100 ಕ್ಕಿಂತ ಹೆಚ್ಚು ರೋಗ ಕಡಿಮೆ ಮಾಡುವ ಶಕ್ತಿ ಈ ತುಪ್ಪಕ್ಕೆ ಇದೆ!

ತುಪ್ಪ ತಿಂದರೆ ತೂಕ ಹೆಚ್ಚುತ್ತದೆ, ಅತಿಯಾದ ಕೊಬ್ಬು ತುಂಬುತ್ತೆ ಎಂದೆಲ್ಲ ಹೇಳುವವರೇ ಹೆಚ್ಚು. ಆದರೆ ಸತ್ಯ ಸಂಗತಿ ಬೇರೆಯೇ ಇದೆ. ತುಪ್ಪ ತಿನ್ನುವುದರಿಂದ ಕೊಬ್ಬು ಬೆಳೆಯುವುದೇ ಇಲ್ಲ!

ಓಹಿಯೋದ ಕ್ಲೇವ್‌ಲ್ಯಾಂಡ್‌ ಕ್ಲಿನಿಕ್‌ ನಡೆಸಿದ ಅಧ್ಯಯನದ ಪ್ರಕಾರ, ತುಪ್ಪದಿಂದ ದೇಹಕ್ಕೆ ಕೆಟ್ಟದಾಗುವುದಿಲ್ಲ ಎಂದು ಹೇಳಲಾಗಿದೆ.ಬೆಣ್ಣೆಯನ್ನು ಕುದಿಸುವುದರಿಂದ ತುಪ್ಪ ಸಿಗುತ್ತದೆ. ಈ ವೇಳೆ ಬೆಣ್ಣೆಯಲ್ಲಿರುವ ನೀರಿನಾಂಶ ಹೋಗುತ್ತದೆ. ಅತ್ಯುತ್ತಮ ಕೊಬ್ಬಿನಾಂಶವುಳ್ಳ ತುಪ್ಪವನ್ನು ಮಾತ್ರವೇ ನಾವು ಬಳಸಲು ಅಥವಾ ಸವಿಯಲು ಸಿಗುತ್ತದೆ.

ಭಾರತದಲ್ಲೇ ಪತ್ತೆಯಾದ ತುಪ್ಪ, ಇದೀಗ ಅತ್ಯಂತ ಆರೋಗ್ಯಕರ ಎಂಬುದು ಸಾಬೀತಾಗಿದೆ. ಅಷ್ಟೇ ಅಲ್ಲ, ಬೆಣ್ಣೆಗಿಂತ ತುಪ್ಪವೇ ಒಳ್ಳೆದು ಎಂಬುದೂ ಗೊತ್ತುಪಡಿಕೊಳ್ಳಲಾಗಿದೆ.ಕೆಲವರಿಗೆ ಬೆಣ್ಣೆ ಇಷ್ಟವಾಗುದಿಲ್ಲ. ಅದರಲ್ಲಿರುವ ಲ್ಯಾಕ್ಟೋಸ್‌ ಅಂಶ ಈ ರೀತಿಯಾಗಿ ಮಾಡುತ್ತದೆ. ಬೆಣ್ಣೆಯ ಬದಲಾಗಿ ತುಪ್ಪವನ್ನು ಬಳಸುವುದು ಅತ್ಯಂತ ಸೂಕ್ತ. ಹಾಲಿನ ವಿವಿಧ ಬಗೆಯ ಅಂಶಗಳು ಆವಿಯಾದ ಬಳಿಕವೇ ತುಪ್ಪ ತಯಾರಾಗುತ್ತದೆ. ಹೀಗಾಗಿ ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನೇ ತುಪ್ಪ ಹೊಂದುತ್ತದೆ.

ಜೀರ್ಣಕ್ರಿಯೆಗೆ ಒಳ್ಳೆಯದು!–ಹೊಟ್ಟೆ ಅಪ್‌ಸೆಟ್‌ ಆಗೋದು ಇಂದಿನ ದಿನದಲ್ಲಿ ಸಾಮಾನ್ಯ ಸಮಸ್ಯೆಯೇ! ಅಜೀರ್ಣ ಸೇರಿ ಇನ್ನಿತರ ಉದರ ಸಮಸ್ಯೆಗೆ ತುಪ್ಪ ಅತ್ಯುತ್ತಮ ಮನೆ ಮದ್ದು ಎನ್ನಲಾಗುತ್ತದೆ. ಬ್ಯುಟ್ರಿಕ್‌ ಆಸಿಡ್‌ನ ಅಂಶ ಇರುವ ತುಪ್ಪದಿಂದ ಕರುಳಿನ ಕೆಲಸ ಸುಗಮವಾಗುತ್ತದೆ.

ಗ್ಯಾಸ್ಟ್ರಿಕ್‌ ಸಮಸ್ಯೆಗೆ ಗುಡ್‌ಬೈ ಹೇಳಬಹುದು–ತುಪ್ಪ ತಿನ್ನುವುದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ದೂರ ಉಳಿಯಲು ಸಹಕಾರಿ. ಹಾಲಿನ ಅನೇಕ ಅನಗತ್ಯ ಸತ್ವಗಳು ತುಪ್ಪದಲ್ಲಿ ಇರದು. ಹೀಗಾಗಿ ತುಪ್ಪ ಆರೋಗ್ಯಕ್ಕೆ ಹಾನಿಕಾರವಲ್ಲ ಎನ್ನಲಾಗುತ್ತದೆ. ತುಪ್ಪ ಆರೋಗ್ಯಕರ ಎಂದು ಮೂರು ಹೊತ್ತು ತಿನ್ನುವುದರಿಂದ ಒಳಿತಾಗದು! ಅತಿಯಾದರೆ ಅಮೃತವೂ ವಿಷ ಎನ್ನುತ್ತಾರಲ್ಲ! ಹಾಗೆಯೇ.. ದಿನಕ್ಕೆ 2 ಚಮದಷ್ಟು ತುಪ್ಪ ದೇಹಕ್ಕೆ ಒಳ್ಳೆಯದೇ ಎನ್ನಲಾಗಿದೆ. ಹೀಗೆ ತೆಗೆದುಕೊಳ್ಳುವುದರಿಂದ ನಿಮ್ಮ ಜೀವನಶೈಲಿ, ಡಯಟ್‌ಗೆ ಪೂರಕವಾಗಿ ತುಪ್ಪ ಕೆಲಸ ಮಾಡುತ್ತದೆ.

ಒಮೆಗಾ -3 ಕೊಬ್ಬಿನಾಮ್ಲ ತುಪ್ಪದಲ್ಲಿ ಸಮೃದ್ಧವಾಗಿದೆ. ನರಮಂಡಲದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಆಯುರ್ವೇದ ಔಷಧಿಯ ರೂಪದಲ್ಲಿ ಬಳಸುತ್ತದೆ. ತುಪ್ಪ ಚರ್ಮಕ್ಕೆ ಅತ್ಯುತ್ತಮವಾದ ತೇವಕಾರಕ ಅಥವಾ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದನ್ನು ಆಯುರ್ವೇದ ಮಸಾಜ್‌ಗಳಲ್ಲಿಯೂ ಬಳಸಲಾಗುತ್ತದೆ.

ಕೆಲವರಿಗೆ ತುಪ್ಪ ತಿನ್ನಬಾರದು ಎಂದೂ ಹೇಳಿರುತ್ತಾರೆ. ಹೀಗಾಗಿ ಆಹಾರ ಕ್ರಮ, ಮನೆ ಔಷಧಿಗಳನ್ನು ಪ್ರಯೋಗಿಸುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳಿತು. ನಿಮ್ಮ ದೇಹದ ಅವರಿಗೆ ಚೆನ್ನಾಗಿ ಅರಿವಿರುವುದರಿಂದ ಅವರ ಸಲಹೆ ಪಡೆಯುವುದು ಒಳಿತು.

Leave a Comment