ವೈದಿಕ ಜ್ಯೋತಿಷ್ಯದಲ್ಲಿ ಪಾಪ ಗ್ರಹಗಳ ಕಾಟದಿಂದ ಯಾರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ರಾಹು-ಕೇತು ಗ್ರಹಗಳನ್ನು ಪಾಪ ಗ್ರಹಗಳು ಎಂದು ಕರೆಯಲಾಗುತ್ತದೆ. ಹಾಗೆಯೇ, ನವಗ್ರಹಗಳಲ್ಲಿ ಶನಿ ಗ್ರಹದಂತೆಯೇ ಈ ಗ್ರಹಗಳ ಚಲನೆಯಲ್ಲಿನ ಸಣ್ಣ ಬದಲಾವಣೆಯೂ ಸಹ 12 ರಾಶಿಗಳ ಜನರ ಜೀವನದಲ್ಲಿ ಬಹಳ ದೊಡ್ಡ ಪರಿಣಾಮವನ್ನು ಬೀರುತ್ತವೆ. ರಾಹು ಮತ್ತು ಕೇತು ಈ ಎರಡೂ ಕೂಡ ಸದಾ ಹಿಮ್ಮುಖವಾಗಿ ಚಲಿಸುವ ಗ್ರಹಗಳು. ಇವು ಪ್ರತಿ ಒಂದೂವರೆ ವರ್ಷಕ್ಕೊಮ್ಮೆ ತಮ್ಮ ರಾಶಿ ಚಕ್ರವನ್ನು ಬದಲಾಯಿಸುತ್ತವೆ.
ಪ್ರಸ್ತುತ ಮೇಷ ರಾಶಿಯಲ್ಲಿರುವ ರಾಹು ಗ್ರಹವು ಹೊಸ ವರ್ಷದಲ್ಲಿ 10 ತಿಂಗಳುಗಳ ಕಾಲ ಇದೇ ರಾಶಿಯಲ್ಲಿ ಉಳಿಯಲಿದ್ದಾನೆ. 2023 ರ ಅಕ್ಟೋಬರ್ 30 ರಂದು ರಾಹು ತನ್ನ ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. 2023 ರಲ್ಲಿ, ಅಕ್ಟೋಬರ್ ಮಾಸದವರೆಗೂ ಮೇಷ ರಾಶಿಯಲ್ಲಿರುವ ರಾಹುವು ನಾಲ್ಕು ರಾಶಿಯ ಜನರ ಜೀವನವನ್ನು ಬೆಳಗಲಿದ್ದಾನೆ. ಅವರು ಈ ಸಮಯದಲ್ಲಿ ಜೀವನದ ಪ್ರತಿ ರಂಗದಲ್ಲೂ ಸಕಾರಾತ್ಮಕತೆಯನ್ನು ಹರಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ…
2023ರ ಅಕ್ಟೋಬರ್ ವರೆಗೂ ಈ 4 ರಾಶಿಯವರಿಗೆ ಬಂಪರ್ ಲಾಭ ನೀಡಲಿದ್ದಾನೆ ರಾಹು: ಮಿಥುನ ರಾಶಿ: ಮೇಷ ರಾಶಿಯಲ್ಲಿರುವ ರಾಹು 2023 ರಲ್ಲಿ, ಅಕ್ಟೋಬರ್ ಮಾಸದವರೆಗೂ ಮಿಥುನ ರಾಶಿಯವರಿಗೆ ಸಾಕಷ್ಟು ಆರ್ಥಿಕ ಲಾಭವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದಾದರೂ ಆದಾಯದ ಹೊಸ ಮೂಲಗಳು ಸೃಷ್ಟಿಯಾಗುವುದರಿಂದ ನಿಮಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ಕರ್ಕಾಟಕ ರಾಶಿ: 2023ರಲ್ಲಿ ರಾಹು ಸಂಚಾರವು ಕರ್ಕಾಟಕ ರಾಶಿಯವರಿಗೆ ಹಠಾತ್ ವಿತ್ತೀಯ ಲಾಭವನ್ನು ನೀಡಲಿದೆ. ವೃತ್ತಿ ರಂಗದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಕೈತುಂಬಾ ಹಣ ಸಂಪಾದಿಸುವಿರಿ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಅದೃಷ್ಟ ಕೈ ಹಿಡಿಯಲಿದ್ದು ಯಶಸ್ಸಿನ ಉತ್ತುಂಗಕ್ಕೆ ಏರುವಿರಿ.
ವೃಶ್ಚಿಕ ರಾಶಿ: 2023ರ ಅಕ್ಟೋಬರ್ ವರೆಗೆ ಮೇಷ ರಾಶಿಯಲ್ಲಿ ರಾಹುವಿನ ಹಿಮ್ಮುಖ ಚಲನೆಯು ವೃಶ್ಚಿಕ ರಾಶಿಯ ಜನರ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಈ ಸಮಯದಲ್ಲಿ ನಿಮ್ಮ ವಿರೋಧಿಗಳ ವಿರುದ್ಧ ನೀವು ವಿಜಯಪತಾಕೆ ಹಾರಿಸುವಿರಿ. ಈ ಸಮಯದಲ್ಲಿ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗಲಿದ್ದು ಅದರ ಆಧಾರದ ಮೇಲೆ ನಿಮ್ಮೆಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಹೊಸ ಮೂಲಗಳಿಂದ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ವೃತ್ತಿ ಜೀವನದಲ್ಲಿ ನಿಮ್ಮ ಊಹೆಗೂ ಮೀರಿದ ದೊಡ್ಡ ಅವಕಾಶ ನಿಮ್ಮನ್ನು ಹರಸಿ ಬರಲಿದೆ. ಹೊಸ ವರ್ಷದಲ್ಲಿ ನೀವು ಸ್ಮರಣೀಯ ಪ್ರವಾಸ ಕೈಗೊಳ್ಳಬಹುದು.