ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೊರತೆ ಉಂಟಾದರೆ ಶೀತ ಕೆಮ್ಮಿನ ಸಮಸ್ಯೆ ಎದುರಾಗುತ್ತಿರುತ್ತವೆ. ಅನಾರೋಗ್ಯ ಎದುರಾಗುವುದು ಅನಿರೀಕ್ಷಿತವೇ ಆದರೂ ಇದು ನಿತ್ಯದ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಪ್ರತಿ ಬಾರಿ ಶೀತವಾದರೆ ಅದಕ್ಕೆ ಭಿನ್ನವಾದ ವೈರಸ್ ಕಾರಣವಾಗಿರುತ್ತದೆ. ರೋಗದಿಂದ ರಕ್ಷಿಸಿಕೊಳ್ಳಬೇಕಾದರೆ ರೋಗನಿರೋಧಕ ಶಕ್ತಿ ಪ್ರಬಲವಾಗಿರುವುದು ಅಗತ್ಯ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಔಷಧಿಗಳನ್ನು ಮನೆಯಲ್ಲಿಯೇ ತಯಾರು ಮಾಡಿಕೊಳ್ಳಬಹುದು. ಈ ರೀತಿ ಸಮಸ್ಯೆಗೆ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಳುಮೆಣಸಿನ ಪುಡಿಯನ್ನು ಕೊಂಚ ಬೆಚ್ಚಗೆ ನೀರಿಗೆ ಬೆರೆಸಿ ಕುಡಿಯುವುದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಪರಿಹಾರವಾಗಿದೆ.
ಈ ಮೆಣಸು ನೀರನ್ನು ಕನಿಷ್ಠ ಒಂದು ತಿಂಗಳು ಕುಡಿಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಂದ ಮುಕ್ತವಾಗಬಹುದು. ಹಾಗಾದರೆ ಈ ಮೆಣಸಿನಕಾಳಿನ ನೀರಿನಿಂದ ಸಿಗುವ ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.1, ಈ ದ್ರವದ ಸೇವನೆಯಿಂದ ದೇಹದ ಜೀವಕೋಶಗಳಿಗೆ ಪೋಷಕಾಂಶ ದೊರಕುತ್ತದೆ. ಅವುಗಳಿಗೆ ಆಗುವ ಹಾನಿಯನ್ನು ರಕ್ಷಿಸುತ್ತದೆ. ಹಲವಾರು ಬಗೆಯ ಸೋಂಕುಗಳಿಂದ ರಕ್ಷಿಸುತ್ತದೆ.
2, ಈ ಕಾಳುಮೆಣಸಿನ ನೀರು ದೇಹದಲ್ಲಿ ಸಂಗ್ರಹಗೊಳ್ಳುವ ಎಲ್ಲಾ ಜೀವಾಣು ಮತ್ತು ರಾಸಾಯನಿಕಗಳನ್ನು ಹೊರಹಾಕುತ್ತದೆ.ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ಹೊಟ್ಟೆಯ ಸಮಸ್ಯೆಯನ್ನು ದೂರ ಇಡಲು ನೆರವಾಗುತ್ತದೆ.3, ಈ ಕಾಳುಮೆಣಸಿನ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಂಡು ಹೆಚ್ಚಿನ ಕ್ಯಾಲೋರಿಗಳನ್ನು ಬಳಸಿಕೊಳ್ಳುತ್ತದೆ.ಈ ಮೂಲಕ ದೇಹ ತೂಕ ಇಳಿಸುವ ಪ್ರಯತ್ನಗಳು ಇನ್ನಷ್ಟು ಶೀಘ್ರವಾಗಿ ನೆರವೇರುತ್ತದೆ.ಕೇವಲ ಒಂದೇ ತಿಂಗಳಿನಲ್ಲಿ ಇದರ ಪ್ರಭಾವ ಪ್ರಾರಂಭವಾಗುತ್ತದೆ.
4, ಇನ್ನು ಉಗುರು ಬೆಚ್ಚನೆ ನೀರು ಮತ್ತು ಕಾಳುಮೆಣಸಿನ ಪುಡಿ ಜೊತೆಗೂಡಿದಾಗ ಕರುಳಿನ ಅರೋಗ್ಯಕ್ಕೆ ಅಸಾಧಾರಣ ಪ್ರಯೋಜನ ಲಭಿಸುತ್ತದೆ. ಇದರ ಪ್ರಯೋಜನಗಳಂತೆಯೇ ಚರ್ಮದ ಕೋಶವನ್ನು ಪೋಷಣೆ ಮಾಡುತ್ತದೆ ಮತ್ತು ಕೋಶಗಳಿಗೆ ಶಕ್ತಿಯನ್ನು ನೀಡುತ್ತದೆ.5, ಇನ್ನು ದೀರ್ಘಕಾಲದಿಂದ ಮಲಬದ್ಧತೆಯಿಂದ ಬಳಲುತ್ತಿರುವವರು ಈ ಕಾಳುಮೆಣಸಿನ ನೀರನ್ನು ಪ್ರತಿದಿನ ಕುಡಿಯಬೇಕು. ಇದು ದೇಹದಲ್ಲಿ ಕಲ್ಮಶವನ್ನು ಹೊರ ಹಾಕುವುದರ ಮೂಲಕ ನಿಮ್ಮ ಹೊಟ್ಟೆಯು ಹಗುರ ಆಗಿರುತ್ತದೆ.
6, ಇನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ನಿಮ್ಮ ಚೈತನ್ಯದ ಮಟ್ಟವು ದ್ವಿಗುಣವಾಗುತ್ತದೆ.ಇದು ನಿಮ್ಮ ಜೀವಾರಾಸಾಯನಿಕ ಕ್ರಿಯೆಗೆ ಉತ್ತೇಜನ ನೀಡುತ್ತದೆ.7,ಕಾಳುಮೆಣಸನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಹಲವಾರು ಅಡ್ಡಪರಿಣಾಮಗಳು ಇವೇ. ಇದು ಗ್ಯಾಸ್ಟಿಕ್ ಸಮಸ್ಯೆ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣ ಆಗುತ್ತದೆ. ಇದರ ಪ್ರಮಾಣ ಅಧಿಕವಾಗಿರುವುದು ಕರುಳಿನ ಗೋಡೆಗಳಲ್ಲಿ ಉರಿಯನ್ನು ಉಂಟು ಮಾಡುತ್ತದೆ. ಮುಖ್ಯವಾಗಿ ಗರ್ಭಿಣಿಯರು ಕಾಳುಮೆಣಸನ್ನು ಸೇವನೆ ಮಾಡಬಾರದು.