ಈ ಕಾಯಿಲೆ ಇದ್ದವರು ಯಾವುದೇ ಕಾರಣಕ್ಕೂ ರೇಫ್ರಿಜರೇಟರ್ ನಲ್ಲಿ ಇಟ್ಟು ವಸ್ತುವನ್ನು ತಿನ್ನಬಾರದು!

ಎಲ್ಲಾರ ಮನೆಯಲ್ಲೂ ಫ್ರಿಡ್ಜ್ ಇದ್ದೆ ಇರುತ್ತದೆ.ಹಾಳಾಗುವ ವಸ್ತುವನ್ನು ಕೂಡ ಫ್ರಿಡ್ಜ್ ನಲ್ಲಿ ಇಟ್ಟು ಅದು ಹಾಳಾಗದಂತೆ ಕೆಡದಂತೆ ತಡೆಯುತ್ತದೆ ಈ ಫ್ರಿಡ್ಜ್. ಅದನ್ನು ನಾವು ಮರುದಿನ ಬಳಕೆ ಮಾಡಲು ತುಂಬಾನೇ ಸೂಕ್ತವಾಗಿವೆ. ಹಾಗಾಗಿ ಕೆಲವೊಂದು ವಸ್ತುವನ್ನು ಫ್ರಿಡ್ಜ್ ನಲ್ಲಿ ಇಡಬಾರದು. ಒಂದು ವೇಳೆ ಇಟ್ಟರು ಫ್ರಿಡ್ಜ್ ನಲ್ಲಿ ಇಟ್ಟಿರುವ ಆಹಾರವನ್ನು ಸೇವನೆ ಮಾಡಬಾರದು.

ಬ್ರೆಡ್-ಫ್ರಿಡ್ಜ್ ನಲ್ಲಿ ನೀವು ಇಡಬಾರದ ಆಹಾರಗಳಲ್ಲಿ ಬ್ರೆಡ್ ಕೂಡ ಒಂದಾಗಿದೆ. ಬ್ರೆಡ್ ನ್ನು ನೀವು ಫ್ರಿಡ್ಜ್ ನಲ್ಲಿಇಟ್ಟರೆ ಅದು ಬೇಗನೆ ಕೆಡುವುದು ಮತ್ತು ಒಣಗುವುದು ಕೂಡ. ಒಣ ಹಾಗೂ ತಂಪಾಗಿರುವ ಜಾಗದಲ್ಲಿ ಬ್ರೆಡ್ ನ್ನು ಇಡಬೇಕು.

ಈರುಳ್ಳಿ–ಕೆಲವರು ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಡುವಂತಹ ಅಭ್ಯಾಸ ಬೆಳೆಸಿಕೊಂಡಿರುವರು. ಆದರೆ ಈರುಳ್ಳಿಯನ್ನು ಯಾವಾಗಲೂ ಒಣ ಹಾಗೂ ಕತ್ತಲಿನಲ್ಲಿ ಇಡಬೇಕು. ಅವುಗಳಿಗೆ ಮೊಳಕೆ ಬರದೆ, ಗಾಳಿಯಾಡದಂತೆ ಇಡಬೇಕು. ಅರ್ಧ ಈರುಳ್ಳಿಯನ್ನು ನೀವು ಫ್ರಿಡ್ಜ್ ನಲ್ಲಿ ಇಟ್ಟರೂ ಆಗ ನೀವು ಅದಕ್ಕೊಂದು ಫಾಯಿಲ್ ಪೇಪರ್ ಸುತ್ತಿಕೊಂಡು ಇಟ್ಟುಬಿಡಿ.

ಗಿಡಮೂಲಿಕೆಗಳು–ನೀವು ಯಾವುದೇ ತಾಜಾ ಗಿಡಮೂಲಿಕೆಗಳನ್ನು ಫ್ರಿಡ್ಜ್ ನಲ್ಲಿ ಇಡುತ್ತಲಿದ್ದರೆ ಆಗ ನೀವು ಇದನ್ನು ನಿಲ್ಲಿಸಬೇಕು. ಫ್ರಿಡ್ಜ್ ನಲ್ಲಿ ಇಟ್ಟಾಗ ಗಿಡಮೂಲಿಕೆಗಳು ಬೇಗನೆ ಒಣಗಿ ಹೋಗುವುದು ಎಂದು ತಿಳಿಯಿರಿ. ರೋಸ್ಮೇರಿ, ಥೈಮೆ ಮತ್ತು ಒರೆಗಾನೊವನ್ನು ನೀವು ಪೇಪರ್ ಟವೆಲ್ ನಲ್ಲಿ ಸುತ್ತಿಕೊಂಡು ಫ್ರಿಡ್ಜ್ ನಲ್ಲಿ ಇಡಬಹುದು.

ಜೇನುತುಪ್ಪ–ನೈಸರ್ಗಿಕವಾಗಿ ಸಿಗುವಂತಹ ಜೇನುತುಪ್ಪವನ್ನು ನೀವು ಅನೈಸರ್ಗಿಕವಾದ ಫ್ರಿಡ್ಜ್ ನಲ್ಲಿ ಇಟ್ಟರೆ ಆಗ ಅದರ ರುಚಿ ಕೆಡುವುದು. ಇದರ ನಿಜವಾದ ರುಚಿ ಹಾಗೂ ಸುವಾಸನೆ ಪಡೆಯಬೇಕಾದರೆ ನೀವು ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಇಡಬಾರದು.

ಅವಕಾಡೋ–ಅವಕಾಡೊ ಹಣ್ಣಾಗದೆ ಇದ್ದರೆ ಆಗ ನೀವು ಅದನ್ನು ಫ್ರಿಡ್ಜ್ ನಲ್ಲಿ ಇಡಲು ಹೋಗಬೇಡಿ. ಯಾಕೆಂದರೆ ಇದರಿಂದ ಅವಕಾಡೊ ಹಣ್ಣಾಗುವುದು ವಿಳಂಬವಾಗಬಹುದು. ಇದನ್ನು ನೀವು ಕೋಣೆಯ ತಾಪಮಾನದಲ್ಲಿ ಇಟ್ಟರೆ ಆಗ ಅದು ಬೇಗನೆ ಹಣ್ಣಾಗುವುದು.

ಆಲೂಗಡ್ಡೆ–ಆಲೂಗಡ್ಡೆಯನ್ನು ಯಾವಾಗಲೂ ನೀವು ಕೋಣೆಯ ತಾಪಮಾನದಲ್ಲಿ ಇಟ್ಟರೆ ಅದರಿಂದ ಸಿಗುವ ಪೋಷಕಾಂಶಗಳು ನಿಮಗೆ ಲಭ್ಯವಾಗುವುದು. ಫ್ರಿಡ್ಜ್ ನಲ್ಲಿ ಇಟ್ಟರೆ ಆಗ ತಂಪಾದ ತಾಪಮಾನಕ್ಕೆ ಬಟಾಟೆಯಲ್ಲಿನ ಪಿಷ್ಠವು ಸಕ್ಕರೆಯಾಗಿ ಪರಿವರ್ತನೆ ಆಗುವುದು. ಇದು ಮಧುಮೇಹಿಗಳಿಗೆ ಹಾನಿಕರ.

ಬೀಜಗಳು–ಬೀಜಗಳನ್ನು ನೀವು ಫ್ರಿಡ್ಜ್ ನಲ್ಲಿ ಇಡುವ ಬದಲು ಅದನ್ನು ಗಾಳಿಯಾಡದೆ ಇರುವಂತಹ ಒಂದು ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಒಳ್ಳೆಯದು. ಇದು ಬೀಜಗಳ ರುಚಿ ಹಾಗೂ ಸುವಾಸನೆಯನ್ನು ಕಾಪಾಡುವುದು. ನೀವು ಇದನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಶೇಖರಿಸಿಡುವುದಾದರೆ ಆಗ ನೀವು ಫ್ರಿಡ್ಜ್ ನಲ್ಲಿ ಇಡಬಹುದು.

ಚಾಕುಲೇಟ್–ಚಾಕಲೇಟ್ ನ್ನು ಫ್ರಿಡ್ಜ್ ನಲ್ಲಿಟ್ಟು ನಾವು ದೊಡ್ಡ ತಪ್ಪು ಮಾಡುತ್ತೇವೆ. ಯಾಕೆಂದರೆ ಫ್ರಿಡ್ಜ್ ನಲ್ಲಿ ಇಟ್ಟರೆ ಚಾಕಲೇಟ್ ರುಚಿ ಹಾಗೂ ಬಣ್ಣವು ಕೆಡುವುದು. ತಂಪು ಹಾಗೂ ಒಣಗಿರುವಂತಹ ಜಾಗದಲ್ಲಿ ಡಬ್ಬದಲ್ಲಿ ಗಾಳಿಯಾಡದಂತೆ ಚಾಕಲೇಟ್ ನ್ನು ಇಡಬಹುದು.

Leave a Comment