ಬಟ್ಟೆಗಳ ಮೇಲಿನ ಕಬ್ಬಿಣದ ತುಕ್ಕಿನ ಕಲೆಗಳನ್ನು ತೆಗೆಯುವ ಟಿಪ್ಸ್!

ಪ್ರತಿಯೊಬ್ಬರ ಮನೆಯಲ್ಲೂ ಡಿಸ್ಟಿಲ್ಡ್ ವಿನೆಗರ್ ಇದ್ದೇ ಇರುತ್ತದೆ. ನಾವು ಇದನ್ನು ವಿವಿಧ ಬಗೆಯಲ್ಲಿ ವಿವಿಧ ಕಾರಣಗಳಿಗೆ ಬಳಸುತ್ತೇವೆ. ಆದರೆ ಇದರಿಂದ ಕಲೆಗಳನ್ನು ಸಹ ಹೋಗಲಾಡಿಸಬಹುದು ಎಂಬುದನ್ನು ಇದು ಸಾಬೀತು ಮಾಡಿದೆ.

ವಿನೆಗರ್‌ನಲ್ಲಿ ಇರುವಂತಹ ಅಸಿಟಿಕ್ ಆಮ್ಲ ತುಂಬಾ ಮೈಲ್ಡ್ ಆಗಿದ್ದು, ನಿಮ್ಮ ಬಟ್ಟೆಯ ಫ್ಯಾಬ್ರಿಕ್ ಹಾಳಾಗದಂತೆ ಕಲೆಗಳನ್ನು ಇದು ನಿವಾರಣೆ ಮಾಡುತ್ತದೆ. ಇದನ್ನು ಬಳಸುವ ಪ್ರಕ್ರಿಯೆ ಕೂಡ ತುಂಬಾ ಸಿಂಪಲ್. ಹಾಗಿದ್ದರೆ ಮತ್ತೇಕೆ ತಡ? ಇದರ ಕರಾಮತ್ತನ್ನು ತಿಳಿದುಕೊಳ್ಳೋಣ ಬನ್ನಿ.

​ಮೊದಲು ಮಾಡಬೇಕಾದ ಕೆಲಸ–ನಿಮ್ಮ ಬಟ್ಟೆಯ ಮೇಲೆ ಉಂಟಾಗಿರುವ ಕಲೆ ಯಾವ ರೀತಿಯದ್ದು ಎಂದು ಮೊದಲು ತಿಳಿದುಕೊಳ್ಳಿ. ಅದರ ಗಾಢತೆಯ ಆಧಾರದ ಮೇಲೆ ನೀವು ಬಟ್ಟೆಯನ್ನು ಡೈಲ್ಯೂಟ್ ಮಾಡಿರುವ ವಿನೆಗರ್ ಅಥವಾ ಡೈಲ್ಯೂಟ್ ಮಾಡದೇ ಇರುವ ವಿನೆಗರ್ ನಲ್ಲಿ 15 ರಿಂದ 30 ನಿಮಿಷಗಳು ಅಥವಾ ಇಡೀ ರಾತ್ರಿ ನೆನೆಹಾಕಬೇಕು. ಉದಾಹರಣೆಗೆ,

ಕಾಫಿ ಅಥವಾ ಚಹಾ ಕಲೆಗಳು ಇದ್ದರೆ – 1/3 ವಿನೆಗರ್ ಮತ್ತು 2/3 ನೀರು ಮಿಶ್ರಣದಲ್ಲಿ ಬಟ್ಟೆ ನೆನೆಹಾಕಿ.ಹಸಿರು ಹುಲ್ಲಿನ ಕಲೆ ಇದ್ದರೆ – ಡೈಲ್ಯೂಟ್ ಮಾಡದೇ ಇರುವ ವಿನೆಗರ್ ನಲ್ಲಿ ಅರ್ಧ ಗಂಟೆ ನೆನೆಹಾಕಿ.ಗಮ್ ಕಲೆ ಇದ್ದರೆ – ಡೈಲ್ಯೂಟ್ ಮಾಡದೇ ಇರುವ ವಿನೆಗರ್ ನಲ್ಲಿ ಕಾಲು ಗಂಟೆ ನೆನೆಹಾಕಿ.ಜ್ಯೂಸ್ ಕಲೆಗಳು ಇದ್ದರೆ – 1/3 ವಿನೆಗರ್ ಮತ್ತು 2/3 ನೀರಿನ ಮಿಶ್ರಣದಲ್ಲಿ ನೆನೆಹಾಕಬೇಕು.ವಾಂತಿ ಕಲೆ ಇದ್ದರೆ – ಡೈಲ್ಯೂಟ್ ಮಾಡದೆ ಇರುವ ವಿನೆಗರ್ ನಲ್ಲಿ ನೆನೆಹಾಕಿ.ವಿನೆಗರ್ ನಿಂದ ಕಲೆಗಳನ್ನು ಹೋಗಲಾಡಿಸುವ ವಿಧಾನ

ಎಷ್ಟು ಪ್ರಯತ್ನಪಟ್ಟರೂ ಕಲೆಗಳು ಬಟ್ಟೆಯ ಮೇಲೆ ಬಿಡುತ್ತಿಲ್ಲ ಎಂದಾದರೆ ನೀವು ಕಲೆಯ ಮೇಲೆ ವಿನೆಗರ್ ನೇರವಾಗಿ ಹಾಕಿ ಸ್ವಲ್ಪ ಉಜ್ಜಿ ಅದನ್ನು ನೆನೆಯಲು ಬಿಡಿ. ಸ್ವಲ್ಪ ಜಾಸ್ತಿ ಹೊತ್ತು ನೆನೆದರೆ ಒಳ್ಳೆಯದು. ಇದನ್ನು ತೊಳೆಯುವಾಗ ನೀರು, ವಿನೆಗರ್ ಮತ್ತು ಬೇಕಿಂಗ್ ಸೋಡಾ ಮಿಶ್ರಣ ಮಾಡಿ ತೊಳೆಯಬೇಕು.

​ಉದಾಹರಣೆಗೆ,ಟೊಮೆಟೊ ರಸದ ಕಲೆ ಆಗಿದ್ದರೆ – ಕಲೆಯ ಮೇಲೆ ವಿನೆಗರ್ ಹಾಕಿ ನೆನೆಸಿ.ಸಾಸಿವೆ ಕಲೆ ಇದ್ದರೆ – ಇದೇ ತರಹ ಮಾಡಿ.ಕತ್ತಿನ ಪಟ್ಟಿ, ಕಂಕುಳು ಭಾಗದ ಕಲೆ – ವಿನೆಗರ್ ಸ್ಪ್ರೇ ಮಾಡಿ, ಉಜ್ಜಿ ನೆನೆಯಲು ಬಿಡಿ.ಬಟ್ಟೆ ಮೇಲೆ ರಕ್ತದ ಕಲೆಯಾಗಿದ್ದರೆ – ಕಲೆ ಮೇಲೆ ವಿನೆಗರ್ ಹಾಕಿ, 15 ನಿಮಿಷ ನೆನೆಯಲು ಬಿಡಿ.ಕಬ್ಬಿಣದ ತುಕ್ಕಿನ ಕಲೆ ಇದ್ದರೆ – ಹತ್ತಿಯ ಉಂಡೆಯಿಂದ ವಿನೆಗರ್ ಅದ್ದಿ ಉಜ್ಜಬೇಕು.

​ನೀರಿನಲ್ಲಿ ವಿನೆಗರ್ ಹಾಕಿ–ಇದು ಬಟ್ಟೆಯನ್ನು ಪಳಪಳ ಹೊಳೆಯುವಂತೆ ಮಾಡುವ ವಿಧಾನ. ಮೇಲಿನ ರೀತಿ ಬಟ್ಟೆಯಲ್ಲಿ ಗಾಢವಾದ ಕಲೆಗಳನ್ನು ಹೋಗಲಾಡಿಸಿದ ನಂತರ, ಬಟ್ಟೆ ಮತ್ತಷ್ಟು ಚೆನ್ನಾಗಿ ಕಾಣುವಂತೆ ಮಾಡಲು ಮತ್ತು ಅದರಿಂದ ಒಳ್ಳೆಯ ಸುವಾಸನೆ ಕಂಡುಕೊಳ್ಳಲು ನೀವು ನೀರಿಗೆ ಸ್ವಲ್ಪ ವಿನೆಗರ್ ಹಾಕಿ ಅದರಲ್ಲಿ ಬಟ್ಟೆಯನ್ನು ನೆನೆಹಾಕಬೇಕು.
​ಕೆಲವು ಅಂಶಗಳು ನೆನಪಿರಲಿ

ವಿನೆಗರ್ ನಿಂದ ಸ್ವಚ್ಛ ಮಾಡುವ ಮೊದಲು ಸಾಧ್ಯವಾದಷ್ಟು ಕಲೆಗಳನ್ನು ತೆಗೆಯಲು ಪ್ರಯತ್ನಿಸಿ.ವಿನೆಗರ್ ಜೊತೆಗೆ ನೀವು ಡಿಟರ್ಜೆಂಟ್ ಪೌಡರ್, ಬೇಕಿಂಗ್ ಸೋಡಾ ಅಥವಾ ಬೇರೆ ವಾಷಿಂಗ್ ಲಿಕ್ವಿಡ್ ಸಹ ಹಾಕಬಹುದು.ಕೆಲವೊಮ್ಮೆ ಒಂದೇ ಬಾರಿಗೆ ಕಲೆಗಳು ಬಿಡದೆ ಹೋಗಬಹುದು. ಆಗ ತಾಳ್ಮೆಯಿಂದ ಮತ್ತೊಮ್ಮೆ ಇದೇ ರೀತಿಯ ಪ್ರಕ್ರಿಯೆಯನ್ನು ಟ್ರೈ ಮಾಡಿ.

Leave a Comment