ಪೂಜೆ ಮಾಡುವಾಗ ನಮಗೆ ಕಣ್ಣೀರು ಬರುವುದು, ಪದೇ ಪದೇ ಆಕಳಿಕೆ ಬರುವುದು, ಇತ್ಯಾದಿ ಅನುಭವವಾಗುತ್ತದೆ. ಯಾಕೆ ಹೀಗೆ ಆಗುತ್ತದೆ. ಏನಿದರ ಸೂಚನೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಪೂಜೆ ಮಾಡುವಾಗ ಅದಕ್ಕೆ ತಕ್ಕ ನಿಯಮವನ್ನ ಅನುಸರಿಸಿ, ಭಕ್ತಿಯಿಂದ ಪೂಜೆ ಮಾಡಿದರೆ ಪೂಜಾ ಫಲ ದೊರೆಯುತ್ತದೆ. ಒಲ್ಲದ ಮನಸ್ಸಿನಿಂದ ಪೂಜೆ ಮಾಡುವುದು ವ್ಯರ್ಥ. ಅಂತೆಯೇ ಪೂಜೆಗೆ ಕುಳಿತಾಗ ಪೂಜೆ ಮಾಡಲು ಮನಸ್ಸಾಗದಿರುವುದು, ಬೇಸರವಾಗುವುದು, ಕಣ್ಣೀರು ಬರುವುದು, ನಿದ್ದೆ ಬರುವುದು ಇತ್ಯಾದಿ ಸಮಸ್ಯೆಗಳಾಗುತ್ತದೆ. ಇದಕ್ಕೆ ಕಾರಣವೇನಂದ್ರೆ, ನಿಮ್ಮ ಸುತ್ತ ಮುತ್ತಲು ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ.
ಹೌದು, ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿದ್ರೆ, ಅಂಥ ಜಾಗದಲ್ಲಿ ದೇವರ ಪೂಜೆಗೆ ವಿಘ್ನ ಉಂಟಾಗುತ್ತದೆ. ಪೂಜೆ ಮಾಡುವವರ ಧ್ಯಾನ ಬೇರೆಡೆ ಸೆಳೆಯುತ್ತದೆ. ನೆಮ್ಮದಿ ಇಲ್ಲದೇ, ಎಲ್ಲದರಲ್ಲೂ ಆಲಸ್ಯ ತೋರಿಸುವಂತಾಗುತ್ತದೆ.
ಇನ್ನು ಸಾವನ್ನಪ್ಪಿದ ಮನೆ ಜನರಿಗೆ ನೈವೇದ್ಯ ಇಡುವುದನ್ನು ನಿಲ್ಲಿಸಿದರೂ ಕೂಡ, ಈ ರೀತಿಯಾಗುತ್ತದೆ. ಇನ್ನು ಪೂಜೆ ಮಾಡುವಾಗ ಮನಸ್ಸಿನಲ್ಲಿ ಬೇರೆಯವರ ಬಗ್ಗೆ ಕೇಡು ಬಯಸುವ ರೀತಿ ಯೋಚನೆ ಬರುತ್ತದೆ. ಕೋಪವಿರುವವ ಮೇಲೆ ಸೇಡು ತೀರಿಸಿಕೊಳ್ಳುವ ಆಲೋಚನೆ ಬರುತ್ತದೆ. ಇಂಥ ಸಮಯದಲ್ಲಿ ನೀವು ತಾಳ್ಮೆಯಿಂದ ಭಕ್ತಿಯಿಂದ ಪೂಜೆ ಮಾಡಬೇಕು. ಯಾಕಂದ್ರೆ ಇದು ದೇವರು ನಿಮ್ಮನ್ನು ಪರೀಕ್ಷಿಸುವ ವೇಳೆಯಾಗಿರುತ್ತದೆ.
ಪೂಜೆ ವೇಳೆ ಸಿಟ್ಟು ಮಾಡುವುದಾಗಲಿ, ಬೇರೆಯವರ ಬಗ್ಗೆ ಕೆಟ್ಟ ಯೋಚನೆ ಮಾಡುವುದಾಗಲಿ ಮಾಡಿದ್ರೆ, ನಿಮ್ಮ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳನ್ನ ಎದುರಿಸಬೇಕಾಗುತ್ತದೆ. ಇವೆಲ್ಲದ್ದಕ್ಕೂ ಪರಿಹಾರ ಅಂದ್ರೆ ಧ್ಯಾನ. ಧ್ಯಾನ ಮಾಡಿದ್ರೆ ಮನಸ್ಸಿಗೆ ನೆಮ್ಮದಿ ಇರುತ್ತದೆ. ಯಾರ ಬಗ್ಗೆಯೂ ಕೆಟ್ಟ ಯೋಚನೆ ಬರುವುದಿಲ್ಲ.