ವಿಟಮಿನ್ ಇ ಸಮೃದ್ಧವಾಗಿರುವ ಆಹಾರಗಳು,ನಮ್ಮ ಆರೋಗ್ಯಕ್ಕೆ ಪ್ರತಿಯೊಂದು ಪೋಷಕಾಂಶಗಳು ಅತೀ ಅಗತ್ಯ. ಉದಾಹರಣೆಗೆ ಪ್ರೋಟೀನುಗಳು, ಖನಿಜಾಂಶಗಳು ಹಾಗೂ ವಿಟಮಿನ್ಸ್‌ಗಳು ಇವುಗಳಲ್ಲಿ ಪ್ರಮುಖವಾಗಿವೆ.ಇವುಗಳಲ್ಲಿ ಒಂದು ಪೋಷಕಾಂಶಗಳ ಕೊರತೆ ಉಂಟಾದರೂ ಕೂಡ, ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ವಿಟಮಿನ್ ಇ ಇಂತಹ ಒಂದು ಅವಶ್ಯಕ ಪೋಷಕಾಂಶಗಳಲ್ಲಿ ಒಂದಾಗಿದೆ.
ಪ್ರಮುಖವಾಗಿ ಕಣ್ಣುಗಳು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ, ಈ ವಿಟಮಿನ್ಸ್‌ನ ಪಾತ್ರ ಮರೆಯುವ ಹಾಗಿಲ್ಲ. ಬನ್ನಿ ಈ ಲೇಖನದಲ್ಲಿ ವಿಟಮಿನ್ ಇ ಅಂಶ ಹೆಚ್ಚಿರುವ ಆಹಾರಗಳ ಬಗ್ಗೆ ನೋಡೋಣ…
ಅವಕಾಡೊ ಹಣ್ಣು–ಅವಕಾಡೊ ಹಣ್ಣು ಬೆಲೆಯಲ್ಲಿ ದುಬಾರಿಯಾದರೂ ಆರೋ ಗ್ಯಕ್ಕೆ ತುಂಬಾನೇ ಒಳ್ಳೆಯದು. ಪ್ರಮುಖವಾಗಿ ಈ ಹಣ್ಣಿನಲ್ಲಿ ಯೂ ಕೂಡ ವಿಟಮಿನ್ ಇ ಸಮೃದ್ಧ ಪ್ರಮಾಣದಲ್ಲಿ ಕಂಡು ಬರುತ್ತದೆ.
ತುಪ್ಪ-ಆಯುರ್ವೇದದ ತಜ್ಞರ ಪ್ರಕಾರ ತುಪ್ಪ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಪ್ರಮುಖವಾಗಿ ವಾತ ಮತ್ತು ಪಿತ್ತ ದೋಷ ವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಮುಖವಾಗಿ ತುಪ್ಪದಲ್ಲಿ ವಿಟಮಿನ್ ಎ, ಇ ಹಾಗೂ ಡಿ ಉನ್ನತ ಮಟ್ಟದಲ್ಲಿ ಕಂಡು ಬರುತ್ತದೆ
ಕುಂಬಳಕಾಯಿ ಬೀಜಗಳು–ಕುಂಬಳಕಾಯಿ ಬೀಜಗಳು ನೋಡಲು ಸಣ್ಣದಾಗಿರಬಹುದು! ಆದರೆ ಅಗಾಧ ಪ್ರಮಾಣದಲ್ಲಿ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಈ ಪುಟ್ಟ ಬೀಜದಲ್ಲಿಯೂ ಕೂಡ ವಿಟಮಿನ್ ಇ ಯಥೇಚ್ಛವಾಗಿ ಕಂಡು ಬರುತ್ತದೆ
ಸೂರ್ಯಕಾಂತಿ ಬೀಜಗಳು–ಸೂರ್ಯಕಾಂತಿ ಬೀಜಗಳು, ಕೂಡ ಅಷ್ಟೇ ನೋಡಲು ಸಣ್ಣದಾಗಿ ಕಂಡು ಬಂದರೂ, ಅಗಾಧ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಈ ಬೀಜಗಳಲ್ಲಿ ವಿಟಮಿನ್ ಇ ಅಂಶದ ಜೊತೆಗೆ ಜಿಂಕ್ ಹಾಗೂ ಸೆಲೆನಿಯಂ ಅಂಶ ಕೂಡ ಹೆಚ್ಚಾಗಿ ಕಂಡುಬರುತ್ತದೆ.
ಪಾಲಕ್ ಸೊಪ್ಪು–ಪಾಲಕ್ ಸೊಪ್ಪಿನ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ, ಈ ಸೊಪ್ಪಿನಲ್ಲಿ ವಿಟಮಿನ್ ಇ ಅಂಶ ಅಗಾಧ ಪ್ರಮಾಣದಲ್ಲಿ ಕಂಡು ಬರುತ್ತದೆ.
ಗೋಡಂಬಿ ಬೀಜಗಳು–ಗೋಡಂಬಿ ಬೀಜಗಳು ಬೆಲೆಯಲ್ಲಿ ದುಬಾರಿಯಾದರೂ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಪ್ರಮುಖವಾಗಿ ಗೋಡಂಬಿ ಬೀಜಗಳಲ್ಲಿಯೂ ಕೂಡ ಅಷ್ಟೇ, ಪ್ರೋಟೀನ್, ನಾರಿನಾಂಶ, ಖನಿಜಾಂಶಗಳ ಜೊತೆಗೆ ವಿಟಮಿನ್ ಇ ಅಂಶ ಕೂಡ ಹೆಚ್ಚಾಗಿ ಕಂಡು ಬರುತ್ತದೆ
ಬಾದಾಮಿ ಬೀಜಗಳು–ಬಾದಾಮಿಗಳಲ್ಲಿ ವಿಟಮಿನ್ ಇ ಸಮೃದ್ದ ಪ್ರಮಾಣದಲ್ಲಿದೆ. ಈ ವಿಟಮಿನ್ ಇ ನಮ್ಮ ತ್ವಚೆಗೆ ಹಾಗೂ ಕೂದಲಿನ ಪೋಷಣೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ.