UK Election Campaign: ರಿಷಿ ಸುನಕ್ ಯುಕೆಯಲ್ಲಿ ಕೇಜ್ರಿವಾಲ್ ಮಾದರಿ ಅಳವಡಿಸಿಕೊಳ್ಳುತ್ತಿದ್ದಾರೆಯೇ?

Rishi Sunak Election Campaign: ಯುಕೆ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಬ್ರಿಟನ್‌ನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾದರೆ, ಮನೆಗಳಿಗೆ ಹೆಚ್ಚುತ್ತಿರುವ ವಿದ್ಯುತ್ ಬಿಲ್‌ಗಳನ್ನು ನಿಭಾಯಿಸಲು ಜನರಿಗೆ ಸಹಾಯ ಮಾಡಲು ಹೆಚ್ಚಿನ ಹಣವನ್ನು ನೀಡುವುದಾಗಿ ಮಂಗಳವಾರ ಭರವಸೆ ನೀಡಿದ್ದಾರೆ. 42 ವರ್ಷದ ಭಾರತೀಯ ಮೂಲದ ಸುನಕ್ ಕೂಡ ಪ್ರಧಾನಿ ರೇಸ್‌ನಲ್ಲಿರುವ ಕನ್ಸರ್ವೇಟಿವ್ ಪಕ್ಷದ ನಾಯಕರಲ್ಲಿ ಒಬ್ಬರು. ಜನರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಾಲವನ್ನು ಸೀಮಿತಗೊಳಿಸುವ ಮೂಲಕ ಉಳಿತಾಯಕ್ಕೆ ಒತ್ತು ನೀಡಿದರು. ಬಹುತೇಕ ಇದೇ ಚುನಾವಣಾ ಭರವಸೆಯನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಚುನಾವಣಾ ಮೊದಲು ದೆಹಲಿಯಲ್ಲಿ ನೀಡಿದ್ದರು. ಅವರ ವ್ಯವಸ್ಥೆಯೂ ಬಹಳ ಮಟ್ಟಿಗೆ ಪರಿಣಾಮಕಾರಿಯಾಗಿತ್ತು. ಇದರ ಯಶಸ್ಸನ್ನು ಕಂಡ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಪಂಜಾಬ್ ನಲ್ಲೂ ಈ ಸೂತ್ರವನ್ನು ಚುನಾವಣಾ ಭರವಸೆಯಾಗಿ ಬಳಸಿತ್ತು. ಉಚಿತ ವಿದ್ಯುತ್ ಭರವಸೆಯನ್ನು ಮುಂದಿಟ್ಟುಕೊಂಡು ಪಂಜಾಬ್ ಚುನಾವಣೆಯಲ್ಲೂ ಗೆದ್ದಿದ್ದರು. ಈಗ ಇದೇ ಟ್ರಿಕ್ಸ್‌ನ್ನು ರಿಷಿ ಸುನಕ್‌ ಬಳಸುತ್ತಿದ್ದಾರೆ.

ಇದನ್ನೂ ಓದಿ : ಡೇಟಿಂಗ್‌ಗೆ 25 ಲಕ್ಷ.. ಕೈ ಬಿಟ್ರೆ 50 ಕೋಟಿ : ಪವಿತ್ರಾ ಲೋಕೇಶ್ – ನರೇಶ್ ನಡುವೆ ಒಪ್ಪಂದ!?

ಯುಕೆಯಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬಿಲ್ ಪ್ರಮುಖ ಸಮಸ್ಯೆ : 

ಯುಕೆ ವಿದ್ಯುತ್ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್ವೆಲ್ ಇನ್‌ಸೈಟ್ ಎಂಬ ಸಂಸ್ಥೆಯು ಈ ಚಳಿಗಾಲದಲ್ಲಿ ಏರುತ್ತಿರುವ ವಿದ್ಯುತ್ ಬಿಲ್‌ಗಳು ನಿರೀಕ್ಷೆಗಿಂತ ಹೆಚ್ಚಿರಬಹುದು ಎಂದು ಭವಿಷ್ಯ ನುಡಿದಿದೆ. ಯುಕೆಯಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬಿಲ್ ಪ್ರಮುಖ ಸಮಸ್ಯೆಯಾಗಿದ್ದು, ಇದನ್ನೇ ಮುಂದಿಟ್ಟುಕೊಂಡು ರಿಷಿ ಜನರ ಮುಂದೆ ಬಂದಿದ್ದಾರೆ. ಗಮನಾರ್ಹವಾಗಿ, ಬ್ರಿಟನ್‌ನಲ್ಲಿ ಪಿಎಂ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ನಂತರ, ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಚುನಾವಣಾ ಪ್ರಚಾರವನ್ನು ನಡೆಸುತ್ತಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ- ಬಿಜೆಪಿ ರಾಜ್ಯಾಧ್ಯಕ್ಷರ ಸ್ಪಷ್ಟನೆ

ಸೆಪ್ಟೆಂಬರ್‌ನಲ್ಲಿ ಪಕ್ಷದ ಸದಸ್ಯರ ಅಂತಿಮ ಮತದಾನದ ಮೂಲಕ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಾಗುತ್ತದೆ. ಹಲವು ಹಂತಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿಯವರೆಗಿನ ಹಂತಗಳಲ್ಲಿ, ಸುನಕ್ ಅವರ ಪ್ರತಿಸ್ಪರ್ಧಿ ವಿದೇಶಾಂಗ ಸಚಿವ ಲಿಜ್ ಟ್ರಸ್ ಮುನ್ನಡೆ ಸಾಧಿಸಿದ್ದಾರೆ. ಅಲ್ಲದೇ, ಇಲ್ಲಿಯವರೆಗೆ ನಡೆದ ಎರಡು ಅಭಿಪ್ರಾಯ ಸಮೀಕ್ಷೆಗಳಲ್ಲಿ, ಸುನಕ್‌ಗಿಂತ ಟ್ರಸ್ ಮುನ್ನಡೆ ಸಾಧಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment