B ಅಕ್ಷರದವರ ಹುಡುಗಿಯರ ಬಗ್ಗೆ ನಿನಗೆ ಗೊತ್ತಿಲ್ಲದ ವಿಷಯಗಳು!

ಸಂಖ್ಯಾ ಶಾಸ್ತ್ರದ ಪ್ರಕಾರ ಹೆಸರಿನ ಮೊದಲ ಅಕ್ಷರವು ಸಂಖ್ಯೆಯೊಂದರ ಜೊತೆ ನೇರ ಸಂಬಂಧ ಹೊಂದಿದ್ದು, ಇದರ ಮೂಲಕ ಆ ವ್ಯಕ್ತಿಯ ವ್ಯಕ್ತಿತ್ವ, ಬದುಕಿನ ಆಯ್ಕೆಗಳು, ಉದ್ಯೋಗ, ಆರೋಗ್ಯ, ಪ್ರೇಮಜೀವನದ ಬಗೆಗಿನ ಆಸಕ್ತಿಕರ ವಿಷಯಗಳನ್ನು ತಿಳಿಯಬಹುದು! ಇಲ್ಲಿದೆ ನೋಡಿ, ಇಂಗ್ಲಿಷ್ ವರ್ಣಮಾಲೆ “ಬಿ” ಯಿಂದ ಶುರುವಾಗುವ ಹೆಸರಿನ ವ್ಯಕ್ತಿಗಳ ವ್ಯಕ್ತಿತ್ವದ ಕುರಿತು ಮಾಹಿತಿ.

ಅತ್ಯಂತ ಭಾವುಕ ಮನಸಿನ ಇವರು ಸ್ವಲ್ಪ ಅಂತಃರ್ಮುಖಿಗಳೂ ಹೌದು. ಯಾರೊಂದಿಗೂ ತಕ್ಷಣವೇ ಬೇರೆಯಲಾರರು.ನಿಯತ್ತಿನ ನಾಯಕರಿವರು, ಸ್ವಹಿತಾಸಕ್ತಿಗಳ ಮರೆತು ತಮ್ಮವರಿಗಾಗಿ ಏನು ಮಾಡಲೂ ಸಿದ್ಧ. ಸಾಮಾನ್ಯವಾಗಿ ಇವರಿಗೆ ‘ಮನೆಯೇ ಮಂತ್ರಾಲಯ’. ತಮ್ಮ ತುಟುಂಬದೊಂದಿಗೆ ಕಳೆಯುವ ಸಮಯ ಇವರಿಗೆ ಅತಿ ಪ್ರಿಯ. ಹಾಂ! ಪಾಕಪ್ರವೀಣರೂ ಆಗಿರುವ ಇವರದು ಆತಿಥ್ಯದಲ್ಲಿ ಎತ್ತಿದ ಕೈ.

ಶೃಂಗಾರವೇ ಬಂಗಾರ–ತೋರಿಕೆ ಸೌಮ್ಯರಾದ ಇವರು ಶೃಂಗಾರ ಪ್ರಿಯರು. ಸೃಜನಶೀಲ ಮನಸ್ಸು ಮತ್ತು ಸುಂದರ ಯೋಚನೆಗಳ ಒಟ್ಟು ಮೊತ್ತವಾದ ಇವರು ‘ಈ ಸಮಯ ಶೃಂಗಾರಮಯ’ ವಾಗಿಸುವಲ್ಲಿ ಸಿದ್ಧಹಸ್ತರು. ಸುತ್ತಾಟ, ಪಿಕ್ನಿಕ್, ಸಿನಿಮಾ, ಡೇಟ್ ಗಳನ್ನು ಪ್ಲಾನ್ ಮಾಡುವಲ್ಲಿ ಇವರ ರಸಿಕ ಮನದ ಅನಾವರಣ! ಇವರ ಒಂದೇ ಒಂದು ಅಪೇಕ್ಷೆಯೆಂದರೆ, ಸಂಗಾತಿಯ ಹೃತ್ಪೂರ್ವಕ ಸಹಮತ. ತಮ್ಮ ಎಲ್ಲವನ್ನೂ ಮನಸಾರೆ ಅರ್ಪಿಸುವ ಇವರು ಸಂಗಾತಿಯ ಸಾಂಗತ್ಯವನ್ನು ಬಯಸುತ್ತಾರೆ. ಇಷ್ಟಿದ್ದರೂ ತಮ್ಮ ಭಾವನೆಗಳ ಬಗ್ಗೆ ಅಗಾಧ ನಿಯಂತ್ರಣ ಹೊಂದಿರುವ ಇವರದ್ದು ಅತ್ಯಂತ ಸಮತೋಲಿತ ವ್ಯಕ್ತಿತ್ವವೇ ಸರಿ.

ಭಾವಲೋಕದ ರಾಯಭಾರಿ—ಇವರು ಪಕ್ಕ ಸೆನ್ಸಿಟಿವ್. ಇನ್ನೊಬ್ಬರ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿ ಸ್ಪಂದಿಸುವ ಇವರು, ಅಷ್ಟೇ ಬೇಗ ನೊಂದುಕೊಳ್ಳುವುದೂ ಸತ್ಯ. ಭಾವುಕತೆಯಿಂದಾಗಿಯೇ ತಮ್ಮ ಹೆಚ್ಚಿನ ಸಮಯವನ್ನು ಕುಟುಂಬ ಮತ್ತು ಸ್ನೇಹಿತರಿಗೆ ಮೀಸಲಿಡುತ್ತಾರೆ.ಉಡುಗೊರೆಗಳನ್ನು ಕೊಡುವ ಮೂಲಕ ತಮ್ಮ ಪ್ರೀತಿ, ಸ್ನೇಹ, ಕ್ಷಮಾಪಣೆಯನ್ನು ವ್ಯಕ್ತ ಪಡಿಸುವ ಇವರಿಗೆ ನೀವೂ ಉಡುಗೊರೆಗಳನ್ನು ನೀಡಿ,ಅವರ ಅಚ್ಚರಿಯ ಆನಂದಕ್ಕೆ ಕಾರಣರಾಗಬಹುದು! ಹಾಗೆ, ತಮ್ಮ ಬಳಗದಲ್ಲಿ ದಾನಶೂರರೆಂದು ಹೆಸರುವಾಸಿಗಳಿವರು.

ಶಾಂತಿಪ್ರಿಯರು–ಸಹಕಾರ ಮನೋಭಾವದವರಾದ ಇವರು ಶಾಂತಿಪ್ರಿಯರು. ಸಮಸ್ಯೆಯನ್ನು ತಿಳಿಗೊಳಿಸಲು ತಮ್ಮಿಂದಾದ ಎಲ್ಲ ಪ್ರಯತ್ನವನ್ನು ಮಾಡುವ ಇವರು, ವಾಗ್ವಾದಗಳಿಂದ ಅತಿ ದೂರ. ಆದರೆ ಕೆಲವೊಮ್ಮೆ ಇವರ ಈ ಮೃದು ಧೋರಣೆಯನ್ನೇ ಇವರ ದೌರ್ಬಲ್ಯವೆಂದು ತಪ್ಪಾಗಿ ಅರ್ಥೈಸುವ ಸಾಧ್ಯತೆಗಳೂ ಇವೆ. ಶಾಂತಿಯೇ ಇವರ ವ್ಯಕ್ತಿತ್ವದ ಮೂಲಮಂತ್ರವಾದ್ದರಿಂದ ಇವರು ವ್ಯವಹಾರ ಚತುರರೂ ಹೌದು. ತಮ್ಮ ಅತಿಯಾದ ಕೋಪವನ್ನೂ ಮೌನಕ್ಕೆ ಮೊರೆ ಹೋಗುವ ಮೂಲಕ ನಿಯಂತ್ರಿಸಬಲ್ಲರು.

ಸಾಮಾಜಿಕ ಬದುಕು—ತಮ್ಮ ಶಾಂತ, ಸ್ನೇಹಮಯಿ ವ್ಯಕ್ತಿತ್ವದಿಂದಾಗಿ ಇವರಿಗೆ ಸ್ನೇಹಿತರು ಬಹಳ,ಆದರೂ ಇವರ ಆಪ್ತರು ಕೆಲವರಷ್ಟೇ. ತಮ್ಮ ಮನೋಧರ್ಮಕ್ಕೆ ಸರಿಹೊಂದುವ ಪಾರ್ಟಿ, ಸಾಮಾಜಿಕ ಸಮಾರಂಭಗಳನ್ನು ಇಷ್ಟಪಡುವ ಇವರು, ತಮ್ಮ ಸುತ್ತಮುತ್ತಲಿನ ವಿದ್ಯಮಾನಗಳ ಬಗ್ಗೆ ಆಸಕ್ತಿಯನ್ನೂ ಹೊಂದಿರುತ್ತಾರೆ. ಇವರ ಹಾರ್ದಿಕ ವ್ಯಕಿತ್ವ ಇತರರನ್ನು ಇವರತ್ತ ಸೆಳೆಯುತ್ತದೆ. ಆದಾಗ್ಯೂ ಇವರ ಸ್ನೇಹದ ನಿಯಮ ‘ಇರಲಿ ನಡುವೆ ಅಂತರ.

ಭಲೇ ಧೈರ್ಯಶಾಲಿ—ಇಷ್ಟೆಲ್ಲಾ ಮೃದು ಮಧುರ ಭಾವಗಳ ಸರದಾರರಾದ ಇವರು ಅಗತ್ಯ ಬಂದಲ್ಲಿ ತಮ್ಮ ಧೈರ್ಯವನ್ನು ಸಾಬೀತು ಪಡಿಸುವರು. ಭಯವೆಂಬುದು ಇವರ ಜಾಯಮಾನದಲ್ಲೇ ಇಲ್ಲ. ಅತ್ಯಂತ ಸಮಾಧಾನಿಗಳಾದರೂ, ಆಪತ್ತಿನ ಸಮಯದಲ್ಲಿ ತಮ್ಮವರನ್ನು ಪಾರು ಮಾಡಲು ಹಿಂದೂ ಮುಂದು ನೋಡುವುದಿಲ್ಲ. ಇನ್ನೊಬ್ಬರ ನೋವು ಇವರಿಗೆ ಖಂಡಿತ ಅಸಹನೀಯ.

ಆರೋಗ್ಯ—ಮನಬಿಚ್ಚಿ ಮಾತಾಡಲು ಸ್ವಲ್ಪ ಹಿಂದೇಟು ಹಾಕುವ, ಇತರರಿಗೆ ನೋವಾಗದಿರಲೆಂದು ತಮ್ಮ ಭಾವನೆಗಳನ್ನು ಹತ್ತಿಕ್ಕುವ ಇವರು ಖಿನ್ನತೆಯಂತಹ ಸಮಸ್ಯೆಗೆ ಒಳಗಾಗದಂತೆ ಎಚ್ಚರ ವಹಿಸಬೇಕು. ಆಹಾರ ಪದ್ಧತಿಯಲ್ಲಿ ನಿಯಂತ್ರಣ ಇದ್ದರೆ ಒಳಿತು.

ಉದ್ಯೋಗ–ಪ್ರಬುದ್ಧ ರಾಜಕೀಯ, ಇವೆಂಟ್ ಮ್ಯಾನೇಜ್ಮೆಂಟ್, ಚಾರ್ಟೆಡ್ ಅಕೌಂಟೆಂಟ್, ಕೌನ್ಸೆಲಿಂಗ್, ಥೀಯೇಟರ್, ಕಲೆ, ಚೆಫ್, ಇಂಟೀರಿಯರ್ ಡಿಸೈನಿಂಗ್, ಶಿಕ್ಷಣ ಕ್ಷೇತ್ರಗಳಲ್ಲಿ ಮಿಂಚುವ ಸಾಧ್ಯತೆಗಳು ಬಹಳ. ಇವರೊಬ್ಬ ಉತ್ತಮ ಗ್ರಹಸ್ಥ/ಗೃಹಿಣಿಯೂ ಆಗಬಲ್ಲರು.

Leave a Comment