Viral News: ಬೆಂಗಳೂರಿನ ರಸ್ತೆಯಲ್ಲಿ ವಿಚಿತ್ರ ಗರುತು; ಸೋಷಿಯಲ್ ಮೀಡಿಯಾದಲ್ಲಿ ವೈರಲ್!

ಬೆಂಗಳೂರು: ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತವೆ. ಸಾಮಾಜಿಕ ಮಾಧ‍್ಯಮ ಬಳಸಿಕೊಂಡು ಕೆಲವರು ಸರ್ಕಾರವನ್ನು ಪ್ರಶ್ನಿಸುತ್ತಾರೆ. ಜನಸಾಮಾನ್ಯರು ಕೇಳುವ ಪ್ರಶ್ನೆಗೆ ಕೆಲವೊಮ್ಮೆ ಖುದ್ದು ಸರ್ಕಾರಿ ಅಧಿಕಾರಿಗಳೇ ಉತ್ತರ ನೀಡುತ್ತಾರೆ. ಇತ್ತೀಚೆಗಷ್ಟೇ ಟ್ವಿಟರ್‍ನಲ್ಲಿ ವಿಚಿತ್ರ ಫೋಟೋ ಶೇರ್ ಮಾಡುವ ಮೂಲಕ ಬೆಂಗಳೂರು ಪೊಲೀಸರಿಗೆ ಪ್ರಶ್ನೆ ಕೇಳಲಾಗಿತ್ತು. ಇದೀಗ ಈ ಪ್ರಶ್ನೆಗೆ ಬೆಂಗಳೂರು ಪೊಲೀಸರಿಂದಲೇ ಉತ್ತರ ಬಂದಿದೆ. ವಾಸ್ತವವಾಗಿ ಈ ಫೋಟೋದಲ್ಲಿ ರಸ್ತೆಯ ಹೊಸ ಟ್ರಾಫಿಕ್ ಚಿಹ್ನೆಯನ್ನು ತೋರಿಸಲಾಗಿತ್ತು. 

ರಸ್ತೆಯಲ್ಲಿ ಕಂಡುಬಂದ ವಿಚಿತ್ರ ಗುರುತು

ಈ ಮೇಲಿನ ಫೋಟೋದಲ್ಲಿರುವ ಟ್ರಾಫಿಕ್ ಬೋರ್ಡ್‍ನಲ್ಲಿ ನೀವು 4 ಕಪ್ಪು ಚುಕ್ಕೆಗಳನ್ನು ಕಾಣಬಹುದು. ‘ಇದು ಯಾವ ಟ್ರಾಫಿಕ್ ಚಿಹ್ನೆ’ ಎಂದು ಪ್ರಶ್ನಿಸಿ ಈ ಫೋಟೋಗೆ ಕ್ಯಾಪ್ಶನ್ ಬರೆಯಲಾಗಿದೆ. ಈ ಫೋಟೋವನ್ನು ಟ್ವೀಟ್ ಮಾಡಿರುವ ವ್ಯಕ್ತಿ ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಇದು ಯಾವ ಸಿಗ್ನಲ್ ಎಂದು ಅವರು ಪೊಲೀಸರಿಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Siddaramotsava: ‘ಕಾಂಗ್ರೆಸ್ಸಿಗರೇ ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ!?’

ವ್ಯಕ್ತಿಯ ಪ್ರಶ್ನೆಗೆ ಪೊಲೀಸರ ಉತ್ತರ

ಹೊಸ ಟ್ರಾಫಿಕ್ ಸಿಗ್ನಲ್ ಕುರಿತು ವ್ಯಕ್ತಿ ಕೇಳಿದ ಪ್ರಶ್ನೆಗೆ ಬೆಂಗಳೂರು ಸಂಚಾರಿ ಪೊಲೀಸರು ಉತ್ತರಿಸಿದ್ದಾರೆ. ‘ಇದೊಂದು ಎಚ್ಚರಿಕೆಯ ಫಲಕವಾಗಿದ್ದು, ರಸ್ತೆಯಲ್ಲಿ ಅಂಧರು ಸಂಚರಿಸಬಹುದು. ಹೀಗಾಗಿ ವಾಹನ ಚಾಲನೆ ವೇಳೆ ಎಚ್ಚರಿಕೆ ವಹಿಸಿ’ ಅನ್ನೋದರ ಬಗ್ಗೆ ಈ ಸಿಗ್ನಲ್ ತಿಳಿಸುತ್ತದೆ. ಹೋಪ್ ಫಾರ್ಮ್ ಜಂಕ್ಷನ್‌ನಲ್ಲಿ (ಅಂಧರಿಗೆ) ಶಾಲೆ ಇದ್ದು, ಅಲ್ಲಿ ಈ ಬೋರ್ಡ್ ಅಳವಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  

ಸಖತ್ ವೈರಲ್ ಆಗಿರುವ ಪೋಟೋ  

ಈ ಎರಡೂ ಟ್ವೀಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಈ ಟ್ರಾಫಿಕ್ ಚಿಹ್ನೆಯ ಬಗ್ಗೆ ಸಾಕಷ್ಟು ಜನರು ಗೊಂದಲಕ್ಕೊಳಗಾಗಿದ್ದರು, ಆದರೆ ಟ್ರಾಫಿಕ್ ಪೊಲೀಸರು ತಮ್ಮ ಜವಾಬ್ದಾರಿ ಅರಿತು ಈ ಚಿಹ್ನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದಾರೆ. ಈ ಫೋಟೋದಲ್ಲಿನ ಟ್ರಾಫಿಕ್ ಸಿಗ್ನಲ್‍ನ ಅರ್ಥವನ್ನು ಜನರಿಗೆ ತಿಳಿಸಿದ್ದಾರೆ.  

ಇದನ್ನೂ ಓದಿ: Ashwath Narayan : ‘ಸಿದ್ದರಾಮಯ್ಯ ಇಂದು ತಮ್ಮ ರಾಜಕೀಯ ನಿವೃತ್ತಿ ಘೋಷಿಸಲಿ’

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment