಿಮೆಯಾಗುತ್ತದೆ.
ವಾಸ್ತು ದೋಷಗಳು ನಿವಾರಣೆಯಾಗುತ್ತವೆ :ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರಿಸಿರುವ ತಾಮ್ರದ ಪಾತ್ರೆಗಳಿಂದ ಸಂತೋಷ ಮತ್ತು ಶಾಂತಿ ಉಳಿಯುತ್ತದೆ. ಇದರ ಶುದ್ಧತೆಯು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಮನೆಯ ಮುಖ್ಯ ಬಾಗಿಲು ಸರಿಯಾದ ದಿಕ್ಕಿನಲ್ಲಿ ಇರದೆ ಹೋದರೆ,ತಾಮ್ರದ ನಾಣ್ಯವನ್ನು ನೇತುಹಾಕುವುದರಿಂದ, ಅದರ ವಾಸ್ತು ದೋಷವು ಕೊನೆಗೊಳ್ಳುತ್ತದೆ.