ಈ ಜಗತ್ತಿನ ಲಕ್ಷಾಂತರ ಜನರು ತಮ್ಮ ಚರ್ಮ ಮತ್ತು ದೇಹದ ಬಗ್ಗೆ ಬಹಳ ಕಾಳಜಿ ವಹಿಸುವವರೂ ಮತ್ತು ಜಾಗೃತರೂ ಆಗಿದ್ದಾರೆ. ಚರ್ಮದ ವಿವಿಧ ಸಮಸ್ಯೆಗಳಾದ ನೆರಿಗೆಗಳು, ಚಿಕ್ಕ ಗುಳ್ಳೆಗಳು, ಮೊಡವೆಗಳು, ಹೆರಿಗೆಯ ಗುರುತುಗಳು ಮತ್ತು ಇತರ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡುವ ಮಾರ್ಗಗಳ ಬಗ್ಗೆ ಅವರು ಚಿಂತಿಸುತ್ತಲೇ ಇರುತ್ತಾರೆ. ಒಂದು ವೇಳೆ, 20-21 ನೇ ವಯಸ್ಸಿನಗೇ ನಿಮ್ಮ ಮುಖದಲ್ಲಿ ನೆರಿಗೆಗಳು ಕಾಣಿಸಿಕೊಂಡಿದ್ದು ಚಿಂತೆಯಾಗಿದೆಯೇ? ಅಥವಾ ನಿಮ್ಮ ಕುಟುಂಬದ ಸದಸ್ಯರಲ್ಲಿ ಕೆಲವರಿಗೆ ವೃದ್ದಾಪ್ಯ ಆವರಿಸುವ ಮುನ್ನವೇ ತ್ವಚೆಯಲ್ಲಿ ನೆರಿಗೆ ಮೂಡುವ ಪರಿಯನ್ನು ಗಮನಿಸಿದ್ದೀರಾ? ಇದಕ್ಕೂ ಮೊದಲು ನೆರಿಗೆಗಳು ಎಂದರೇನು ಎಂಬುದನ್ನು ನೋಡೋಣ.
ಈ ವಿಷಯವು ಮಹಿಳೆಯರಲ್ಲಿ ಸಾಮಾನ್ಯವಾಗಿದೆ ಮತ್ತು ಹೆಚ್ಚಿನ ಪುರುಷರಲ್ಲಿ ಇದು ಸಾಮಾನ್ಯವಾಗಿ ಕಾಣಬರುವುದಿಲ್ಲ. ನೆರಿಗೆಗಳು ಸ್ವತಃ ಗಮನಿಸಬಹುದಾದ ಮತ್ತು ಸ್ವಯಂ ಚಿಕಿತ್ಸೆ ಪಡೆಯಬಲ್ಲ ಸಮಸ್ಯೆಗಳಾಗಿವೆ. ಅಂತಹ ಸಂದರ್ಭಗಳಲ್ಲಿ, ಮನೆಮದ್ದುಗಳು ಸಹ ನಿಮ್ಮ ಉತ್ತಮ ಸ್ನೇಹಿತರಾಗಬಹುದು. ನೆರಿಗೆಗಳನ್ನು ನಿವಾರಿಸುವ ಕೆಲವು ಅದ್ಭುತ ನೈಸರ್ಗಿಕ ಚಿಕಿತ್ಸೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:
ಮೊದಲು ಒಂದು ಬೌಲ್ ಗೆ ಅರ್ಧ ಚಮಚ ವ್ಯಸೇಲಿನ್ ತೆಗೆದುಕೊಳ್ಳಿ. ಈದು ಸ್ಕಿನ್ ನಲ್ಲಿ ph ಲೆವೆಲ್ ಅನ್ನು ಮೇಂಟೈನ್ ಮಾಡುತ್ತದೆ. ಇದರಿಂದ ನೆರಿಗೆ ಕೂಡ ಕಡಿಮೆ ಆಗುತ್ತದೆ. ಇದಕ್ಕೆ ಅರ್ಧ ಚಮಚ ಗ್ಲಿಸಾರಿನ್ ಅನ್ನು ಹಾಕಿ. ಇದು ನೆರಿಗೆ ಹೋಗುವುದಕೆ ತುಂಬಾನೇ ಉಪಯೋಗಕರಿ. ಇದಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಹಾಕಿಕೊಳ್ಳಿ. ಇದರಲ್ಲಿ ವಿಟಮಿನ್ ಈ ಇರುವುದರಿಂದ ಇದು ಸ್ಕಿನ್ ವೈಟ್ನಿಂಗ್ ಗೆ ತುಂಬಾ ಒಳ್ಳೆಯದು.
ಸ್ಕಿನ್ ಗೆ ಪೋಲ್ಯೂಷನ್ ಯಿಂದ ಆದ ಹಾನಿಯನ್ನು ಸರಿ ಮಾಡುತ್ತದೆ. ನಂತರ ಇದನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿ ಕೈ ಕಾಲು ವಾಶ್ ಮಾಡಿ ಹಚ್ಚಬೇಕು. ಒಂದು ಗಂಟೆ ಹಾಗೆ ಬಿಟ್ಟು ವಾಶ್ ಮಾಡಿ. ವಾಶ್ ಮಾಡುವಾಗ ಸೋಪ್ ಅನ್ನು ಬಳಸಬಾರದು. ಪ್ರತಿದಿನ ಇದೆ ರೀತಿ ಫಾಲೋ ಮಾಡಿ. ಬೇಗನೆ ಒಳ್ಳೆಯ ರಿಸಲ್ಟ್ ನಿಮಗೆ ಸಿಗುತ್ತದೆ. ಇದರಿಂದ ನೆರಿಗೆ ಸಮಸ್ಸೆ ಮತ್ತು ಒಡೆದ ಹಿಮ್ಮಡಿಯನ್ನು ಸಹ ಸರಿ ಮಾಡಬಹುದು.