ಮೀನುಗಳನ್ನು ಮನೆಯಲ್ಲಿ ಸಾಕುವುದರ ಲಾಭವೇನು!

ದೊಡ್ಡ ದೊಡ್ಡ ಶ್ರೀಮಂತರ ಮನೆಯಲ್ಲಿ ಅಕ್ವೇರಿಯಂಗಳನ್ನ ನಾವು ನೋಡಿರ್ತೀವಿ. ಮನೆಗೆ ಡಿಫ್ರೆಂಟ್ ಆದ ಲುಕ್ ಕೊಡೊದಲ್ದೆ, ಅದೃಷ್ಟ ಕೊಡುವ ಮೀನುಗಳು ಕೂಡ ಅದ್ರಲ್ಲಿರುತ್ತದೆ. ಯಾಕಂದ್ರೆ, ಕೆಲ ಬಣ್ಣದ ಮೀನುಗಳು ಅದೃಷ್ಟದ ಮೀನುಗಳಾಗಿರುತ್ತದೆ. ಇವತ್ತು ನಾವು ಅಕ್ವೇರಿಯಂ ಇಡೋದು ಲಾಭಾನೋ ನಷ್ಟಾನೋ..? ಯಾವ ಮೀನು ಸಾಕಿದ್ರೆ ಉತ್ತಮ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿಸಿಕೊಡಲಿದ್ದೇವೆ.

ಅಕ್ವೇರಿಯಂ ಬರೀ ಚಂದಕ್ಕೆ ಇಡುವುದಲ್ಲ. ಅಕ್ವೇರಿಯಂ ಇಡುವುದರಿಂದ ಮನೆಯ ಅಭಿವೃದ್ಧಿಯಾಗುತ್ತದೆ. ಆದ್ರೆ ಆ ಮೀನನ್ನ ಸಾಕುವ ರೀತಿ ಸರಿಯಾಗಿರಬೇಕು. ಅಕ್ವೇರಿಯಂ ಅನ್ನ ಯಾವಾಗಲೂ ವಾಯುವ್ಯ ಮೂಲೆಯಲ್ಲಿರಿಸಬೇಕು.

ಇನ್ನು ಮನೆಯಲ್ಲಿ ಮಾಟ ಮಂತ್ರ ದೋಷಗಳಿದ್ದರೆ, ನಕಾರಾತ್ಮಕ ಶಕ್ತಿಗಳ ಪ್ರಭಾವ ಜೋರಾಗಿದ್ದರೆ, ಕಪ್ಪು ಬಣ್ಣದ ಮೀನನ್ನು ಸಾಕಬೇಕು. ಇದರಿಂದ ನಮಗೆ ತಗುಲಬಹುದಾದ ದುಷ್ಟ ಶಕ್ತಿಗಳು ಕಪ್ಪು ಮೀನಿಗೆ ತಗುಲಿ ಅವುಗಳನ್ನು ಸಾವನ್ನಪ್ಪುತ್ತದೆ. ಹೀಗೆ ಪದೇ ಪದೇ ಮೀನುಗಳು ಸಾಯುತ್ತಿದ್ದರೆ, ನಮ್ಮ ಮೇಲೆ ಯಾರೋ ಮಾಟ ಮಾಡಿಸಿದ್ದಾರೆ. ದುಷ್ಟ ಶಕ್ತಿಗಳು ಮನೆಯಲ್ಲಿ ಓಡಾಡುತ್ತಿದೆ ಎಂದರ್ಥ. ಆದ್ದರಿಂದ ಮೀನುಗಳು ಸಾಯುತ್ತಿದ್ದರೆ, ಪದೇ ಪದೇ ಅದೇ ಬಣ್ಣದ ಮೀನುಗಳನ್ನ ತಂದು ಅಕ್ವೇರಿಯಂನಲ್ಲಿ ಸೇರಿಸಬೇಕು.

ಗೋಲ್ಡನ್ ಕಲರ್ ಫಿಶ್, ಅಂದ್ರೆ ಬಂಗಾರದ ಬಣ್ಣದ ಮೀನನ್ನ ಸಾಕಿದ್ರೆ ಮನೆಯ ಅಭಿವೃದ್ಧಿ ಉತ್ತವಾಗಿರುತ್ತದೆ. ಇದರ ಜೊತೆಗೆ ಬೇರೆ ಬಣ್ಣದ ಮೀನುಗಳನ್ನ ಸಾಕಿದರೂ ಉತ್ತಮ. ಅಕ್ವೇರಿಯಂ ತಂದೇ ಮೀನನ್ನು ಸಾಕಬೇಕೆಂದಿಲ್ಲ. ಒಂದು ದೊಡ್ಡ ಗಾಜಿನ ಮಡಿಕೆಯಲ್ಲಿ ಮೀನು ಸಾಕಿದರೂ ಉತ್ತಮವೇ. ಇನ್ನು ಮೀನು ಸಾಕುವುದರಿಂದ ಆಗುವ ಲಾಭವೇನು ಅನ್ನೋದನ್ನ ನೋಡೋದಾದ್ರೆ, ಮೀನಿಗೆ ಉತ್ತಮ ಆಹಾರ ನೀಡುವುದರಿಂದ ಮನೆ ಜನರಿಗೆ ಯಶಸ್ಸು ಸಿಗುತ್ತದೆ. ಸುಖ ಶಾಂತಿ ನೆಮ್ಮದಿಯಿಂದ ಜೀವನ ನಡೆಸುತ್ತಾರೆ.

Leave a Comment