ಹಲ್ಲಿಯು ಮನುಷ್ಯನ ಮೇಲೆ ಬಿದ್ದಾಗ ಆ ಮನುಷ್ಯನಲ್ಲಿ ಹಲವಾರು ರೀತಿಯ ಪ್ರಶ್ನೆಗಳು ಉದ್ಭವವಾಗುತ್ತದೆ, ಇಷ್ಟೇ ಅಲ್ಲದೇ ಹಲ್ಲಿಯು ಮನುಷ್ಯನ ಯಾವ ಭಾಗದಲ್ಲಿ ಬಿದ್ದರೆ ಯಾವ ಸಂಕೇತಗಳು ದೊರೆಯುತ್ತದೆ ಹಾಗೂ ಹಲ್ಲಿಯ ಧ್ವನಿಯನ್ನು ಕೇಳುವುದರಿಂದ ಏನಾಗುತ್ತದೆ ಎಂಬ ಹಲವಾರು ರೀತಿಯ ಪ್ರಶ್ನೆಗಳು ಜನರಲ್ಲಿ ಮೂಡುತ್ತದೆ. ಹಾಗಾದರೆ ಹಲ್ಲಿಯು ಯಾವ ರೀತಿಯ ಸಂಕೇತವನ್ನು ನೀಡುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಅದು ಅಶುಭವಾಗಿರುತ್ತದೆ ಎಂದು ಜನಗಳು ತಿಳಿದಿರುತ್ತಾರೆ, ಆದರೆ ಅದು ಸುಳ್ಳು, ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಅದು ಶುಭ ಸಂಕೇತವಾಗಿರುತ್ತದೆ. ಒಂದು ವೇಳೆ ಹಲ್ಲಿ ನೆಲದ ಮೇಲೆ ಓಡಾಡುತ್ತಿದ್ದರೆ ಮನೆಯ ಆರ್ಥಿಕ ಪರಿಸ್ಥಿತಿಯು ಇನ್ನಷ್ಟು ವೃದ್ಧಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಇದರ ಜೊತೆಗೆ ಧನ ಸಂಪತ್ತಿನ ವಿಷಯದಲ್ಲಿ ಆಕಸ್ಮಿಕವಾಗಿ ಲಾಭಗಳು ದೊರೆಯುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.
ಕೆಲವೊಂದು ಬಾರಿ ಹಲ್ಲಿಗಳು ನಾವು ನಡೆದುಕೊಂಡು ಬರುವಾಗ ಮುಂದೆ ಬೀಳುತ್ತವೆ, ಶಾಸ್ತ್ರಗಳ ಪ್ರಕಾರ ಹಲ್ಲಿಗಳು ನಿಮ್ಮ ಮುಂದೆ ಬಂದು ಬಿದ್ದರೆ ಹೆದರುವ ಅವಶ್ಯಕತೆ ಇಲ್ಲ, ಏಕೆಂದರೆ ಇವು ನಿಮ್ಮ ಜೀವನದಲ್ಲಿ ಬರುವ ಸಂಕಟ ದೂರವಾಗಿದೆ ಎಂಬುದನ್ನು ಸೂಚಿಸುತ್ತದೆ.
ಹಲ್ಲಿಯು ದೇವರಕೋಣೆಯಲ್ಲಿ ಇದ್ದರೆ ಅದು ಕೂಡ ಶುಭ ಸಂಕೇತವಾಗಿರುತ್ತದೆ. ಹಲ್ಲಿಯ ಶಬ್ದ ಕೇಳಿದಾಗ ಸಾಕಷ್ಟು ಬಾರಿ ಶುಭಸಮಾಚಾರ ನಿಮಗೆ ತಿಳಿಯುತ್ತದೆ, ಆದ್ದರಿಂದ ಹಲ್ಲಿಯ ಧ್ವನಿ ಕೇಳಿದಾಗ ಭಯಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ತಲೆಯ ಮೇಲೆ ಹಲ್ಲಿ ಬಿದ್ದರೆ ಅದು ಅಶುಭವಾಗಿರುತ್ತದೆ, ಆದ್ದರಿಂದ ಈ ರೀತಿ ಘಟನೆ ನಡೆದಾಗ ತಲೆಯಿಂದ ಸ್ನಾನವನ್ನು ಮಾಡಿ ದೇವರಿಗೆ ನಮಸ್ಕರಿಸಬೇಕು.