Viral Video: ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಸನ್ಯಾಸಿಯ ಈ ಬೆಟ್ಟ ಹತ್ತುವ ಪರಿಗೆ ನೀವೂ ಭೇಷ್ ಹೇಳಲೇಬೇಕು

Trending Monk: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಕೆಲ ವಿಡಿಯೋಗಳನ್ನು ನೋಡಿದರೆ, ನಮ್ಮ ಕಣ್ಣುಗಳ ಮೇಲೆ ನಮ್ಮ ನಂಬಿಕೆಯೇ ಹೊರಟುಹೋಗುತ್ತದೆ.  ಅಂತಹುದೇ ಒಂದು ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರ ಭಾವನೆಗಳನ್ನು ಕೆರಳಿಸುತ್ತಿದೆ. ಅಂದಹಾಗೆ, ಯೋಗದಲ್ಲಿ ತುಂಬಾ ಕ್ರಿಯಾಶೀಲರಾಗಿರುವ ಮತ್ತು ಧ್ಯಾನ ಮಾಡುವ ಅನೇಕ ಸನ್ಯಾಸಿಗಳನ್ನು ನೀವು ನೋಡಿರಬೇಕು. ಆದರೆ ಈ ವಿಡಿಯೋದಲ್ಲಿ ಇರುವ ಧೈರ್ಯಶಾಲಿ ಸನ್ಯಾಸಿಯನ್ನು ನೀವು ನೋಡುವುದು ತೀರಾ ಅಪರೂಪ.

ನೆಟ್ಟಿಗರನ್ನು ನಿಬ್ಬೇರಗಾಗಿಸಿದ ಸನ್ಯಾಸಿ
ನೀವೂ ಯಾವುದೋ ಒಂದು ಹಂತದಲ್ಲಿ ಮಲೆನಾಡಿನಲ್ಲಿ ಪ್ರವಾಸ ಕೈಗೊಂಡಾಗ, ಮಲೆನಾಡಿನ ರಸ್ತೆಗಳಲ್ಲಿ ಸಂಚರಿಸುವುದೇ ಒಂದು ಚಾಲೆಂಜಿಂಗ್ ಆಗಿರುತ್ತದೆ. ಇದೇ ಕಾರಣದಿಂದ ಪರ್ವತಗಳಲ್ಲಿ ವಾಸಿಸುವ ಹೆಚ್ಚಿನ ಜನರು ಸಕ್ರೀಯರಗಿರುತ್ತಾರೆ. ಏಕೆಂದರೆ ಇದರಿಂದ ಅವರು ಉತ್ತಮ ವ್ಯಾಯಾಮವನ್ನು ಹೊಂದುತ್ತಾರೆ. ನಾವು ಈ ರೀತಿ ಏಕೆ ಹೇಳುತ್ತಿದ್ದೇವೆ ಎಂಬುದನ್ನು ತಿಳಿಯುವುದಕ್ಕೂ ಮುನ್ನ ನೀವೂ ಈ ವೈರಲ್ ವಿಡಿಯೋ ಅನ್ನು ಒಮ್ಮೆ ನೋಡಲೇಬೇಕು…

ಇದನ್ನೂ ಓದಿ-Viral Video : ಶಾಸ್ತ್ರ ಎಂದು ಅವಕಾಶ ಕೊಟ್ಟಿದ್ದೇ ತಪ್ಪಾಯಿತು ಎಲ್ಲರೂ ಮುಖ ಮುಚ್ಚಿಕೊಳ್ಳುವಂತೆ ವರ್ತಿಸಿದ ಜೋಡಿ!

ಪರ್ವತವನ್ನು ಇಂತಹ ವಿಧಾನ ನೀವು ಹಿಂದೆಂದೂ ನೋಡಿರಿಲಿಕ್ಕಿಲ್ಲ
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೀವೂ ಬಹುತೇಕ ನೇರವಾಗಿರುವ ಪರ್ವತವನ್ನು ಏರುತ್ತಿರುವ ಸಾಧು ಅಥವಾ ಸನ್ಯಾಸಿಯನ್ನು ಗಮನಿಸಬಹುದು. ಆಶ್ಚರ್ಯದ ಸಂಗತಿ ಎಂದರೆ ಈ ಸನ್ಯಾಸಿ ಪರ್ವತಾರೋಹಣ ಮಾಡುವಾಗ ಯಾವುದೇ ರೀತಿಯ  ಸುರಕ್ಷತಾ ಸರಂಜಾಮು ಧರೀಸದೆ ಸಲೀಸಾಗಿ ಪರ್ವತವನ್ನು ಏರುತ್ತಿದ್ದಾನೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಸುಮ್ಮನೆ ಬೆಟ್ಟ ಹತ್ತಬೇಕು, ಅದಕ್ಕೆ ಏನೂ ಬೇಕಾಗುವುದಿಲ್ಲ ಎಂದು ಬರೆಯಲಾಗಿದೆ. ಈ ವೀಡಿಯೋ ನೋಡಿದ ತುಂಬಾ ಜನ ತರೆಹೆವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 

ಇದನ್ನೂ ಓದಿ-Viral Video: ಬಿರಿಯಾನಿ ಪ್ರಿಯರು ಈ ವಿಡಿಯೋ ನೋಡಬೇಡಿ: ಹೃದಯ ಒಡೆಯುವುದು ಗ್ಯಾರಂಟಿ!

ಸಾಕಷ್ಟು ವೀಕ್ಷಣೆಗಳನ್ನು ಪಡೆದುಕೊಂಡ ವಿಡಿಯೋ
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಲ್ಲಲಾಗಿದೆ. ಅಷ್ಟೇ ಅಲ್ಲ, ಇದುವರೆಗೆ ಲಕ್ಷಾಂತರ ಜನರು (ಸೋಶಿಯಲ್ ಮೀಡಿಯಾ ಬಳಕೆದಾರರು) ಈ ವೀಡಿಯೊವನ್ನು ವೀಕ್ಷಿಸಿದ್ದಾರೆ ಮತ್ತು ಸಾವಿರಾರು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಅನೇಕ ಜನರು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದನ್ನು ನೀವು ನೋಡಬಹುದು. ಕೆಲವು ಬಳಕೆದಾರರು ಯೋಗವೇ ಈ ಫಿಟ್‌ನೆಸ್‌ಗೆ ಕಾರಣವೆಂದು ಕರೆದರೆ, ಕೆಲವರು ಸನ್ಯಾಸಿಯನ್ನು ಸೂಪರ್ ಹ್ಯೂಮನ್ ಎಂದು ಕರೆಯುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment